
ವಲಸೆ ಹೋಗುವದು ಬೇಡ ನಿಮ್ಮೂರಲ್ಲೆ ಉದ್ಯೋಗ ಖಾತ್ರಿ : ಶರಣಪ್ಪ ಎಚ್
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ,29- ತಾಲ್ಲೂಕಿನ ಸಂಗನಹಾಳ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಗ್ರಾಮದಿಂದ ಬೇರಕಡೇ ವಲಸೆ ಹೋಗುವದು ಬೇಡ ನಿಮ್ಮ ಗ್ರಾಮದಲ್ಲಿ ಉದ್ಯೋಗ ಖಾತ್ರಿ ಅಭಿಯಾನದಡಿ ಕಾಯಕ ಬಂಧುಗಳಿಗೆ ಮಾಹಿತಿ ನೀಡಲಾಯಿತು.
ಈ ವೇಳೆ ತಾ.ಪಂ ಐಇಸಿ ಸಂಯೋಜಕರಾದ ಶರಣಪ್ಪ ಹಾಳಕೇರಿ ಮಾತನಾಡಿ, ಏಪ್ರಿಲ್ 1ರಿಂದ ಅಭಿಯಾನ ಆರಂಭವಾಗಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಅಕುಶಲ ಕೂಲಿ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ನರೇಗಾ ಕೂಲಿ ಕೆಲಸಕ್ಕೆ ಬರುವಂತೆ ತಿಳಿಸಲಾಯಿತು.
ಏಪ್ರಿಲ್ 1 ರಿಂದ ನಿರಂತರ ಕೆಲಸ ಆರಂಭಿಸುವ ಸಲುವಾಗಿ ಕಾಯಕ ಬಂಧುಗಳಿಂದ 310 ಜನರ ಫಾರಂ 6 ಕೂಲಿ ಬೇಡಿಕೆ ಅರ್ಜಿಯನ್ನು ಪಡೆಯಲಾಯಿತು.
ಚಾಂಪಿಯನ್ ಕಾಯಕ ಬಂಧು ಅಯ್ಕೆ
ಇದೇ ವೇಳೆ ಗ್ರಾಮ ಪಂಚಾಯತಿಯಲ್ಲಿ ಹೆಚ್ಚು ಕೆಲಸ ಮಾಡುವ ಚಟುವಟಿಕೆಯಿಂದಿರುವ ಕಾಯಕ ಬಂಧು ಒಬ್ಬರನ್ನು ಚಾಂಪಿಯನ್ ಕಾಯಕ ಬಂಧುವಾಗಿ ಅಯ್ಕೆ ಮಾಡಲಾಯಿತು. ಬಳಿಕ ಮನೆ ಮನೆ ಭೇಟಿ ನೀಡಿ ಸಾರ್ವಜನಿಕರಿಗೆ ವಲಸೆ ಯಾಕ್ರಿ, ನಿಮ್ಮೂರಲ್ಲೆ ಉದ್ಯೋಗ ಖಾತ್ರಿ ಅಭಿಯಾನದ ಮಾಹಿತಿ ನೀಡಲಾಯಿತು. ಇದೇವೇಳೆ ವ್ಯವಸ್ಥಿತ ಮತದಾರರ ಶಿಕ್ಷಣ ಹಾಗೂ ಚುನಾವಣಾ ಭಾಗವಹಿಸುವಿಕೆ ಸ್ವೀಪ್ ಜಾಗೃತಿ ಮೂಡಿಸಲಾಯಿತು.
ಕಾರ್ಯಕ್ರಮದಲ್ಲಿ ಪಿಡಿಒರಾದ ಸರ್ವಮಂಗಳ, ಡಿಇಒ ಹನಮರೆಡ್ಡಿ, ಟಿಎಇ ಶ್ರೀದೇವಿ, ಕರವಸೂಲಿಗಾರ ಶರಣಪ್ಪ, ಕಾಯಕ ಬಂಧುಗಳು, ಕೂಲಿಕಾರರು ಮತ್ತು ಇತರರು ಭಾಗವಹಿಸಿದ್ದರು.