2fc90fc9-2da4-47a4-aff9-c439a233b7fd

ಲೋಕಸಭಾ ಚುನಾವಣೆ : 5 ಅಭ್ಯರ್ಥಿಗಳಿಂದ ನಾಮಪತ್ರಗಳ

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 16- ಲೋಕಸಭಾ ಚುನಾವಣೆ-2024ರ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ನಲಿನ್ ಅತುಲ್ ಅವರು ನಾಮ ಪತ್ರ ಸಲ್ಲಿಕೆಯ ಮೂರನೇ ದಿನವಾದ ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಭ್ಯರ್ಥಿಗಳಿಂದ ಚುನಾವಣಾ ನಾಮಪತ್ರಗಳನ್ನು ಸ್ವೀಕರಿಸಿದರು.

8-ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಕೆ ಏಪ್ರಿಲ್ 12 ರಿಂದ ಆರಂಭವಾಗಿದ್ದು, ಮಂಗಳವಾರದಂದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಐ) ಪಕ್ಷದ ಅಭ್ಯರ್ಥಿಯಾಗಿ ರಾಜಶೇಖರ ಕುಯ್ಯಪ್ಪನರ ಹಾಗೂ ಪಕ್ಷೇತರ ಅಭ್ಯರ್ಥಿಗಳಾಗಿ ಮಲ್ಲಿಕಾರ್ಜುನ ಹಡಪದ, ಹನಮೇಶ, ಇಮಾಮಸಾಬ ಮುಲ್ಲಾ ಮತ್ತು ದುರ್ಗಾ ಪ್ರಸಾದ್ ಡಿ. ಅವರು ತಲಾ 01 ನಾಮಪತ್ರ ಸಲ್ಲಿಸಿದ್ದು, ಈ ಐದು ಅಭ್ಯರ್ಥಿಗಳಿಂದ ಒಟ್ಟು 5 ಚುನಾವಣಾ ನಾಮಪತ್ರಗಳು ಮೂರನೇ ದಿನ ಸಲ್ಲಿಕೆಯಾಗಿವೆ.

 

Leave a Reply

Your email address will not be published. Required fields are marked *

error: Content is protected !!