ರಕ್ತದಾನ ಮಾಡಿ ಜೀವ ಉಳಿಸಿ ಇನ್ನೂಂದು ಜೀವ ಉಳಿಸುವದಕ್ಕೇ ಕಾರಣ ಕರ್ತರಾಗಿ. ಗ್ರಾ.ಪಂ.ಅಧ್ಯಕ್ಷ ಮಮತಾಜ್ ಬಿ
ಯಲಬುರ್ಗಾ : ಇಂದಿನ ಎಲ್ಲಾ ಯುವಕರು ಸ್ವಯಂ ಪ್ರೇಯರೀತರಾಗಿ ಬಂದು ರಕ್ತ ದಾನ ಮಾಡಿ ಇನ್ನೂಂದು ಜೀನ ಉಳಿಸುವದಕ್ಕೇ ಕಾರಣ ಕರ್ತರಾಗಬೇಕು ತಂಬಾಕು . ಮದ್ಯ ವ್ಯಸನಿಗಳಿಗೆ ಯಾವುದೇ ದುಶ್ಚಟಗಳಿಗೆ ಬಲಿಯಾಗದೆ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮಮತಾಜ್ ಬಿ ಹಿರೇಮನಿ ಅವರು ಹೇಳಿದರು.
ತಾಲೂಕಿನ ಮುಧೋಳ ಗ್ರಾಮದಲ್ಲಿ ದಸರಾ ಮಹೋತ್ಸವದ ಅಂಗವಾಗಿ ರೆಡ್ ಕ್ರಾಸ್ ಸಂಸ್ಥೆ ಕೊಪ್ಪಳ ಇವರ ವತಿಯಿಂದ ಗ್ರಾಮ ಪಂಚಾಯಿತಿ ಮುಧೋಳ ಗ್ರಾಮದ ಹಾಗೂ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಬಸವ ಜ್ಯೋತಿ ಶಿಕ್ಷಣ ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಇವರ ಸಹಯೋಗದೊಂದಿಗೆ ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನದ ಸಭಾಭವನದಲ್ಲಿ ನಡೆದ ಉಚಿತ ನೇತ್ರ ತಪಾಸಣೆ ಮತ್ತು ಸ್ವಯಂ ಪ್ರೇರಿತರಾಗಿ ರಕ್ತದಾನ ಶಿಬಿರದ ಉದ್ಘಾಟನೆ ವಹಿಸಿ ಮಾತನಾಡಿದರು. ಗ್ರಾಮದ ಪ್ರತಿಯೊಬ್ಬರು ರಕ್ತದಾನ ಮಾಡುವುದರಿಂದ ಹೃದಯಾಘಾತ ತಪ್ಪಿಸಬಹುದು. ಅಲ್ಲದೇ ಮತ್ತೊಂದು ಜೀವ ಉಳಿಸಲು ಸಹಾಯಕವಾಗುತ್ತದೆ. ಭಯಪಡದೇ ಎಲ್ಲರೂ ರಕ್ತದಾನ ಮಾಡಲು ಮುಂದೆ ಬರಬೇಕು ಎಂದು ಸಲಹೆ ನೀಡಿದರು. ಎಮ್ ಎಮ್ ಜೋಶಿ ಕಣ್ಣಿನ ಆಸ್ಪತ್ರೆ ಕೊಪ್ಪಳ ಮುಧೋಳ ಗ್ರಾಮದಲ್ಲಿ 100 ಜನರ ಉಚಿತ ನೇತ್ರ ಪರೀಕ್ಷೆ ಮಾಡಲಾಯಿತು. 40 ಜನರಿಗೆ ಕನ್ನಡಕ ಸಿಫಾರಸ್ಸು ಮಾಡಲಾಗಿದೆ, 30 ಜನರಿಗೆ ಶಸ್ತ್ರ ಚಿಕಿತ್ಸೆ ಮಾಡಲಾಗುವುದು ಎಂದರು, 23 ಜನ ರಕ್ತದಾನ ಮಾಡಿದರು, ಬಾಷುಸಾಬ್ ಅವರು 6ನೇ ಬಾರಿ ರಕ್ತ ದಾನ ಮಾಡಿದರು, ಹಾಗೂ ಉಚಿತವಾಗಿ ಬಿಪಿ ಮಧು ಮೇಹ ಪರೀಕ್ಷೆ ಮಾಡಿಸಲಾಯಿತು. ರೆಡ್ ಕ್ರಾಸ್ ತಾಲೂಕ ಘಟಕ ನಿರ್ದೇಶಕರಾದ ಶಿವಶರಣಪ್ಪ ಬಳಿಗಾರ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಗ್ರಾಮದ ಮುಖಂಡರು ಯಲ್ಲಪ್ಪ ಹುನಗುಂದ, ಶಿವಪ್ಪ ಸೂಡಿ, ಮಾಜಿ ಗ್ರಾಂ ಪಂ ಸದಸ್ಯ ಸುರೇಶ ಹುನಗುಂದ, ಬಸವರಾಜ್ ಗುದಗಿ, ಹಾಗೂ ದೇವೇಂದ್ರಪ್ಪ ಹಿಟ್ನಾಳ್ ಸಾರ್ವಜನಿಕ ಸಂಪರ್ಕ ಅಧಿಕಾರಿಗಳು ಕೊಪ್ಪಳ
ಪ್ರಾಥಮಿಕ ಅರೋಗ್ಯ ಇಲಾಖೆ ಗುರುಸಿದ್ದನಗೌಡರ, ಅಂಜುಮ ಬೇಗಮ್, ಶಾರದಾ ಬಿಳೆಕಲ್, ರವಿ, ಗ್ರಾಮ ಅರೋಗ್ಯ ಕಾರ್ಯಕ್ರಮದ ತಾಲೂಕ ಸಂಯೋಜಕರು ಸಿಂಧು ಮಡಿವಾಳರ, ಆಶಾ ಕಾರ್ಯಕರ್ತೆಯರಾದ ಅಕ್ಕಮ್ಮ ದೇವಕ್ಕ ಮೀನಾಕ್ಷಿ ಶಕುಂತಲಾ ಶೋಭಾ ಸುನಂದಾ ಗೌರಮ್ಮ ಶಾಂತ ಮತ್ತು ಇತರರು ಭಾಗವಹಿಸಿದರು
