ಶೈಲಜಾಗೆ ಪಿಎಚ್ ಡಿ ಪದವಿ ಪ್ರದಾನ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 15- ನಗರದ ಶ್ರೀ ಗವಿಸಿದ್ದೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿರುವ ಶ್ರೀಮತಿ ಶೈಲಜಾ ಅರಳೆಲೆಮಠ ಅವರಿಗೆ ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ ಶಿಕ್ಷಣ ವಿಷಯದಲ್ಲಿ ಪಿ.ಎಚ್.ಡಿ. ಪ್ರದಾನ ಮಾಡಿದೆ.
ಪ್ರೊ. ವೆಂಕೋಬಾ ನಾರಾಯಣಪ ಅವರ ಮಾರ್ಗದರ್ಶನದಲ್ಲಿ “ಎ ಸ್ಟಡಿ ಆಫ್ ಸೋಷಿಯಲ್, ಎಮೋಶನಲ್ ಐಂಡ್ ಕಾಗ್ನಿಟಿವ್ ಡೆವೆಲಪ್‌ಮೆಂಟ ಆಫ್ ಸೆಕೆಂಡರಿ ಸ್ಕೂಲ ಸ್ಟೂಡೆಂಟ್ಸ ಇನ್ ರಿಲೇಶನ್ ಟು ದೇರ್ ಅಕ್ಯಾಡೆಮಿಕ್ ಅಚೀವಮೇಂಟ್” ಎಂಬ ಮಹಾಪ್ರಬಂದಕ್ಕೆ ಪದವಿ ನೀಡಿದ್ದು , ಗವಿಮಠದ ಪೂಜ್ಯ ಶ್ರೀಗಳು, ಆಡಳಿತ ಮಂಡಳಿಯವರು ಹಾಗೂ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರು, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಅಭಿನಂದನಂದಿಸಿದ್ದಾರೆ.
