ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆ
ಬೇಳೂರು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ
ಗ್ರಂಥಾಲಯ ಪುಸ್ತಕ ಖರೀದಿಸಲು ೧೦ ಸಾವಿರ ಸಹಾಯಧನ
ಕೊಪ್ಪಳ, ೧೭- ತಾಲೂಕಿನ ಬೇಳೂರು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ಶಾಲೆಯಲ್ಲಿ ಧ್ವಜಾರೋಹಣ ನೇರವೆರಿಸುವ ಮೂಲಕ ಕರ‍್ಯಕ್ರಮ ಆಚರಿಸಲಾಯಿತು. ಶಿಕ್ಷಕರು , ಶಾಲಾಮಕ್ಕಳು ಹಾಗೂ ಗ್ರಾಮದ ಪ್ರಮುಖರು ಭಾಗವಹಿಸಿದ್ದರು.
ದೇಣಿಗೆ : ಬೇಳೂರು ಹಾಲು ಉತ್ಪಾದಕರ ಸಹಕಾರ ಸಂಘದಿಂದ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ೨೫ ವಿದ್ಯಾರ್ಥಿಗಳ ಮನೆ ಗ್ರಂಥಾಲಯಕ್ಕೆ ಪುಸ್ತಕ ಖರೀದಿಸಲು ೧೦ ಸಾವಿರ ರೂಪಾಯಿಯ ಚೆಕ್ ರೂಪದ ಧನ ಸಹಾಯವನ್ನು ಶಾಲಾ ಗ್ರಂಥಾಲಯ ಕ್ಲಬ್ ನ ಸದಸ್ಯರಿಗೆ ಕೊಡಲಾಯಿತು.
ಈ ಸಂದರ್ಭದಲ್ಲಿ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಫಕೀರಪ್ಪ ಲದ್ದಿ, ಉಪಾಧ್ಯಕ್ಷ ಬಸವರಾಜ ತಳವಾರ, ಹಾಗೂ ನಿರ್ದೇಶಕರುಗಳಾದ ಶಿವಾನಂದ ಹಡಪದ, ಗವಿಸಿದ್ದಪ್ಪ ತಳವಾರ, ಗವಿಸಿದ್ದಪ್ಪ ಮೀನಾಪಟ್ಟಿ, ಕಾರ್ಯದರ್ಶಿ ಬಸವರಾಜ ಬೆಳನಾಳ, ಬೆಟದಪ್ಪ ಗೊಂದಿಹೊಸಳ್ಳಿ, Sdmc ಅಧ್ಯಕ್ಷ ಬಸವರಾಜ ಕೊಪ್ಪಳ, ಮುಖ್ಯಗುರುಗಳಾದ ದೇವೇಂದ್ರಪ್ಪ ಕುರುಡಗಿ ಹಾಗೂ ಶಿಕ್ಷಕರಾದ ಸುನೀಲ್ ಕುಮಾರ್ ಇತರರು ಹಾಜರಿದ್ದರು.
