ಶರಣ ಸಂಸ್ಕೃತಿ ಉಳಸಿ ಬೆಳಸಿ:
ಬಸವಲಿಂಗೇಶ್ವರ ಸ್ವಾಮಿಜಿ
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ, ೧೯- ಪ್ರತಿಯೊಬ್ಬ ಮಾನವರು ಮನುಷ್ಯತ್ವವನ್ನು ಅಳವಡಿಸಿಕೊಂಡಾಗ ಮಾತ್ರ ಶರಣ ಸಂಸ್ಕೃತಿ ಉಳಿಯಲು ಸಾಧ್ಯ, ದುಡಿಯುವ ಕೈಗಳನ್ನು ಗೌರವಿಸುವಂತಾಗಬೇಕು ಎಂದು ಸಂಸ್ಥಾನ ಹಿರೇಮಠದ ಪೀಠಾಧಿಪತಿ ಸಿದ್ದರಾಮೇಶ್ವರ ಸ್ವಾಮೀಜಿ ಹೇಳಿದರು.
ಪಟ್ಟಣದ ಶ್ರೀಮೊಗ್ಗಿಬಸವೇಶ್ವರ ದೇವಸ್ಥಾನ ಆವರಣದಲ್ಲಿ ಹಮ್ಮಿಕೊಂಡಿದ್ದ ಶ್ರೀಧರ ಮುರುಡಿಮಠದ ಶ್ರೀ ಬಸವಲಿಂಗೇಶ್ವರ ಸ್ವಾಮೀಜಿಗಳ 22 ನೇ ವಾರ್ಷಿಕ ಪಟ್ಟಾಧಿಕಾರಿ ಮಹೋತ್ಸವದ ನಿಮಿತ್ಯ ನಡೆದ ಧಾರ್ಮಿಕ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ದೇವರು ನೀಡಿದ ಬದುಕನ್ನು ಸ್ಮರಿಸುವುದು ಅಗತ್ಯ ಸಮಾಜದಲ್ಲಿ ನೊಂದವರ ಕಲ್ಯಾಣಕ್ಕಾಗಿ ಒಂದಿಷ್ಟು ಸೇವೆ ಮಾಡಬೇಕು ದಾನ ಧರ್ಮ ಗುಣಗಳೇ ನಮ್ಮನ್ನು ಎತ್ತರಕ್ಕೆ ಬೆಳೆಸುತ್ತವೆ ಮತ್ತು ಅಧಿಕಾರ ಮತ್ತು ಹಣದಾಸೆಗಾಗಿ ಮಾನವೀಯ ಮೌಲ್ಯಗಳು ದೂರವಾಗುತ್ತಿರವುದು ಕಳವಳಕಾರಿ ಸಂಗತಿ ಎಂದು ಹಂಪಸಾಗರದ ನವಲಿ ಹಿರೇಮಠದ ಅಭಿನವ ಶಿವಲಿಂಗೇಶ್ವರ ರುದ್ರಮನಿ ಸ್ವಾಮೀಜಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಕುಕನೂರು ಪಟ್ಟಣದ ಶ್ರೀ ಅನ್ನದಾನೇಶ್ವರ ಮಠದ ಡಾ. ಮಹದೇವ ಸ್ವಾಮೀಜಿ ಮಾತನಾಡಿ ಶರಣರ ಮಾರ್ಗದಲ್ಲಿ ನಡೆದರೆ ಜೀವನ ಸಾರ್ಥಕ ಆಗುವುದು ಎಂದು ಹೇಳಿದರು.
ತುಲಾಭಾರ : ಬಸವಲಿಂಗೇಶ್ವರ ಶಿವಾಚಾರ್ಯ ಸ್ವಾಮೀಜಿಗಳಿಗೆ ತುಲಾಭಾರ ಸೇವೆಯನ್ನು ಭಕ್ತರು ನೇರವೇರಿಸಿದರು ಈ ಸಂದರ್ಭದಲ್ಲಿ ವೀರಭದ್ರಯ್ಯ ,ಬಸವಲಿಂಗಯ್ಯ, ಲಿಂಗರಾಜ ಸುರಕೋಡ, ಜೀವನಸಿಂಗ, ರಾಜು ಪುರೋಹಿತ , ಶಿವುಕುಮಾರ ಭೂತೆ, ಆದೇಶ ಹುಬ್ಬಳ್ಳಿ, ಈಶಪ್ಪ ಬನ್ನಿಕೊಪ್ಪ, ಮಹೇಶ ಹುಬ್ಬಳ್ಳಿ, ಬಸವರಾಜ ಕೊಳ್ಳಿ, ಮಲ್ಲಪ್ಪ ಭೂತೆ, ಶರಣಪ್ಪ ದಿವಟರ್ ಇತರರಿದ್ದರು.
