
ರೈತರು ಬೀಜೋಪಚಾರದ ಪದ್ಧತಿ ಅಳವಡಿಸಿಕೊಳ್ಳಿ : ಎಂ.ದಯಾನಂದ್
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 28- ಆಧುನಿಕ ಬೇಸಾಯದ ಪದ್ಧತಿಯಲ್ಲಿ ಒಂದಾದ ಬೀಜೋಪಚಾರದ ಪದ್ಧತಿಯನ್ನು ತಪ್ಪದೇ ಪಾಲಿಸಬೇಕೆಂದು ಕೃಷಿ ಇಲಾಖೆಯ, ಸಹಾಯ ಕೃಷಿ ನಿರ್ದೇಶಕರು ಎಮ್ ದಯಾನಂದ್ ಹೇಳಿದರು.
ತಮ್ಮ ಕಚೇರಿಯಲ್ಲಿ ನಾಗರಿಕ ಪತ್ರಿಕೆಯ ಹಿರಿಯ ವರದಿಗಾರರ ಜೊತೆಗೆ ಹೊಸ ಬೇಸಾಯದ ಪದ್ಧತಿ ಅಂಶಗಳ ಕುರಿತು ವಿವರವಾಗಿ ಮಾಹಿತಿ ನೀಡಿದರು. ಈಗಾಗಲೇ ಬಳ್ಳಾರಿ ತಾಲೂಕ ವ್ಯಾಪ್ತಿಯಲ್ಲಿ 140 ಮಿಲಿ ಮೀಟರ್ ಮಳೆ ಆಗಿರುವುದಾಗಿ, ಕೃಷಿಕಾರರು ತಮ್ಮ ಹೊಲಗಳಲ್ಲಿ, ತೊಗರಿ ಹತ್ತಿ ಸಜ್ಜೆ ಶೇಂಗಾ ಸೂರ್ಯಕಾಂತಿ ಮೊದಲಾದ ಬೆಳೆಗಳನ್ನು ಹಾಕಲಾಗಿದೆ ಎಂದು ತಿಳಿಸಿದರು.
ಸುಮಾರು 250, ಹೆಕ್ಟರ್ ಭೂಮಿಯಲ್ಲಿ ತೊಗರಿ, 50 ಹೆಕ್ಟರಲ್ಲಿ ಹತ್ತಿ, 40 ಹೆಕ್ಟರ್ಗಳಲ್ಲಿ,ಸಜ್ಜೆ, 40 ಹೆಕ್ಟರಲ್ಲಿ ಶೇಂಗಾ, 35 ಹೆಕ್ಟರಲ್ಲಿ ಸೂರ್ಯಕಾಂತಿ ಸಾಗುವಳಿ ಮಾಡಿರುವುದಾಗಿ ತಿಳಿಸಿದರು.
37 ಸಾವಿರ 178 ಹೆಕ್ಟರ್ ಗಳಲ್ಲಿ ನಾನಾ ರೀತಿಯ ಬೆಳೆಗಳ ಸಾಗುವಳಿ ಉದ್ದೇಶವಿರುವುದಾಗಿ ತಿಳಿಸಿದರು.
ತಾಲೂಕ ವ್ಯಾಪ್ತಿಯಲ್ಲಿ ಕೃಷಿ ಹೊಂಡ ನಿರ್ಮಾಣಕ್ಕಾಗಿ ರಾಜ್ಯ ಸರ್ಕಾರ ರೈತರನ್ನು ಪ್ರೋತ್ಸಾಹಿಸುತ್ತಿರುವುದಾಗಿ ತಿಳಿಸಿದರು. ಇಂದಿನ ಕಾಲಮಾನದಲ್ಲಿ ಪ್ರತಿ ರೈತರು ತಪ್ಪದೆ ಬೆಳೆ ವಿಮೆ ಮಾಡಿಸಲು ಸಲಹೆ ನೀಡಿದರು.
ಬೀಜೋಪಚಾರದಿಂದ ಕೂಡಿದ ಬಿತ್ತನೆಯನ್ನು ಬೆಳೆಗಳ ಸಾಲಿನಲ್ಲಿ ಅಂತರವನ್ನು ಪಾಲಿಸಿ ಸಾಗುವಳಿ ಮಾಡಿದರೆ, ಉತ್ತಮ ಬೆಳೆಯನ್ನು ರೈತರು ಪಡೆಯಬಹುದು ಎಂದು ಹೇಳಿದರು. ತಾವು ಈಗಾಗಲೇ ತಾಲೂಕ ವ್ಯಾಪ್ತಿಯಲ್ಲಿ ಪ್ರತಿ ಗ್ರಾಮವನ್ನು ಸಂಚರಿಸಿ ರೈತರಿಗೆ ಬೇಕಾದ ಮಾಹಿತಿ ನೀಡುವುದರ ಜೊತೆಗೆ ಸೂಚನೆಗಳನ್ನು ಹೇಳಿರುವದಾಗಿ ತಿಳಿಸಿದರು.
ಪ್ರಸ್ತುತ ಕೃಷಿ ವರ್ಷದ ಅವಧಿಯಲ್ಲಿ ಅತಿ ಹೆಚ್ಚಿನ ಮಳೆಯನ್ನು ಈ ವರ್ಷ ಪಡೆಯಬಹುದು ಎಂದು ಆಶಾಭಾವ ವ್ಯಕ್ತ ಮಾಡಿದರು.
ಅನ್ನದಾತರು ಕೃಷಿ ಅಧಿಕಾರಿಗಳು ನೀಡುವ ಸಲಹಾ ಮತ್ತು ಸೂಚನೆಗಳನ್ನು ಪಾಲಿಸಿದರೆ ನಷ್ಟಗಳಿಗೆ ದೂರವಾಗಬಹುದು ಎಂದು ಅಭಿಪ್ರಾಯಪಟ್ಟರು.