
ರೈಲ್ವೆ ಮೇಲ್ಸೇತುವೆ ಕಾಮಗಾರಿ ಸ್ಥಳಕ್ಕೆ ಶಾಸಕ ಹೆಚ್.ಆರ್.ಗವಿಯಪ್ಪ ಭೇಟಿ
ಕರುನಾಡ ಬೆಳಗು ಸುದ್ದಿ
ವಿಜಯನಗರ, 27- ಶಾಸಕರಾದ ಹೆಚ್.ಆರ್.ಗವಿಯಪ್ಪ ಅವರು ಜೂನ್ 27ರಂದು ನಗರ ಸಂಚಾರ ಕೈಗೊಂಡು ನಾನಾ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದರು.
ಹೊಸಪೇಟೆಯ ಅನಂತಶಯನ ಗುಡಿ ಹತ್ತಿರ ನಡೆಯುತ್ತಿರುವ ರೈಲ್ವೆ ಮೇಲ್ಸೇತುವೆ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಈ ಕಾಮಗಾರಿಗೆ ಸಂಬಂಧಿಸಿದಂತೆ ಹೆಚ್ಚಿನ ಮೊತ್ತದ ಪರಿಹಾರಕ್ಕೆ ಮತ್ತು ಬೇರೆ ಸ್ಥಳದಲ್ಲಿ ಸೂಕ್ತ ವಸತಿ ಜಾಗ ಕಲ್ಪಿಸಬೇಕು ಎನ್ನುವ ಅಲ್ಲಿನ ನಿವಾಸಿಗಳ ಬೇಡಿಕೆಗಳ ಬಗ್ಗೆ ಇದೆ ವೇಳೆ ಶಾಸಕರು ಅಲ್ಲಿನ ನಿವಾಸಿಗಳೊಂದಿಗೆ ಸುಧೀರ್ಘ ಚರ್ಚಿಸಿದರು.
ಈ ವೇಳೆ ಮಾತನಾಡಿದ ಶಾಸಕರು, ಸ್ಥಳೀಯ ನಿವಾಸಿಗಳ ಬೇಡಿಕೆಗಳಾದ ಹೆಚ್ಚಿನ ಮೊತ್ತದ ಪರಿಹಾರ ಮತ್ತು ಈ ಕಾಮಗಾರಿಯಿಂದ ತೊಂದರೆ ಆಗುವ ನಿವಾಸಿಗಳಿಗೆ ಬೇರೆ ಸ್ಥಳದಲ್ಲಿ ಸೂಕ್ತ ವಸತಿ ಜಾಗ ಕಲ್ಪಿಸುವ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚಿಸಿ ಸೂಕ್ತ ಪರಿಹಾರ ದೊರಕಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಸಹಾಯಕ ಆಯುಕ್ತರಾದ ಮಹಮ್ಮದ್ ಅಲಿ ಅಕ್ರಮ ಷಾಹ, ಭೂ ದಾಖಲೆಯ ಅಧಿಕಾರಿಗಳು ಮತ್ತು ಸ್ಥಳೀಯರು ಇದ್ದರು.