ವಿಶೇಷ ಸಂಪರ್ಕ ಅಭಿಯಾನ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 16- ಅಡಿಯಲ್ಲಿ ಪ್ರಭುದ್ದರ ಸಭೆ ಬಳ್ಳಾರಿಯ ನಕ್ಷತ್ರ ಹೋಟೆಲ್ ನ ಸಭಾಂಗಣದಲ್ಲಿ ಭಾರತೀಯ ಜನತಾ ಪಕ್ಷದ ವತಿಯಿಂದ ಬಳ್ಳಾರಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಅನಿಲ್ ಕುಮಾರ್ ಮೋಕಾ ಅವರ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡಿದ್ದ ಪ್ರಭುದ್ಧರ ಸಭೆಯಲ್ಲಿ ಶ್ರೀಮತಿ ಗಾಲಿ ಲಕ್ಷ್ಮಿಅರುಣ_ಜನಾರ್ದನರೆಡ್ಡಿ ಅವರು ಪಾಲ್ಗೊಂಡಿದ್ದರು.
ಹುಬ್ಬಳ್ಳಿ ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕರು, ವಿರೋಧ ಪಕ್ಷದ ಉಪನಾಯಕರಾದ ಅರವಿಂದ್ ಬೆಲ್ಲದ್ ಅವರ ಉಪಸ್ಥಿತಿಯಲ್ಲಿ ಪ್ರಭುದ್ಧರ ಸಭೆಯಲ್ಲಿ ನೂರಾರು ಜನ, ವೈದ್ಯರು, ಚಾರ್ಟೆಡ್ ಅಕೌಂಟೆಂಟ್ ಗಳು, ವಕೀಲರು, ವ್ಯಾಪಾರಿಗಳು ಮತ್ತು ಕೈಗಾರಿಕೋದ್ಯಮಿಗಳು ಪಾಲ್ಗೊಂಡು ಚುನಾವಣೆಯ ಕುರಿತು ಹಾಗೂ ಅಭಿವೃದ್ಧಿ ಕಾರ್ಯಗಳ ಕುರಿತು ಚರ್ಚಿಸಿದರು.
ಈ ಕಾರ್ಯಕ್ರಮದಲ್ಲಿ ಬಳ್ಳಾರಿ ನಗರ ಮಾಜಿ ಶಾಸಕರಾದ ಸೋಮಶೇಖರ ರೆಡ್ಡಿ ಅವರು, ವಿಧಾನ ಪರಿಷತ್ ಸದಸ್ಯರಾದ ಸತೀಶ್ ರವರು. ಡಾ. ಮಾಹಿ ಪಾಲ್ ರವರು. ಪೋಲರಾಧಾಕೃಷ್ಣ ರವರು. ಬಿಜೆಪಿ ಮುಖಂಡರಾದ ಮಹೇಶ್ವರ್ ಸ್ವಾಮಿ ರವರು. ಶ್ರೀಮತಿ ಪ್ರಭಾ ಅವರು, ಬಿ ಕೆ ಸುಂದರ್ ಅವರು, ಶ್ರೀ ರಮೇಶ್ ಗೋಪಾಲ್ ಅವರು, ಶ್ರೀಮತಿ ಡಾಕ್ಟರ್ ಅರುಣಾ ರವರು, ಶ್ರೀ ಡಾಕ್ಟರ್ ರವಿ ರೆಡ್ಡಿಯವರು. ಯುವ ಮುಖಂಡರಾದ ಸುಧಾಕರ್ ರೆಡ್ಡಿ ಅವರು ಮತ್ತು ಅನೇಕ ಮುಖಂಡರುಉಪಸ್ಥಿತರಿದ್ದರು.
