2c136fae-be38-4577-97e1-318669006cc9

ವಿಜಯನಗರ : ಮತದಾನ ಜಾಗೃತಿಗಾಗಿ ರೀಲ್ಸ್ ಸ್ಪರ್ಧೆ

ಕರುನಾಡ ಬೆಳಗು ಸುದ್ದಿ

ವಿಜಯನಗರ, 18- 2024ರ ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾನ ಜಾಗೃತಿಗಾಗಿ ಜಿಲ್ಲಾ ಸ್ವೀಪ್ ಸಮಿತಿಯಿಂದ ರೀಲ್ಸ್ ಸ್ಪರ್ಧೆ ಏರ್ಪಡಿಸಲಾಗಿದೆ.

ಮೇ 7ರಂದು ಲೋಕಸಭಾ ಚುನಾವಣೆಯ ಮತದಾನ ನಡೆಯಲಿದೆ. ಜಿಲ್ಲೆಯ ಪ್ರತಿಯೊಬ್ಬ ಮತದಾರರು ಚುನಾವಣೆಯಿಂದ ಹೊರಗುಳಿಯದೆ ಕಡ್ಡಾಯ ಮತ್ತು ನೈತಿಕ ಮತದಾನ ಮಾಡುವ ಸಲುವಾಗಿ ಹಾಗೂ ಈ ಬಾರಿ ಮತದಾನ ಪ್ರಮಾಣ ಹೆಚ್ಚಿಸುವ ಉದ್ದೇಶದಿಂದ ಆಯೋಜನೆ ಮಾಡಿರುವ ಈ ರೀಲ್ಸ್ ಸ್ಪರ್ಧೆಯಲ್ಲಿ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಬಹುದಾಗಿದೆ.

30 ಸೆಕೆಂಡ್ ನಿಂದ 1 ನಿಮಿಷ ಮೀರದಂತೆ ಮತದಾನದ ಮಹತ್ವ ಕುರಿತು ರೀಲ್ಸ್ ವೀಡಿಯೋ ಚಿತ್ರೀಕರಿಸಿ ಏಪ್ರಿಲ್ 26ರೊಳಗೆ ಜಿಲ್ಲಾ ಪಂಚಾಯತ್ ಹೊಸಪೇಟೆ ಕಚೇರಿಯ ಮೇಲ್ ceosveepvjn@gmail.com ಹಾಗೂ ವಾಟ್ಸಪ್ ನಂಬರ್ 8660752667 ಗೆ ವೀಡಿಯೊ ಕಳುಹಿಸಬೇಕು. ಕೊನೆಯ ದಿನಾಂಕದ ನಂತರ ಸ್ವೀಕೃತವಾದ ವೀಡಿಯೊ ರೀಲ್ಸ್ಗಳನ್ನು ಪರಿಗಣಿಸಲಾಗುವುದಿಲ್ಲ.

ಉತ್ತಮ ರೀಲ್ಸ್ಗೆ ಬಹುಮಾನ: ರೀಲ್ಸ್ ಸ್ಪರ್ಧೆಯಲ್ಲಿ ವಿಜೇತರಿಗೆ ಪ್ರಥಮ 5000, ದ್ವಿತೀಯ 3000 ಹಾಗೂ ತೃತೀಯ 2000 ನಗದು ಬಹುಮಾನವಿರುತ್ತದೆ ಎಂದು ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷರು ಆಗಿರುವ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಸದಾಶಿವ ಪ್ರಭು.ಬಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!