WhatsApp Image 2024-03-03 at 6.07.40 PM

ಶಾಲಾ ವಾರ್ಷಿಕೋತ್ಸವ ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವನೆ ಮೂಡಿಸಿ : ಸಿ ಆರ್ ಪಿ ಮಾರುತಿ

ಕರುನಾಡ ಬೆಳಗು ಸುದ್ದಿ

ಸಿರುಗುಪ್ಪ,3- ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕಗಳ ಅಭ್ಯಾಸದ ಜೊತೆಗೆ ಸಾಂಸ್ಕೃತಿಕ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಬೇಕು ಸಮಗ್ರ ಬೆಳವಣಿಗೆಗೆ ಅವರು ಸಾಧಿಸುತ್ತಾರೆ ಎಂದು ಸಿಆರ್‌ಪಿ ಮಾರುತಿ ಅವರು ಹೇಳಿದರು.

ನಗರದ ಬಿಸ್ಮಿಲ್ಲಾ ವಿದ್ಯಾ ಸಂಸ್ಥೆಯ ಜವಾಹರ್ ಹಿರಿಯ ಪ್ರಾಥಮಿಕ ಶಾಲೆಯ 31ನೇ ವಾರ್ಷಿಕೋತ್ಸವ ಸಮಾರಂಭ ದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಾ ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವನೆ ಮೂಡಿಸಬೇಕು ಎಂದು ಕರೆ ನೀಡಿದರು ಬಿಸ್ಮಿಲ್ಲಾ ವಿದ್ಯಾ ಸಂಸ್ಥೆಯ ಗೌರವ ಕಾರ್ಯದರ್ಶಿ ಕೆ ವಲಿ ಭಾಷಾ ಅವರು ನಿಮ್ಮ ಮಕ್ಕಳನ್ನು ಓದುವುದನ್ನು ನಿಲ್ಲಿಸಬೇಡಿ ಮುಂದುವರೆಸಿ ಎಂದರು.

ಬಿಸ್ಮಿಲ್ಲಾ ಎಜುಕೇಶನ್ ಸೊಸೈಟಿ ಜವಾಹರ್ ಹೈಯರ್ ಪ್ರೈಮರಿ ಸ್ಕೂಲ್ ನ ಸಂಸ್ಥಾಪಕರು ಹಾಗೂ ಅಧ್ಯಕ್ಷರಾದ ಎ ಅಬ್ದುಲ್ ನಬಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಶಾಲಾ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ತನ್ನದೇ ಆದ ಪೋಷ ಪಾಲಕರ ಶಿಕ್ಷಕರ ಮುದ್ದು ಮಕ್ಕಳ ವಿದ್ಯಾಭ್ಯಾಸದ ಕಡೆ ಹೆಚ್ಚಿನ ಗಮನ ನೀಡುವದು ವಿದ್ಯಾರ್ಥಿಗಳು ಉಜ್ವಲ ಭವಿಷ್ಯಕ್ಕೆ ಉನ್ನತ ಮಟ್ಟಕ್ಕೆ ತಲುಪಬೇಕು ಎಂಬ ಆಶಯವಾಗಿದ್ದು ಶಿಕ್ಷಣದೊಂದಿಗೆ ಸಂಪೂರ್ಣ ಸಂಸ್ಕಾರ ಕಲಿಸುವುದು ಸಮಾಜದ ಏಳಿಗೆಗೆ ಕಲಿಯುವ ಶಿಕ್ಷಣ ಉಪಯುಕ್ತವಾಗಲು ತಾಯಿ ತಂದೆ ಶಿಕ್ಷಕರು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಜೊತೆಗೆ ಆದರ್ಶ ಗುಣವಂತರನ್ನಾಗಿಸಲು ಭಾರತ ದೇಶದ ಪ್ರಜೆಗಳು ನಾವೆಲ್ಲರೂ ಒಂದೇ ಎನ್ನುವ ಭಾವನೆ ಮೂಡಿಸುವುದು ಸಾಮಾಜಿಕ ಮಾನಸಿಕವಾಗಿ ಸದೃಢರನ್ನಾಗಿಸಲು ಮಾತೃಭಾಷೆದೊಂದಿಗೆ ವಿವಿಧ ಎಲ್ಲಾ ಭಾಷೆ ಈಮಾನ್ ಇಸ್ಲಾಂ ಖುರಾನ್ ಮಕ್ಕಳಲ್ಲಿ ದಯೆ ಕರುಣೆಯ ಜೀವನ ವ್ಯಕ್ತಿಗಳಾಗಲು ತುಂಬುತ್ತಿರುವ ಧಾರ್ಮಿಕವಾಗಿ ಸಾಂಸ್ಕೃತಿಕವಾಗಿ ಮಾನವೀಯತೆಯ ಮೌಲ್ಯಯುತ ಸ್ಪರ್ಧಾತ್ಮಕ ಪ್ರಪಂಚದಲ್ಲಿ ಅವಿರತ ಶ್ರಮಿಸುತ್ತಿರುವ ಬಿಸ್ಮಿಲ್ಲಾ ವಿದ್ಯಾ ಸಂಸ್ಥೆಯ ಶಾಲಾ ಸಾಧನೆಯ ಕೀರ್ತಿ ಶಾಲಾ ಕಾರ್ಯದರ್ಶಿ ಶ್ರೀಮತಿ ಶೈನಾಜ್ ಬೇಗಂ ಅವರಿಗೆ ಸಲ್ಲುತ್ತದೆ ಗುಣ ಮಟ್ಟದ ಶಿಕ್ಷಣ ನೀಡುವಲ್ಲಿ ಬಿಸ್ಮಿಲ್ಲಾ ವಿದ್ಯಾ ಸಂಸ್ಥೆಯ ಕಾರ್ಯ ಕರ್ತವ್ಯದಲ್ಲಿ ನಿರತವಾಗಿದೆ ಎಲ್ಲರೂ ಶಾಲೆಗೆ ಕೀರ್ತಿ ತರುಬೇಕು ಎಂದು ಅವರು ವಿನಂತಿಸಿದರು.

ಶಾಲಾ ನಿರ್ದೇಶಕರು ಟಿ ಮೊಹಮ್ಮದ್ ಗೌಸ್ ಬಾಷಾ, ಗೌರವ ಕಾರ್ಯದರ್ಶಿ ಕೆ ವಲಿ ಭಾಷಾ, ಖಾಜಿ ಸೈಯದ್, ಜಿಲಾನ್ ಪಾಷಾ ಖಾದ್ರಿ, ಹಾಜಿ ಎ ಮೊಹಮ್ಮದ್, ಇಬ್ರಾಹಿಂ ಮೊಹಮ್ಮದ್, ನೌಶಾದ್ ಅಲಿ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.

ಶಾಲೆಯ ಶಿಕ್ಷಕಿಯರು ಅನ್ನಪೂರ್ಣ, ನಾಜಿಯಾ, ಆಯಿಷ ತಸ್ಲೀಮ್, ರಿಹಾನ, ಶಾಲಾ ಸಿಬ್ಬಂದಿ ವರ್ಗದವರು, ಪೋಷ ಪಾಲಕರು ಮುದ್ದು ಮಕ್ಕಳು ಇದ್ದರು.

ಕೆ ಶೈನಾಜ್ ಬೇಗಂ ಅವರು ಸರ್ವರನ್ನು ಸ್ವಾಗತಿಸಿ ವಂದಿಸಿದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಲ್ಲಿ ಹುದುಗಿದ್ದ ಪ್ರತಿಭೆಯನ್ನು ವಿವಿಧ ಸಾಂಸ್ಕೃತಿಕ ಚಟುವಟಿಕೆಯಲ್ಲಿ ಭಾಗವಹಿಸಿದ ವಿಜೇತ ಮಕ್ಕಳಿಗೆ ಪ್ರಶಸ್ತಿ ಪತ್ರ ಬಹುಮಾನ ನೆನಪಿನ ಕಾಣಿಕೆ ನೀಡಲಾಯಿತು.

Leave a Reply

Your email address will not be published. Required fields are marked *

error: Content is protected !!