WhatsApp Image 2024-02-28 at 4.57.26 PM

ವಿದ್ಯಾರ್ಥಿಗಳು ಓದಿನ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ 

ಕರುನಾಡ ಬೆಳಗು ಸುದ್ದಿ

ಯಲಬುರ್ಗಾ ,29- ವಿದ್ಯಾರ್ಥಿಗಳು ಹೆಚ್ಚು ವಿದ್ಯಾಭ್ಯಾಸ ಮಾಡುವದರ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಅಂದಾಗ ಮಾತ್ರ ಅವರಲ್ಲಿ ಇದ್ದ ಪ್ರತಿಭೆ ಹೊರಬರಲು ಸಾಧ್ಯ. ವಿದ್ಯಾರ್ಥಿಗಳಲ್ಲಿ ಸಂಕುಚಿತ ಮನೋಭಾವನೆ ಹೋಗಲಾಡಿಸಲು ಶಾಲಾ ವಾರ್ಷಿಕೋತ್ಸವ ಉತ್ತಮವಾದ ವೇದಿಕೆಯಾಗಿದೆ ಎಂದು ಡಾ.ಪ್ರವೀಣ ಪೋಲೀಸ್ ಪಾಟೀಲ್ ಹೇಳಿದರು.

ತಾಲೂಕಿನ ತರಲಕಟ್ಟಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವ ಹಾಗೂ ಏಳನೇ ತರಗತಿಯ ಮಕ್ಕಳ ಬಿಳ್ಕೋಡಿಗೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು
ಕೆಲವು ಮಕ್ಕಳು ಕೇವಲ ಒಂದೇ ವಿಷಯಕ್ಕೆ ಸೀಮಿತವಾಗಿ ಸಾಂಸ್ಕೃತಿಕ ಚಟುವಟಿಕೆಯಲ್ಲಿ ಭಾಗವಹಿಸಲು ಹಿಂದೇಟು ಹಾಕುತ್ತಾರೆ. ಓದು ಬರಹದ ಜೊತೆಗೆ ಉತ್ತಮವಾದ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಹವ್ಯಾಸವನ್ನು ಸಹ ರೂಡಿಸಿಕೊಳ್ಳುವುದು ಉತ್ತಮ ಬೆಳವಣಿಯಾಗಿದೆ. ಹಲವಾರು ವಿದ್ಯಾರ್ಥಿಗಳು ಕೇವಲ ಮೊಬೈಲ್, ಟಿವಿ,ಗೆ ಅಂಟಿಕೊಂಡಿರುತ್ತಾರೆ ಮತ್ತೆ ಕೆಲವರು ಯಾರೊಂದಿಗೂ ಬೆರೆಯದೆ ಒಬ್ಬಂಟಿಯಾಗಿರಲು ಬಯಸುತ್ತಾರೆ ಆದರೆ ಓದು ಬರಹದ ಜೊತೆಗೆ ಉತ್ತಮವಾದ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಹವ್ಯಾಸವನ್ನು ಸಹ ರೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ನಂತರ ಪ್ರಾಸ್ತಾವಿಕವಾಗಿ ಮುಖೋಪಧ್ಯಾಯ ದೇವಪ್ಪ ವಾಲ್ಮೀಕಿ ಮಾತನಾಡಿ ಚಿಕ್ಕಂದಿನಿಂದಲೇ ವೇದಿಕೆಗಳ ಕಾರ್ಯಕ್ರಮಗಳಲ್ಲಿ ಭಾಗ ವಹಿಸುವುದರಿಂದ ಮಕ್ಕಳ ಬುದ್ಧಿಶಕ್ತಿ ಧೈರ್ಯ ಬರುತ್ತದೆ ಹೆಚ್ಚಿನ ಭಯ ಹೋಗಲಾಡಿಸಬಹುದು ವರ್ಷದ ಶಾಲಾ ವಾರ್ಷಿಕೋತ್ಸವದಲ್ಲಿ ಮನರಂಜನೆಗಳಲ್ಲಿ ಭಾಗವಹಿಸುವುದರಿಂದ ಮಕ್ಕಳು ಕ್ರೀಯಾಶೀಲರಾಗುತ್ತಾರೆ ಇದಕ್ಕೆ ಪೋಷಕರ ಬೆಂಬಲಬೇಕು ಎಂದರು
ಕಾರ್ಯಕ್ರಮಕ್ಕೆ ಗ್ರಾಮದ ಹಿರಿಯ ಮುಖಂಡ ಪ್ರಭುಗೌಡ ಪೋಲೀಸ್ ಪಾಟೀಲ್ ಚಾಲನೆ ನೀಡಿದರು ಬಸಯ್ಯ ಹಿರೇಮಠ ಸಾನಿಧ್ಯವಹಿಸಿದ್ದರು,

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ಡಿಎಂಸಿ ಅಧ್ಯಕ್ಷ ಮಂಜುನಾಥ ಪೋಲೀಸ್ ಪಾಟೀಲ್ ವಹಿಸಿದ್ದರು.

ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಸದಸ್ಯರುಗಳಾದ ಬಸಪ್ಪ ಕೋಳೂರು, ಹನಮೇಶ ವಡ್ಡರ, ಮುಖಂಡರುಗಳಾದ ವೀರನಗೌಡ ಪೋಲೀಸ್ ಪಾಟೀಲ್ ವಕೀಲರಾದ ಮಲ್ಲನಗೌಡ ಪೋಲೀಸ್, ಪಾಟೀಲ್, ಯಮನೂರಪ್ಪ ತಳವಾರ, ಕರಿಯಪ್ಪ ಶಿಲ್ಪಿ, ಕೇಶಪ್ಪ ಮನ್ನಾಪೂರ, ಶರಣಪ್ಪ ಕಂಬಳಿ, ನಾಗಪ್ಪ ಹರಿಜನ, ಮುತ್ತಣ್ಣ ಮೇಟಿ, ಮಹಾದೇವಪ್ಪ ಮೇಟಿ, ಶಿಕ್ಷಕರುಗಳಾದ ಬಸಪ್ಪ ಶಿರಗೂರು, ಈರಮ್ಮ ನಾಯ್ಕರ, ಲೋಕೇಶ ಲಮಾಣಿ, ನೇತ್ರಾ ತಳವಾರ, ಕೃಷ್ಣ ತಾಟಪ್ಪನವರ,ಬಾಲಪ್ಪ ಭೂತಲ್, ಲಕ್ಷ್ಮೀಚನ್ನದಾಸರ, ಸೇರಿದಂತೆ ಮತ್ತು ಇತರರು ಭಾಗವಹಿಸಿದ್ದರು ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ವಿವಿಧ ರೀತಿಯ ಹಾಡು. ನೃತ್ಯ.ಮಾಡಿ ಎಲ್ಲರ ಮನಸ್ಸು ರಂಜಿಸಿದರು

Leave a Reply

Your email address will not be published. Required fields are marked *

error: Content is protected !!