
ವಿಜ್ಞಾನ ದಸರಾ
ಮನೆ ಅಂಗಳದಿ ವಿಜ್ಞಾನ ಚಿತ್ರಗಳ ರಂಗೋಲಿ
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ, 26 – ತಾಲೂಕಿನ ತಾಳಕೇರಿ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ದಸರಾ ಹಬ್ಬದ ಪ್ರಯುಕ್ತ ವಿದ್ಯಾರ್ಥಿಗಳಿಗೆ ಎಸ್ಎಸ್ಎಲ್ ಸಿ ಫಲಿತಾಂಶ ಸುಧಾರಣೆಯ ನಿಟ್ಟಿನಲ್ಲಿ ವಿಜ್ಞಾನ ದಸರಾ ಕಾರ್ಯಕ್ರಮ ಜರುಗೀತು
ಕಾರ್ಯಕ್ರಮದ ಅಂಗವಾಗಿ ಮಕ್ಕಳಿಗೆ ವಿಜ್ಞಾನ ಚಿತ್ರಗಳ ರಂಗೋಲಿ ಮತ್ತು ವಿಜ್ಞಾನ ಚಿತ್ರಗಳ ಮೆಹಂದಿ ಸ್ಪರ್ಧೆ ಆಯೋಜಿಸಲಾಗಿತ್ತು.ಹಬ್ಬದ ಪ್ರಯುಕ್ತ ಮಕ್ಕಳು ಹೊಸ ಹೊಸ ಡಿಜೈನ ಧರಿಸಿದ ಅಂಗೈಯಲ್ಲಿ ವಿಜ್ಞಾನ ಚಿತ್ರಗಳ ಮೆಹಂದಿ ಮತ್ತು ಮನೆಯ ಮುಂದೆ ಹತ್ತನೇ ತರಗತಿಯ ವಿಜ್ಞಾನ ಚಿತ್ರಗಳ ರಂಗು ರಂಗಿನ ರಂಗೋಲಿ ಚಿತ್ರಗಳನ್ನು ಬಿಡಿಸಿದ್ದರು.
ಶಾಲೆಯ ಮುಖ್ಯೋಪಾಧ್ಯಾಯ ದೇವೇಂದ್ರಪ್ಪ ಜಿರ್ಲಿ ಮಾತನಾಡಿ ಎಸ್ ಎಸ್ ಎಲ್ ಸಿ ಫಲಿತಾಂಶ ಸುಧಾರಣೆಯ ನಿಟ್ಟಿನಲ್ಲಿ ಕಳೆದ ನಾಲ್ಕು ವರ್ಷಗಳಿಂದಲೂ ಮಕ್ಕಳಿಗೆ ಈ ವಿನೂತನ ಸ್ಪರ್ಧೆ ಆಯೋಜಿಸುತ್ತಾ ಬಂದಿದ್ದೆವೆ ಕೊರೋನಾ ಅವಧಿಯಲ್ಲಿ ಭೌತಿಕ ತರಗತಿಗಳನ್ನು ನಡೆಸಲು ಸಾಧ್ಯವಿಲ್ಲದ ಸಮಯದಲ್ಲಿ ಹೀಗೆ ಮಕ್ಕಳ ಮನೆಗೆ ಹೋಗಿಯೇ ಫಲಿತಾಂಶ ಸುಧಾರಣೆಗೆ ಶ್ರಮಿಸಲಾಗಿತ್ತ ಇದು ಮಕ್ಕಳ ಸೃಜನಶೀಲ ಕೌಶಲಕ್ಕೆ ಆದ್ಯತೆ ಕೊಡುವುದಲ್ಲದೇ ವಾರ್ಷಿಕ ಪರೀಕ್ಷೆಯಲ್ಲಿ ಸುಲಭವಾಗಿ 16 ರಿಂದ 2೦ ಅಂಕಗಳನ್ನು ಗಳಿಸಲುಸಾಧ್ಯವಾಗುತ್ತದೆ.ಆದ್ದರಿಂದ ಪ್ರತಿವರ್ಷವೂ ಶಾಲೆಯಲ್ಲಿ ವಿಜ್ಞಾನ ದಸರಾ ಆಚರಿಸಲಾಗುತ್ತದೆ ಎಂದರು .
ಈ ಸಂದರ್ಭದಲ್ಲಿ ಅತಿಥಿ ಶಿಕ್ಷಕ ಮಂಜುನಾಥ ಕೋಳೂರು,ಮಂಜುಳಾ ತಾಳಕೇರಿ ಸೇರಿದಂತೆ ಶಿಕ್ಷಕ ಶಿಕ್ಷಕಿಯರು ಮಕ್ಕಳ ಮನೆ ಮನೆಗೆ ಭೇಟಿ ನೀಡಿಫಲಿತಾಂಶ ಘೋಷಣೆ ಮಾಡಿದರು.
ವಿಜ್ಞಾನ ಚಿತ್ರಗಳ ರಂಗೋಲಿ ಸ್ಪರ್ಧೆಯಲ್ಲಿ ಕುಮಾರಿ ದೇವಮ್ಮ ಗದ್ದೇರ ಪ್ರಥಮ ಸ್ಥಾನ ಕುಮಾರಿ ಶಾಂತಾ ಎಚ್ ಹುಗ್ಗಿ ದ್ವೀತಿಯ ಸ್ಥಾನ ಕುಮಾರ ದರ್ಶನ್ ಬಡಿಗೇರ ತೃತಿಯ ಸ್ಥಾನ ಪಡೆದಿದ್ದಾರೆ ವಿಜ್ಞಾನ ಮೆಹಂದಿ ಚಿತ್ರದಲ್ಲಿ ಕುಮಾರಿ ಶೈನಾಜಬೇಗಂ ಪ್ರಥಮ ಸ್ಥಾನ, ಕುಮಾರಿ ಪವಿತ್ರ ದ್ವೀತಿಯ ಸ್ಥಾನ ಕುಮಾರಿ ಪಾರ್ವತಿ ಹೊರಪೇಟಿ ತೃತಿಯ ಸ್ಥಾನ ಪಡೆದಿದ್ದಾರೆಂದು ಮುಖ್ಯ ಶಿಕ್ಷಕ ದೇವೇಂದ್ರಪ್ಪ ಜೀರ್ಲಿ ತಿಳಿಸಿದ್ದಾರೆ.