ವಿಜ್ಞಾನ ಕಲಿಯಲು ವಿದ್ಯಾಥಿಗಳು ಪ್ರಶ್ನಿಸುವ ಮನಸ್ಥಿತಿ
ಬೆಳೆಸಿಕೊಳ್ಳಿ: ಡಾ. ಉದಯಕುಮಾರ ಖಡ್ಕೆ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 6- ನಗರದ ಶ್ರೀ ಗವಿಸಿದ್ಧೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ಭೌತಶಾಸ್ತ್ರ ವಿಭಾಗದ ವತಿಯಿಂದ ಜರುಗಿದ ಒಂದು ದಿನದ ಕಾರ್ಯಾಗಾರ ಉದ್ಘಾಟಕರಾಗಿ ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಭೌತಶಾಸ್ತç ವಿಭಾಗದ ಪ್ರಾಧ್ಯಾಪಕರಾದ ಡಾ. ಉದಯಕುಮಾರ ಖಡ್ಕೆ ಅವರು ಆಗಮಿಸಿದ್ದರು.
ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು ಚಂದ್ರಯಾನ ಯಶಸ್ವಿ ಉಡಾವಣೆಯ ನಂತರ ವಿಜ್ಞಾನಿಗಳ ಅಗತ್ಯತೆಯ ಮತ್ತು ಪ್ರಾಮುಖ್ಯತೆಯು ಹೆಚ್ಚಾಗಿದೆ ಎಂದರು. ಅಲ್ಲದೇ ವಿದ್ಯಾರ್ಥಿಗಳು ಭೌತಶಾಸ್ತç ವಿಷಯದಲ್ಲಿ ಹೆಚ್ಚಿನ ಆಸಕ್ತಿ ಹೊಂದುವಂತೆ ಪ್ರಾಧ್ಯಾಪಕರು ಪ್ರೇರೆಪಿಸಬೇಕು ಎಂದು ತಿಳಿಸಿದರು.
ಕಾರ್ಯಾಗಾರಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀ ಗವಿಸಿದ್ಧೇಶ್ವರ ವಿದ್ಯಾವರ್ಧಕ ಟ್ರಸ್ಟಿನ ಆಡಳಿತಾಧಿಕಾರಿಗಳಾದ ಡಾ. ಮಹಾಂತೇಶ ಸಾಲಿಮಠ ಅವರು ಮಾತನಾಡುತ್ತಾ ವಿಜ್ಞಾನ ವಿದ್ಯಾರ್ಥಿಗಳು ಯಶಸ್ಸು ಸಾಧಿಸಲು ವೈಜ್ಞಾನಿಕ ತಳಹದಿಯ ಜೊತೆಗೆ ಆಸಕ್ತಿಯನ್ನು ರೂಢಿಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಸದರಿ ಕಾರ್ಯಾಗಾರದಲ್ಲಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಚನ್ನಬಸವ ಅಧ್ಯಕ್ಷತೆಯನ್ನು ವಹಿಸಿದ್ದರು.
ಜೊತೆಗೆ ಕಾರ್ಯಾಗಾರದಲ್ಲಿ ಉಪಪ್ರಾಚಾರ್ಯರಾದ ಡಾ. ಕರಿಬಸವೇಶ್ವರ ಬಿ, ಐ.ಕ್ಯೂ.ಎ.ಸಿ ಸಂಯೋಜಕರಾದ ಡಾ. ಅರುಣಕುಮಾರ ಎ.ಜಿ. ಭಾಗವಹಿದ್ದರು.
ಕಾರ್ಯಕ್ರಮದ ಆಯೋಜಕರಾದ ಭೌತಶಾಸ್ತç ವಿಭಾಗದ ಮುಖ್ಯಸ್ಥರಾದ ಡಾ. ಮಂಜುನಾಥ ಎಂ, ಪ್ರಾಧ್ಯಾಪಕರಾದ ಡಾ.ಶಶಿಕಾಂತ ಉಮ್ಮಾಪುರೆ, ಡಾ. ಮಂಜುನಾಥ ಗಾಳಿ, ಡಾ. ಜಾಲಿಹಾಳ ಶರಣಪ್ಪ, ಡಾ. ಸುಂದರ ಮೇಟಿ, ಡಾ. ಅಜಿತ ನಾರಾಯಣ ಉಪಸ್ಥಿತರಿದ್ದರು.
ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಶರಣಪ್ಪ ಚೌವ್ಹಾಣ ಸ್ವಾಗತಿಸಿದರು.
ಬಿ.ಎಸ್ಸಿ ೬ನೇ ಸೆಮ್ ವಿದ್ಯಾರ್ಥಿನಿ ಸಂಗೀತ ಪ್ರಾರ್ಥನೆ ಮಾಡಿದರು. ನಿರೂಪಣೆಯನ್ನು ಕು. ವೆನಿಲಾ ಮತ್ತು ವೈಷ್ಣವಿ ನಿರ್ವಹಿಸಿದರು.
ವಿಭಾಗದ ಉಪನ್ಯಾಸಕರಾದ ಅಕ್ಷಯಕುಮಾರ ಎಲ್. ವಂದಿಸಿದರು.
