WhatsApp Image 2024-02-28 at 5.02.36 PM

ಸಾಂಸ್ಕೃತಿಕ ಕಲೋತ್ಸವ ಸಂಗೀತ ಕಾರ್ಯಕ್ರಮ ವಿವಿಧ ಕ್ಷೇತ್ರಗಳಲ್ಲಿ ಸಲ್ಲಿಸಿದ ಸೇವೆ ಸಾಧಕರಿಗೆ ರಾಜ್ಯಮಟ್ಟದ ಪ್ರಶಸ್ತಿ ಪ್ರಧಾನ

ಕರುನಾಡ ಬೆಳಗು ಸುದ್ದಿ

ಸಿರುಗುಪ್ಪ,29- ಮಲ್ಕಾಪುರ ಹೆಚ್ಎಂ ಹಿರೇಮಠ ಇವರ ಸಾರಥ್ಯದಲ್ಲಿ ಡಾ ಪಂಡಿತ ಪುಟ್ಟರಾಜ ಕವಿ ಗವಾಯಿಗಳ ಆಶೀರ್ವಾದದಿಂದ ಕರ್ನಾಟಕ ಸರ್ಕಾರ ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆ ಬಳ್ಳಾರಿ ಇವರ ಪ್ರಾಯೋಜತ್ವದ ಪುಟ್ಟರಾಜ ಸಾಂಸ್ಕೃತಿಕ ಕಲಾ ಬಳಗ ಸಿರುಗುಪ್ಪ ಇವರಿಂದ ಕರ್ನಾಟಕ 50ರ ಸಂಭ್ರಮ ಆಚರಣೆ ಹಾಗೂ 75 ನೇ ಗಣರಾಜ್ಯೋತ್ಸವದ ಅಂಗವಾಗಿ ನೇಗಿಲ ಯೋಗಿ ನಮನ ಸಾಂಸ್ಕೃತಿಕ ಕಲೋತ್ಸವ ಸಂಗೀತ ಕಾರ್ಯಕ್ರಮ ನೃತ್ಯ ಸಮೂಹ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸಾಧಕ ಸಾಧಕೀಯರಿಗೆ ರಾಜ್ಯಮಟ್ಟದ ಪ್ರಶಸ್ತಿ ಸನ್ಮಾನ ಸಮಾರಂಭ ನೇತಾಜಿ ವ್ಯಾಯಾಮ ಶಾಲಾ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಗಜೇಂದ್ರಗಡ, ತಳ್ಳಿಹಾಳು, ಸಂಸ್ಥಾನ ಕೋಡಿಮಠ ಕಾಲಜ್ಞಾನ ಬ್ರಹ್ಮ ಸದ್ಗುರು ವಿಶ್ವಕಾಲ ಜ್ಞಾನ ಶಿವಯೋಗಿ ಡಾ ಶರಣಬಸವ ಮಹಾಸ್ವಾಮಿ ಸಿರುಗುಪ್ಪ ಶ್ರೀ ಗುರುಬಸವ ಮಠದ ಬಸವಭೂಷಣ ಮಹಾಸ್ವಾಮಿ ಹರಳಲ್ಲಿ ಮಠ ರಾಜೇಶ್ವರಿ ಬೃಹನ್ ರೇವಣ್ಣ ಸಿದ್ದಯ್ಯ ತಾತ ರಾವಿಹಾಳ್ ವಾಸುದೇವ ಆಚಾರ್ಯ ಸಂತೆ ಕೂಡ್ಲೂರು ಆರೋಡ ಮಠ ಡಾ ಸಿದ್ದಲಿಂಗಪ್ಪ ತಾತ ಕುಡುದರ ಹಾಳು ಡಾ ಶಿವಕುಮಾರ ತಾತ ದಿವ್ಯ ಸಾನಿಧ್ಯ ಸಹ ಸಾನಿಧ್ಯ ವಹಿಸಿ  ಸಮಾರಂಭದಲ್ಲಿ ಉದ್ಘಾಟಿಸಿ ಆಶೀರ್ವಚನ ನೀಡಿದರು.

ಕಾಂಗ್ರೆಸ್ ಹಿರಿಯರು ಮಹಾಂತಯ್ಯ ಕೆಪಿಸಿಸಿ ಕಾರ್ಯದರ್ಶಿ ಯು ಕೊ ದಂಡರಾಮ, ಅಬ್ದುಲ್ ನಬಿ ಸಾಹೇಬ್ ಅವರು ಅತಿಥಿಗಳಾಗಿದ್ದರು.

ಆಕಾಶವಾಣಿ ಕಲಾವಿದರು ರಾಜ್ಯ ಪ್ರಶಸ್ತಿ ಪುರಸ್ಕೃತರು, ಪುಟ್ಟರಾಜ ಸಾಂಸ್ಕೃತಿಕ ಕಲಾ ಬಳಗದ ಅಧ್ಯಕ್ಷರು, ಪುಟ್ಟ ರಾಜ ಅಂಧ ಮಕ್ಕಳ ಸಂಗೀತ ಪಾಠಶಾಲೆಯ ಅಧ್ಯಾಪಕರು ಮತ್ತು ಸಂಸ್ಥಾಪಕ ಅಧ್ಯಕ್ಷರಾದ ಮಲ್ಕಾಪುರ ಹೆಚ್ಎಂ ಮಹಾದೇವಯ್ಯ ಸ್ವಾಮಿ ಗವಾಯಿಗಳು ಅವರ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ಮಟ್ಟದ ವಿವಿಧ ಕ್ಷೇತ್ರಗಳಲ್ಲಿ ಪ್ರಶಸ್ತಿಗೆ ಆಯ್ಕೆಯಾದ ಶಾಸಕ ಬಿ ಎಂ ನಾಗರಾಜ್ ಅವರು ಸೇರಿದಂತೆ ಸಾಧನೆ ಮಾಡಿದ ಸಾಧಕ ಸಾಧಕೀಯರಿಗೆ ಪ್ರಶಸ್ತಿ ನೀಡಿ ಗೌರವಿಸಿ ಸನ್ಮಾನಿಸಿದರು ಸರ್ವರನ್ನು ಸ್ವಾಗತಿಸಿ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!