WhatsApp Image 2024-03-11 at 6.09.52 PM

ಶಾಸಕರಾಗಿ ಒಂದು ವರ್ಷವಾದರೂ ಯಾವುದೇ ಕಾಮಗಾರಿ ನೆಡೆದಿಲ್ಲ : ಮಾಜಿ ಸಚಿವ ಹಾಲಪ್ಪ ಆಚಾರ್

ಕರುನಾಡ ಬೆಳಗು ಸುದ್ದಿ

ಯಲಬುರ್ಗಾ,11- ಜನಸಾಮಾನ್ಯರನ್ನು ಗುರುತಿಸಿ ಉನ್ನತ ಸ್ಥಾನ ಮಾನ ನೀಡುವ ರಾಷ್ಟ್ರೀಯ ಪಕ್ಷ ಯಾವುದಾದರು ಇದ್ದರೆ ಅದು ನಮ್ಮ ಬಿಜೆಪಿ ಪಕ್ಷ ಈಗಾಗಲೇ ಸಾಮಾನ್ಯ ಕಾರ್ಯಕತ೯ ನಾರಾಯಣಸಾ ಬಾಂಡಿಗಾ ಅವರಿಗೆ ರಾಜ್ಯ ಸಭಾ ಸ್ಥಾನ ನೀಡಿದೆ ಹೀಗೆ ಪಕ್ಷದ ಅನೇಕರಿಗೆ ಉನ್ನತ ಹುದ್ದೆಗಳನ್ನು ನೀಡಿದ ಕಿತಿ೯ ಬಿಜೆಪಿಗೆ ಸಲುತ್ತದೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷವಾದರೂ ತಾಲೂಕಿನಲ್ಲಿ ಒಂದೇ ಒಂದು ಹೊಸ ಕಾಮಗಾರಿ ಆರಂಭವಾಗಲ್ಲ ಸರಕಾರ ಉತ್ತಮ ಆಡಳಿತ ನೀಡುವಲ್ಲಿ ವಿಫಲವಾಗಿದೆ ಎಂದು ಮಾಜಿ ಸಚಿವ ಹಾಲಪ್ಪ ಆಚಾರ ಹೇಳಿದರು.

ಪಟ್ಟಣದ ಬುದ್ಧ ಬಸವ ಅಂಬೇಡ್ಕರ್ ಭವನದಲ್ಲಿ ತಾಲೂಕು ಬಿಜೆಪಿಯಿಂದ ಆಯೋಜಿಸಿದ್ದ ಯಲಬುರ್ಗಾ ತಾಲೂಕು ಮಂಡಲ ನೂತನ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಯಲಬುರ್ಗಾ ಮಂಡಲದಲ್ಲಿ ಮಾರುತಿ ಗಾವರಾಳ ಆರು ವರ್ಷಗಳ ಕಾಲ ತಾಲೂಕು ಪ್ರಧಾನ ಕಾರ್ಯದರ್ಶಿಯಾಗಿ ಶ್ರದ್ದೆ, ಪ್ರಾಮಾಣಿಕತೆಯಿಂದ ಪಕ್ಷ ವಹಿಸುವ ಎಲ್ಲ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವ ಮೂಲಕ ಇಂದು ತಾಲೂಕು ಮಂಡಲ ಅಧ್ಯಕ್ಷ ಸ್ಥಾನ ಪಡೆಯುವಲ್ಲಿ ಆತನ ಪರಿಶ್ರಮವೇ ಕಾರಣವಾಗಿದೆ. ಪದವಿಗಾಗಿ ಯಾರೂ ಬೆನ್ನತ್ತಿ ಹೋಗಬಾರದು ಆದರೆ ನಮ್ಮನ್ನು ಹುಡುಕಿಕೊಂಡು ಪದವಿ ಬರಬೇಕು ಪಕ್ಷದ ಕಾರ್ಯಕರ್ತರು ತಳಮಟ್ಟದ ಪಕ್ಷದ ಸಂಘಟನೆಗಾಗಿ ಎಲ್ಲರೂ ಶ್ರಮಿಸುವ ಮೂಲಕ ಮತ್ತೋಮೆ ನರೇಂದ್ರ ಮೋದಿ ಅವರನ್ನು ಪ್ರಧಾನಿಯಾಗಬೇಕಾದರೆ ಇಲ್ಲಿ ಸಂಗಣ್ಣ ಕರಡಿ ಅವರ ಗೆಲುವುವಿಗೆ ಪಕ್ಷದ ಎಲ್ಲರೂ ಶ್ರಮಿಸಬೇಕು ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ನವೀನಕುಮಾರ ಗುಳಗಣ್ಣನವರ್‌ಮಾತನಾಡಿ, ಮುಂಬರುವ ಯಲಬುರ್ಗಾ ವಿಧಾನಸಭಾ ಕ್ಷೇತ್ರದಿಂದ ಲೋಕಸಭಾ ಚುನಾವಣೆಯ ಅಭ್ಯರ್ಥಿಗೆ ಅತೀ ಹೆಚ್ಚು ಮತಗಳನ್ನು ಹಾಕುವ, ಹಾಕಿಸುವ ಮೂಲಕ ಪಕ್ಷದ ಎಲ್ಲ ಕಾರ್ಯಕರ್ತರು, ಪದಾಧಿಕಾರಿಗಳು, ಮುಖಂಡರು ಪಕ್ಷ ನಿಷ್ಠೆಯಿಂದ ಶ್ರಮಿಸಬೇಕು ಎಂದರು.

ಮಾಜಿ ಶಾಸಕ ಬಸವರಾಜ ದಡೆಸಗೂರ ಮಾತನಾಡಿ ನಮ್ಮ ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತರಿಗೆ ದೊಡ್ಡ ದೊಡ್ಡ ಹುದ್ದೆಯನ್ನು ನೀಡುವ ಪಕ್ಷವಾಗಿದೆ ಎಂದರು.

ನೂತನ ಮಂಡಲ ಅಧ್ಯಕ್ಷ ಮಾರುತಿ ಗಾವರಾಳ ಅಧಿಕಾರ ಸ್ವೀಕರಿಸಿದರು.

ವಿಪ ಸದಸ್ಯೆ ಹೇಮಲತಾ ನಾಯಕ, ಸಂಸದ ಸಂಗಣ್ಣ ಕರಡಿ, ಮಾಜಿ ಶಾಸಕ ಬಸವರಾಜ ದಡೇಸೂರು, ಬಿಜೆಪಿ ವಕ್ತಾರ ವೀರಣ್ಣ ಹುಬ್ಬಳ್ಳಿ, ಮಂಡಲದ ಮಾಜಿ ಅಧ್ಯಕ್ಷ ವಿಶ್ವನಾಥ ಮರಿಬಸಪ್ಪನವರ್‌ ಮಾತನಾಡಿದರು.

ಅತಿಥಿಗಳಾಗಿ ಬಸವಲಿಂಗಪ್ಪ ಭೂತೆ, ಸಿ.ಎಚ್. ಪಾಟೀಲ, ಬಸವರಾಜ ಗೌರಾ, ತಿಪ್ಪೇರುದ್ರಯ್ಯಸ್ವಾಮಿ, ಎಲ್.ಗಿರಿಗೌಡ, ಕೆ.ಮಹೇಶ, ಅರವಿಂದಗೌಡ ಪಾಟೀಲ, ಕಳಕಪ್ಪ ಕಂಬಳಿ, ಶಿವಶಂಕರರಾವ್ ದೇಸಾಯಿ, ರತನ್ ದೇಸಾಯಿ, ಶಂಕ್ರಪ್ಪ ಸುರಪುರ, ಗಾಳೆಪ್ಪ ಓಜನಹಳ್ಳಿ, ಫಕೀರಪ್ಪ ತಳವಾರ, ಶ್ರೀನಿವಾಸ ತಿಮ್ಮಾಪುರ, ಅಮರೇಶ ಹುಬ್ಬಳ್ಳಿ, ಶಿವಪ್ಪ ವಾದಿ, ಶಿವಲೀಲಾ ದಳವಾಯಿ ಮತ್ತು ಪಕ್ಷದ ಕಾರ್ಯಕರ್ತರು ಮತ್ತು ಇತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!