6

ವಿಜ್ಞಾನ ದೇಶದ ಅಭಿವೃದ್ಧಿಗೆ ಪೂರಕ : ಡಾ ಶ್ರೀನಿವಾಸ ಹ್ಯಾಟಿ

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 28- ವಿಜ್ಞಾನ ದೇಶದ ಅಭಿವೃದ್ಧಿಗೆ ಪೂರಕವಾಗಿದೆ ಮಕ್ಕಳಲ್ಲಿ ವಿಜ್ಞಾನ ಕುರಿತು ಜಾಗೃತಿಗೆ ವಿಜ್ಞಾನ ವಸ್ತು ಪ್ರದರ್ಶನ ಪೂರಕವಾಗಲಿದೆ ಎಂದು ಡಾ ಶ್ರೀನಿವಾಸ ಹ್ಯಾಟಿ ಹೇಳಿದರು.
ಅವರು ಶುಕ್ರವಾರದಂದು ನಗರದ ಶಾಂತಿನಿಕೇತನ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಜರುಗಿದ ವಿಜ್ಞಾನ ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡುತ್ತಿದ್ದರು.
ಮಕ್ಕಳಲ್ಲಿ ವಿಜ್ಞಾನದ ಮನೋಭಾವ ಬೆಳೆಸುವ ಮೂಲಕ ಹೋಸ ಅವಿಶ್ಕಾರಗಳಿಗೆ ನಾಂದಿ ಹಾಡಬೇಕಿದೆ ,ಮಕ್ಕಳು ದೇಶದ ಭವಿಷ್ಯದ ರತ್ನಗಳು ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಬಾಲ್ಯದಲ್ಲೆ ಅರಿವು ಮೂಡಿಸಬೇಕು ಎಂದರು.
ಶಾಲೆಯಲ್ಲಿ 6 ರಿಂದ 9 ನೇ ತರಗತಿವರೆಗಿನ ಮಕ್ಕಳಿಂದ ವಿಜ್ಞಾನ ವಸ್ತು ಪ್ರದರ್ಶನ ಜರುಗಿತು. ಈ ಸಂದರ್ಭದಲ್ಲಿ ಶಾಲಾ ಸಂಸ್ಥೆಯ ಅಧ್ಯಕ್ಷ ಶಿವಕುಮಾರ ಕುಕನೂರ , ಉದ್ಯಮಿ ಮಂಜುನಾಥ ಅಂಗಡಿ, ಶರಣು ಡೋಳಿನ್, ನಿತೀಶ್ ಪುಲಸ್ಕರ್, ವಿನೋದ ಡೋಳಿನ್ , ಸುಧಾಕರ ಮುಜಗುಂಡ ಇದ್ದರು.

Leave a Reply

Your email address will not be published. Required fields are marked *

error: Content is protected !!