WhatsApp Image 2024-04-15 at 5.10.31 PM

ರೈಲ್ವೆ ನಿಲ್ದಾಣದಲ್ಲಿ ವೃದ್ದೆ ಕಾಣೆ : ಪ್ರಕರಣ ದಾಖಲು

ಕರುನಾಡ ಬೆಳಗು ಸುದ್ದಿ

ವಿಜಯನಗರ, 17- ಕೆ.ದೇವಿಬಾಯಿ ಅವರು ಕಾಣೆಯಾದ ಬಗ್ಗೆ ಬಳ್ಳಾರಿ ರೈಲ್ವೆ ಪೊಲೀಸ್ ಠಾಣೆಯ ಗುನ್ನೆ ನಂ:09/2024 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಕಾಣೆಯಾದ ಮಹಿಳೆ ಅಂದಾಜು 70 ವರ್ಷ ವಯೋಮಾನದವರಾಗಿದ್ದು, 5.4 ಅಡಿ ಎತ್ತರ, ಬಿಳಿ ಕೂದಲು, ಬಿಳಿ ಮೈಬಣ್ಣ, ಕೋಲುಮುಖ, ಸಾಧರಣ ಮೈಕಟ್ಟು, ಪಿಂಕ್ ಸೀರೆ ಧರಿಸಿರುತ್ತಾರೆ. ಹಿಂದಿ ತೆಲುಗು ಭಾಷೆ ಮಾತನಾಡುತ್ತಾರೆ.

ಬಳ್ಳಾರಿ ರೈಲು ನಿಲ್ದಾಣದಲ್ಲಿ ಕೆ ದೇವಿಬಾಯಿ ಇವರು 10-04-2024ರಂದು ರಾತ್ರಿ 8 ಗಂಟೆ ಸಮಯದಲ್ಲಿ ರೈಲುಗಾಡಿ ಮೂಲಕ ರೈಲುಗಾಡಿ ಸಂಖ್ಯೆ: 07335 ಬೆಳಗಾವಿ-ಭದ್ರಚಾಲಂ ಎಕ್ಸಪ್ರೆಸ್ ರೈಲುಗಾಡಿ ಮೂಲಕ ತಾಂಡೂರಿಗೆ ಹೋಗಲು ಬಳ್ಳಾರಿ ರೈಲ್ವೆ ನಿಲ್ದಾಣದ ವೇದಿಕೆ ನಂ 02ರಲ್ಲಿ ಕಾಣೆಯಾಗಿದ್ದಾರೆ ಎಂದು ದೂರು ದಾಖಲಾಗಿರುತ್ತದೆ.

ಕಾಣೆಯಾದ ಈ ಮಹಿಳೆಯ ಬಗ್ಗೆ ಮಾಹಿತಿ ಕಂಡುಬAದಲ್ಲಿ ಬಳ್ಳಾರಿ ರೈಲ್ವೆ ಪಿ.ಎಸ್ ದೂ.ಸಂ: 08392-276063, ಮೊ.ನಂ 9480802131, ಇ-ಮೇಲ್ bellaryrly@ksp.gov.inಗೆ ಅಥವಾ ಬೆಂಗಳೂರು ರೈಲ್ವೇ ಕಂಟ್ರೋಲ್ ರೂಂ ಇ-ಮೇಲ್ : dcrly@ksp.gov.inಗೆ ಮಾಹಿತಿ ನೀಡುವಂತೆ ಬಳ್ಳಾರಿ ರೈಲ್ವೆ ಪೊಲೀಸ್ ಠಾಣೆಯ ಠಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!