IMG-20250228-WA0044

ಮಾರ್ಚ್ 8 ರಂದು ಶಾಂತಕುಮಾರ ದೊಡ್ಡಮನಿಗೆ

ಪ್ರಶಸ್ತಿ ಪ್ರಧಾನ

ಕರುನಾಡ ಬೆಳಗು ಸುದ್ದಿ
ಕೊಪ್ಪಳ, 28- ಇಲ್ಲಿನ ಶ್ರೀ ಬಸವೇಶ್ವರ ನಗರದ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಮಾಜ ಸೇವಕ ಶಾಂತಕುಮಾರ್ ದೊಡ್ಡಮನಿ ಅವರಿಗೆ ಕರ್ನಾಟಕ ವಿಕಾಸರತ್ನ ರಾಜ್ಯ ಪ್ರಶಸ್ತಿ ಯನ್ನು ಇದೇ ಮಾರ್ಚ್ 8 ರಂದು ಬೆಂಗಳೂರಿನ ಶ್ರೀ ರವೀಂದ್ರ ಕಲಾ ಕ್ಷೇತ್ರದ ನಯನ ಸಭಾ ಭವನದಲ್ಲಿ ಜರುಗಲಿರುವ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ನಡೆಯುತ್ತಿರುವ 72ನೇ ರಾಷ್ಟ್ರೀಯ ಮಟ್ಟದ ಕಲಾ ಪ್ರತಿಭೋತ್ಸವ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುತ್ತಿದೆ ಎಂದು ಕಾರ್ಯಕ್ರಮ ಸಂಘಟಕ ಸುರ್ವೇ ಕಲ್ಚರ್ ಅಕಾಡೆಮಿ ಅಧ್ಯಕ್ಷ ಕಿಶನ್ ಸುರ್ವೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
       ಶಾಂತಕುಮಾರ ದೊಡ್ಡಮನಿ ಅವರು ಸಾಮಾಜಿಕ ಉತ್ತಮ ಸೇವೆಯನ್ನು ಪರಿಗಣಿಸಿ ರಾಜ್ಯ ವಿಕಾಸರತ್ನ  ಪ್ರಶಸ್ತಿ ಲಭಿಸಿರೋದಕ್ಕೆ ಇಲ್ಲಿನ ಹಲವು ಸಂಘ ಸಂಸ್ಥೆಗಳು ಗಣ್ಯರು, ಸ್ನೇಹ ಬಳಗದ ವಿವೇಕಾನಂದ ಕಟ್ಟಿಮನಿ, ಶ್ರೀನಿವಾಸ್ ಬಾವಿಮನಿ, ವೀರೇಶ್ ಆರ್. ಟಿ, ರಮೇಶ್ ಯಲಬುರ್ಗಾ ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!