WhatsApp Image 2024-04-14 at 10.41.20 AM

52 ದಿನಗಳಿಂದ ಜಿಲ್ಲಾಡಳಿತ ಭವನ ಮುಂದೆ ನಡೆದಿದ್ದ ಅಹೋರಾತ್ರಿ ಧರಣಿ ಹಿಂಪಡೆಯಲಾಗಿದೆ

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 14- ವಿವಿಧ ಬೇಡಿಕೆ ಈಡೇರಿಕೆಗಾಗಿ ಕಳೆದ 52 ದಿನಗಳಿಂದ ಜಿಲ್ಲಾಡಳಿತ ಭವನ ಮುಂದೆ ನಡೆದಿದ್ದ ಅಹೋರಾತ್ರಿ ಧರಣಿ ಶನಿವಾರ ಹಿಂಪಡೆಯಲಾಗಿದೆ ಎಂದು ಪಿಯುಸಿಎಲ್ ನ ಜಿಲ್ಲಾಧ್ಯಕ್ಷ ಮಹಾಂತೇಶ ಕೊತಬಾಳ ತಿಳಿಸಿದ್ದಾರೆ.

ಶಾಸಕ ರಾಘವೇಂದ್ರ ಹಿಟ್ನಾಳ ಮತ್ತು ಜಿಲ್ಲಾಧಿಕಾರಿಗಳು ಚುನಾವಣೆ ನಂತರ ಬೇಡಿಕೆಗಳನ್ಮು ಈಡೇರಿಸುವ ಭರವಸೆಯ ಮಾತಿಗೆ ಧರಣಿ ಹಿಂಪಡೆದಿದ್ದು ಇಂದು ನಗರಸಭೆ ಕಮಿಷನರ್ ಧರಣಿ ಸ್ಥಳಕ್ಕೆ ಭೇಟಿ ನೀಡಿದ್ದರು.

ನಗರದಲ್ಲಿ ಕೆಡವಿದ ಪುರಾತನ ಕಮಾನುಗಳ ಮರು ನಿರ್ಮಾಣ, ನಗರದ ರಸ್ತೆ ಪಕ್ಕ ಪುರುಷ, ಮಹಿಳೆಯರ ಶೌಚಾಲಯ ನಿರ್ಮಾಣ , ಶ್ರೀಮಂತರಿಗೆ ನೀಡಿರುವ ಆಶ್ರಯ ನಿವೇಶನ ರದ್ದು , ಗಣೇಶ ನಗರದಲ್ಲಿ 25 ವರ್ಷದಿಂದ ವಾಸವಿರುವ ವಿಕಲಚೇತನನಿಗೆ ಹಕ್ಕುಪತ್ರ ನೀಡುವುದು ಸೇರಿ ವಿವಿಧ ಬೇಡಿಕೆಗಳೊಂದಿಗೆ ನಾಗರಿಕ ಹಕ್ಕುಗಳ ವೇದಿಕೆ ( PUCL) ಜಿಲ್ಲಾಡಳಿತ ಭವನ ಮುಂದೆ ಧರಣಿ ಆರಂಭಿಸಿತ್ತು.

ನಗರದ ಪುರಾತನ ಕಮಾನುಗಳನ್ನು ಕೆಡವಲಾಗಿದ್ದು ಅದೇ ಸ್ಥಳದಲ್ಲಿ ಕಮಾನುಗಳ ಮರುನಿರ್ಮಾಣಕ್ಕೆ 2015 ರಲ್ಲಿ ಆದೇಶವಾಗಿದೆ. ಆದರೆ ಈವರೆಗೆ ಕಮಾನು ನಿರ್ಮಾಣ ಆಗಿಲ್ಲ. ಕೂಡಲೇ ಕಮಾನು ನಿರ್ಮಾಣ ಆಗಬೇಕು.

ನಗರದ ಪ್ರಮುಖ ರಸ್ತೆಗೆ ಹೊಂದಿಕೊಂಡು ಪುರುಷ , ಮಹಿಳಾ ಶೌಚಾಲಯಗಳ ನಿರ್ಮಾಣ ಮಾಡಬೇಕು. ಕುಷ್ಟಗಿ ರಸ್ತೆಯ ಸ.ನಂ.93/3/4 ರ ಆಶ್ರಯ ಬಡಾವಣೆಯಲ್ಲಿ ಅನರ್ಹರಿಗೆ ನೀಡಿರುವ ಆಶ್ರಯ ನಿವೇಶನಗಳನ್ನು ರದ್ದುಗೊಳಿಸಬೇಕು.

ಹಾನಗಲ್ ಕುಟುಂಬದಿಂದ ವಶಕ್ಕೆ ಪಡೆದಿರುವ ಆಶ್ರಯ ನಿವೇಶನಗಳನ್ನು ಮತ್ತೆ ಶ್ರೀಮಂತರಿಗೆ ನೀಡಿದ್ದು ಅವುಗಳನ್ನು ಬಡವರಿಗೆ ಹಂಚಿಕೆ ಮಾಡಬೇಕು.

ಗಣೇಶ ನಗರದ ನಿವೇಶನ ಸಂಖ್ಯೆ 52 ರಲ್ಲಿ ವಾಸವಿರುವ ವಿಕಲಚೇತನ ವ್ಯಕ್ತಿ ಚನ್ನಬಸಪ್ಪ ಎಲಿಗಾರ ಬದಲು ಬೇರೆಯವರಿಗೆ ಹಕ್ಕು ಪತ್ರ ನೀಡಿದ್ದು ಅದನ್ನು ರದ್ದುಗೊಳಿಸಿ ವಿಕಲಚೇತನ ವ್ಯಕ್ತಿಗೆ ಹಕ್ಕು ಪತ್ರ ನೀಡಬೇಕು ಎಂದು ಒತ್ತಾಯಿಸಿ PUCL ನ ಮಹಾಂತೇಶ ಕೊತಬಾಳ, ಚೆನ್ನಬಸಪ್ಪ ಎಲಿಗಾರ ಧರಣಿ ಆರಂಭಿಸಿದ್ದರು.

ಈ ಸಂದರ್ಭದಲ್ಲಿ ಶಿವಪ್ಪ ಹಡಪದ, ಚೆನ್ನಬಸಪ್ಪ ಎಲಿಗಾರ , ನಗರಸಭೆ ಜೆಇ ಸೋಮಶೇಖರ ಉಪಸ್ಥಿತರಿದ್ದರು.

ಮಾಹಿತಿಗಾಗಿ ಮಹಾಂತೇಶ ಕೊತಬಾಳ ಮೊ: 8762700200

Leave a Reply

Your email address will not be published. Required fields are marked *

error: Content is protected !!