Untitled

೧೨ ದಿನಗಳ ಕಾಲ ಪ್ರಯಾಗರಾಜ್ ಯಾತ್ರೆ ಸಂಪನ್ನ

ಶ್ರೀಗಳಿಗೆ ಅದ್ಧೂರಿ ಸ್ವಾಗತ ರಾಜಬೀದಿಯಲ್ಲಿ ಮೆರವಣಿಗೆ

ಕರುನಾಡ ಬೆಳಗು ಸುದ್ದಿ
ಯಲಬುರ್ಗಾ, 06- ಉತ್ತರಪ್ರದೇಶದ ಪ್ರಯಾಗರಾಜ್ ಮಹಾಕುಂಭಮೇಳ ನಿಮಿತ್ಯ ೧೨ದಿನಗಳ ಕಾಲ ಯಾತ್ರೆಯನ್ನು ಯಶಸ್ವಿಯಾಗಿ ಮುಗಿಸಿ ಬುಧವಾರ ಪಟ್ಟಣಕ್ಕೆ ಆಗಮಿಸಿದ ಶ್ರೀಧರಮುರಡಿ ಹಿರೇಮಠದ ಪೀಠಾಧಿಪತಿ ಬಸವಲಿಂಗೇಶ್ವರ ಸ್ವಾಮೀಜಿ ಹಾಗೂ ಶ್ರೀಗಳನ್ನು ಅದ್ದೂರಿಯಾಗಿ ಭಕ್ತರ ಸಮೂಹವು ಸ್ವಾಗತಿಸಿ ಶ್ರೀಗಳನ್ನು ಬರಮಾಡಿಕೊಂಡರು.
ಪಟ್ಟಣದ ಶ್ರೀವಿಜಯದುರ್ಗಾದೇವಿ ದೇವಸ್ಥಾನಕ್ಕೆ ಆಗಮಿಸಿದ ಶ್ರೀಗಳನ್ನು ಭಕ್ತರು ಮಾಲಾರ್ಪಣೆ ಮಾಡಿ, ಮಹಿಳೆಯರು ಆರತಿ ಬೆಳೆಗಿ ಸಡಗರ ಸಂಭ್ರಮದಿಂದ ಮೆರವಣಿಗೆ ಮುಖಾಂತರ ಮಠಕ್ಕೆ ತೆರಳಿದರು. ಮಠದಲ್ಲಿ ಹೂವಿನ ಅಲಂಕಾರಗೊಳಿಸಿ ಸಡಗರದಿಂದ ಶ್ರೀಗಳನ್ನು ಆಹ್ವಾನಿಸಿದರು.
ಶ್ರೀಗಳಾದ ಬಸವಲಿಂಗೇಶ್ವರ ಸ್ವಾಮೀಜಿ, ಒಪ್ಪತ್ತೇಶ್ವರ ಸ್ವಾಮೀಜಿ, ಗುರು ಸಿದ್ದೇಶ್ವರ ಸ್ವಾಮೀಜಿ, ಗಂಗಾಧರೇಶ್ವರ ಸ್ವಾಮೀಜಿಯವರು ಅವರು ಅಯೋಧ್ಯ ಕಾಶಿ ಇತರೆ ಧಾರ್ಮಿಕ ಪುಣ್ಯಕ್ಷೇತ್ರಗಳಲ್ಲಿ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ. ಧರ್ಮ ಪಾಲನೆ ಅಗತ್ಯ:ಶ್ರೀಧರಮುರಡಿ ಹಿರೇಮಠದ ಪೀಠಾಧಿಪತಿ ಬಸವಲಿಂಗೇಶ್ವರ ಸ್ವಾಮೀಜಿ ಮಾತನಾಡಿ ಪ್ರತಿಯೊಬ್ಬರೂ ಜೀವನದಲ್ಲಿ ಧರ್ಮ, ಸತ್ಯ, ನ್ಯಾಯ, ನಿಷ್ಠೆ, ಪ್ರಾಮಾಣಿಕವಾಗಿ ಇದ್ದಾಗ ಮಾತ್ರ ದೇವರ ಕಾಣಬಹುದು, ಪ್ರಯಾಗರಾಜ್ ಯಾತ್ರೆ ನೋಡಿದಾಗ ಅಲ್ಲಿನ ಸಾಧುಗಳ ರೂಪದಲ್ಲಿ ದೇವರ ದರ್ಶನ ಸಿಗುತ್ತದೆ. ಎಲ್ಲರ ಜೀವನದಲ್ಲಿ ಧರ್ಮ ಪಾಲನೆ ಮಾಡಿದಾಗ ಬದುಕು ಸಾರ್ಥಕಗೊಳ್ಳುತ್ತದೆ. ಪ್ರಯಾಗರಾಜ್ ಯಾತ್ರೆ ಅತ್ಯಂತ ಧಾರ್ಮಿಕವಾಗಿ ಇತಿಹಾಸ ಪಡೆದುಕೊಂಡಿದೆ ಎಂದರು.
ಗುಳೇದಗುಡ್ಡದ ಅಭಿನವ ಶ್ರೀಒಪ್ಪತ್ತೇಶ್ವರ ಸ್ವಾಮೀಜಿ ಮಾತನಾಡಿ ಪ್ರಯಾಗರಾಜ ಯಾತ್ರೆ ಮಹಾಕುಂಭಮೇಳ ದೇಶದ ಇತಿಹಾಸದಲ್ಲಿ ಇದೊಂದು ಐತಿಹಾಸಿಕ ಮಹಾಸಂಗಮವಾಗಿದೆ. ೬೬ ಕೋಟಿ ಹೆಚ್ಚು ಜನರು ಪ್ರಯಾಗರಾಜಗೆ ಭೇಟಿ ನೀಡಿದ್ದಾರೆ ಎಂದು ವರದಿಯಾಗಿದೆ. ಇದು ಯಾವ ದೇಶದಲ್ಲಿ ಇಷ್ಟೊಂದು ಜನ ಸೇರುವ ಉದಾಹರಣೆ ಇಲ್ಲ, ಆದರೆ ನಮ್ಮ ಸನಾತನ ಧರ್ಮದ ಪ್ರತಿಕವಾಗಿರುವ ಮಹಾ ಕುಂಭಮೇಳ ಸಾಕ್ಷಿಯಾಗಿದೆ.ಇಂತಹ ಪುಣ್ಯಕ್ಷೇತ್ರಗಳಲ್ಲಿ ಭೇಟಿ ನೀಡಿರುವುದರಿಂದ ಆಧ್ಯಾತ್ಮಿಕವಾಗಿ ನೆಮ್ಮದಿ ದೊರೆಯುತ್ತದೆ. ಅಲ್ಲಿನ ಸಾಧುಗಳ ಧರ್ಮ ನಿಷ್ಠೆಗೆ ನಾವೆಲ್ಲರೂ ಬದ್ಧರಾಗಿರಬೇಕು. ಶ್ರೀಮಠದಲ್ಲಿ ನಡೆಯುವ ಮುಂಬರುವ ಕಾಶಿಯಾ ಶ್ರೀಗಳು, ಸಾಧುಗಳನ್ನು ಕರೆತರುವ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ರೋಣದ ಗಂಗಾಧರೇಶ್ವರ ಸ್ವಾಮೀಜಿ, ಜಿಗೇರಿಯ ಗುರುಸಿದ್ದೇಶ್ವರ ಸ್ವಾಮೀಜಿ, ಇಟಗಿಯ ಗುರುಶಾಂತವೀರ ಸ್ವಾಮೀಜಿ ಹಾಗೂ ಶ್ರೀಮಠದ ಭಕ್ತರು ಇದ್ದರು

Leave a Reply

Your email address will not be published. Required fields are marked *

error: Content is protected !!