WhatsApp Image 2024-04-12 at 5.11.35 PM

ಕೊಪ್ಪಳ ಲೋಕಸಭಾ ಚುನಾವಣೆ ಬಿಜೆಪಿಯಿಂದ ಮಂಗಳೂರಲ್ಲಿ ಮಹಾಶಕ್ತಿ ಕೇಂದ್ರಗಳ ಬಹಿರಂಗ ಸಭೆ

ಕರುನಾಡ ಬೆಳಗು ಸುದ್ದಿ

ಕುಕನೂರು, 12- ಕೊಪ್ಪಳ ಲೋಕಸಭೆಗೆ ಸ್ಪರ್ಧೆ ಮಾಡಿರುವ ರಾಜಶೇಖರ ಹಿಟ್ನಾಳ ಅವರನ್ನು ಬಿಜೆಪಿ ಅವರು ಸೋಲಿಸುವದು ಬೇಕಾಗಿಲ್ಲ, ಯಲಬುರ್ಗಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಶಾಸಕ ಬಸವರಾಜ ರಾಯರೆಡ್ಡಿ ಅವರೆ ಸೋಲಿಸಿ ಬಿಡುತ್ತಾರೆ ಎಂದು ಗಂಗಾವತಿ ಶಾಸಕ ಜಿ.ಜನಾರ್ಧನ ರೆಡ್ಡಿ ವೆಂಗ್ಯವಾಡಿದರು.

ತಾಲೂಕಿನ ಮಂಗಳೂರು ಗ್ರಾಮದ ಶ್ರೀಮಂಗೇಶ್ವರ ಮಂಟಪದ ಆವರಣದಲ್ಲಿ ನಡೆದ ಶುಕ್ರವಾರ ನಡೆದ ಕೊಪ್ಪಳ ಲೋಕಸಭಾ ಚುನಾವಣೆ ಅಂಗವಾಗಿ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರ ಮಹಾಶಕ್ತಿ ಕೇಂದ್ರಗಳ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಯಲಬುರ್ಗಾ ತಾಲೂಕಿಗೆ ೧೫ ವರ್ಷಗಳ ಹಿಂದೆ ಪ್ರಚಾರಕ್ಕೆ ಬಂದು ೨೦೦೮ರಲ್ಲಿ ಈಶಣ್ಣ ಗುಳಗಣ್ಣವರ್ ಅವರ ಪರವಾಗಿ ಪ್ರಚಾರಕ್ಕೆ ಬಂದಿರುವಾಗ ಈಗ ಅವರ ಪುತ್ರ ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣವರ್ ಅವರ ಮಾತುಗಳಲ್ಲಿ ಕಾಣುತ್ತೀದ್ದೇನೆ. ಬಿಜೆಪಿ ಪಕ್ಷವನ್ನು ಕಟ್ಟಿಬೆಳೆಸಿದವರು ಈಶಣ್ಣ ಗುಳಗಣ್ಣವರ್. ಯಲಬುರ್ಗಾ ಕ್ಷೇತ್ರದ ಶಾಸಕ ಬಸವರಾಜ ರಾಯರೆಡ್ಡಿ ಅವರು ಈ ಬಾರಿ ವಿಧಾನ ಸಭೆಯ ಚುನಾವಣೆಯಲ್ಲಿ ಮಂತ್ರಿಆಗಬೇಕೆAದು ಗೆದ್ದಿದ್ದಾರೆ. ಆದರೆ ಮಂತ್ರಿಸ್ಥಾನ ಸಿಗದಿದ್ದಕ್ಕೆ ವಿಧಾನಸಭೆ ಕಲಾಪ ನಡೆಯುವಾಗ ಪ್ರತಿ ವಿಷಯಕ್ಕೂ ಗಲಾಟೆ ಮಾಡುತ್ತಾನೆ ಇರುತ್ತಾರೆ. ಮುಖ್ಯಮಂತ್ರಿ ಅವರಿಗೆ ಕಸಿವಿಸಿ ಆಗುವಂತೆ ಮಾಡುತ್ತೀದ್ದರು. ರಾಯರೆಡ್ಡಿ ಅವರ ಟಾರ್ಗೆಟ್ ಶಿವರಾಜ ತಂಗಡಗಿ, ಅವರನ್ನು ಕೇಳಗಿಳಿಸಬೇಕು ಎನ್ನುವ ವಿಚಾರವಿದೆ. ಬಿಜೆಪಿಯಿಂದ ಡಾ.ಬಸವರಾಜ ಅವರ ಸಮಾಜ ಸೇವೆಯನ್ನು ಗುರುತಿಸಿ ಲೋಕಸಭೆಗೆ ಟಿಕೇಟ್ ನೀಡಿದೆ. ಕಾಂಗ್ರೆಸ್ ಅಭ್ಯರ್ಥಿಗಳು ಕೊಪ್ಪಳದಲ್ಲಿ ಕುಳಿತು ಮೈಂಡ್ ಗೆಮ್ ಆಡುತ್ತೀದ್ದಾರೆ. ಮಂಗಳೂರು ಸಭೆ ನೋಡಿದರೆ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಅವರಿಗೆ ಡಿಪಾಜಿಟ್ ಕಳೆದುಕೊಳ್ಳುತ್ತಾರೆ.

ತಂಗಡಗಿಗೆ ಸೇಂಕೆಡ್ ಟೈಮ್ ಸಾಕು : ಶಿವರಾಜ ತಂಗಡಿ ಅವರು ದೇಶದ ಪ್ರಧಾನಿ ಅವರ ಬಗ್ಗೆ ಹಗುರವಾಗಿ ಮಾತನಾಡುತ್ತಾರೆ. ಮೋದಿ ಎಂದು ಕರೆದವರಿಗೆ ಕಪಾಳಕ್ಕೆ ಹೊಡೆಯಿರಿ ಎಂದು ಹೇಳುವ ಶಿವರಾಜ ತಂಗಡಗಿ ಅವರು ಕುರಿಸಿ ಕಪಾಳಕ್ಕೆ ಹೋಡೆಯಲು ಒಂದು ಸೇಕೆಂಡ್ ಕೂಡ ಟೈಮ್ ಆಗೋದಿಲ್ಲ. ಪ್ರಧಾನಿ ಮೋದಿ ಬಗ್ಗೆ ಹಗುರ ಮಾತು ನಿಲ್ಲಿಸಿ. ಡಾ. ಬಸವರಾಜ ಅವರಿಗೆ ಪ್ರತಿಯೊಬ್ಬರು ಬಿಜೆಪಿಗೆ ಮತ ಹಾಕುವ ಮೂಲಕ ತಂಗಡಗಿ ಕಪಾಳಕ್ಕೆ ಹೊಡೆದಂತೆ ಎಂದು ಭಾವಿಸಿ ಮತವನ್ನು ಚಲಾಯಿಸಿ ಎಂದು ಹೇಳಿದರು.

ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ್ ಮಾತನಾಡಿ, ಯಲಬುರ್ಗಾ ಕ್ಷೇತ್ರದಲ್ಲಿ ಹಾಲಪ್ಪ ಆಚಾರ್ ಅವರು ನೀರಾವರಿಗಾಗಿ ಕೆರೆ ತುಂಬಿಸುವ ಕೆಲಸ ಮಾಡಿದ್ದಾರೆ. ಶಾಸಕ ಬಸವರಾಜ ರಾಯರೆಡ್ಡಿ ಅವರು ತಮ್ಮ ರಾಜಕೀಯ ಲಾಭಕ್ಕಾಗಿ ಏನು ಬೇಕಾದರು ಮಾಡುತ್ತಾರೆ. ಲೋಕಸಭೆ ಚುನಾವಣೆಯಲ್ಲಿ ಕ್ಷೇತ್ರದ ಮತದಾರರು ದೇಶದ ರಕ್ಷಣೆ, ಭದ್ರತೆಗಾಗಿ ಡಾ.ಬಸವರಾಜ ಅವರಿಗೆ ಮತವನ್ನು ನೀಡಬೇಕೆಂದು ಮನವಿ ಮಾಡಿದರು.

ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣವರ್ ಮಾತನಾಡಿ, ೨೦೧೪ರಲ್ಲಿ ಯುಪಿ ಸರಕಾರ ಮಾಡಿರುವಂತಹ ಭ್ರಷ್ಟಚಾರದಿಂದ ದೇಶದ ಜನರು ಮೋದಿ ಅವರಿಗೆ ಪ್ರಧಾನಿಯನ್ನಾಗಿ ಮಾಡಿದರು. ೨೦೧೪ರಿಂದ ೨೦೨೪ರ ವರೆಗೆ ೧೦ ವರ್ಷದಲ್ಲಿ ಅನೇಕ ಅಭಿವೃದ್ಧಿ ಕೆಲಸಗಳಾಗಿವೆ. ೧೦ ವರ್ಷ ಆಡಳಿತ ಸುವರ್ಣ ಅಕ್ಷರದಲ್ಲಿ ಬರೆದಿಡುವಂತಹ ಕಾಲವಾಗಿದೆ. ಕರೋನಾ ದಲ್ಲಿ ದೇಶವನ್ನು ರಕ್ಷಣೆ ಮಾಡಿದ್ದಾರೆ. ದೇಶದ ಮಹಿಳೆಯರಿಗಾಗಿ ೧೦ ಕೋಟಿ ಶೌಚಾಲಯವನ್ನು ಕಟ್ಟಿಸಿಕೊಟ್ಟಿದ್ದಾರೆ. ಪ್ರಧಾನಿ ಮೋದಿ ಅವರ ಆಡಳಿತದಲ್ಲಿ ೨೫ ಕೋಟಿ ಜನರನ್ನು ಬಡತನದ ರೇಖೆಗಿಂತ ಹೊರತಂದಿದ್ದಾರೆ. ಕಾಂಗ್ರೆಸ್‌ನವರು ಜಾತಿಭೇದ ಮಾಡುತ್ತಾರೆ. ಮೋದಿ ನನ್ನ ದೇಶದ ಪ್ರಜೆಗಾಗಿ ಕೆಲಸವನ್ನು ಮಾಡುತ್ತಾರೆ ಎಂದು ಹೇಳಿದರು.

ಮೆರವಣಿಗೆ : ಲೋಕಸಭೆಯ ಚುನಾವಣೆಯ ಅಂಗವಾಗಿ ಬಿಜೆಪಿ ಅಭ್ಯರ್ಥಿ ಡಾ.ಬಸವರಾಜ, ಶಾಸಕ ಜನಾರ್ಧನರೆಡ್ಡಿ, ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಗುಳಣ್ಣನವರ್, ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಬಸವರಾಜ ಗೌರಾ ಅವರನ್ನು ಪಕ್ಷದ ಕಾರ್ಯಕರ್ತರು ತೆರೆದ ವಾಹನದಲ್ಲಿ ಅದ್ದೂರಿಯಾಗಿ ಮೆರವಣಿಗೆ ಮೂಲಕ ವೇದಿಕೆಗೆ ಕರೆ ತಂದರು.

ಕೊಪ್ಪಳ ಲೋಕಸಭಾ ಬಿಜೆಪಿ ಅಭ್ಯರ್ತಿ ಡಾ.ಬಸವರಾಜ, ಕನಕಗಿರಿ ಮಾಜಿ ಶಾಸಕ ಬಸವರಾಜ ದಡೇಸ್ಗೂರು, ಬಿಜೆಪಿ ವಕ್ತಾರ ವೀರಣ್ಣ ಹುಬ್ಬಳ್ಳಿ, ಜೆಡಿಎಸ್ ಜಿಲ್ಲಾ ವಕ್ತಾರ ಮಲ್ಲನಗೌಡ ಕೋನನಗೌಡ್ರ ಮಾತನಾಡಿದರು. ಮಾಜಿ ಸಚಿವ ಹಾಲಪ್ಪ ಆಚಾರ್, ಬಿಜೆಪಿ ಯಲಬುರ್ಗಾ ಮಂಡಲದ ಅಧ್ಯಕ್ಷ ಮಾರುತಿ ಗಾವರಾಳ, ಜೆಡಿಎಸ್ ಅಧ್ಯಕ್ಷ ಬಸವರಾಜ ಗುಳಗುಳಿ, ಬಸಲಿಂಗಪ್ಪ ಭೂತೆ, ನಾಗರಾಜ ಬಿಲ್ಗಾರ್, ಶಿವಶಂಕರ್ ದೇಸಾಯಿ, ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಬಸವರಾಜ ಗೌರಾ, ವಿಶ್ವನಾಥ ಮರಿಬಸಪ್ಪನವರ್, ಸುರಪುರ ವಕೀಲರು, ತಾ.ಪಂ ಮಾಜಿ ಉಪಾಧ್ಯಕ್ಷ ಕಳಕಪ್ಪ ಕಂಬಳಿ, ಬಸವನಗೌಡ ತೊಂಡಿಹಾಳ, ಸಿ.ಎಸ್ ಪಾಟೀಲ್, ಅಯ್ಯನಗೌಡ ಕೆಂಚಮ್ಮನವರ್ ಸೇರಿದಂತೆ ಪಕ್ಷದ ಕಾರ್ಯಕರ್ತರು, ಗ್ರಾಮಸ್ಥರು ಹಾಗೂ ಮಹಿಳೆಯರು ಇದ್ದರು.

Leave a Reply

Your email address will not be published. Required fields are marked *

error: Content is protected !!