ಶ್ರೀ ಆಂಜನೇಯ ಹುಂಡಿ : 56 ದಿನಗಳಲ್ಲಿ ರೂ. 30,21,253 ರೂ ಸಂಗ್ರಹ
ಕರುನಾಡ ಬೆಳಗು ಸುದ್ದಿ
ಗಂಗಾವತಿ, 23- ಶ್ರೀ ಆಂಜನೇಯ ದೇವಸ್ಥಾನ ಅಂಜನಾದ್ರಿ ಬೆಟ್ಟ ಆನೆಗುಂದಿ (ಚಿಕ್ಕರಾಂಪುರ)ದಲ್ಲಿ ಸಹಾಯಕ ಆಯುಕ್ತ ಕ್ಯಾಪ್ಟನ್ ಮಹೇಶ್ ಮಾಲಗಿತ್ತಿ ಹಾಗೂ ಅಂಜನಾದ್ರಿ ಅಂಜನೇಯ ಸ್ವಾಮಿ ದೇವಸ್ಥಾನದ ಕಾರ್ಯನಿರ್ವಾಹಣಾಧಿಕಾರಿಗಳು ಇವರ ಆದೇಶದ ಪ್ರಕಾರ ತಹಶೀಲ್ದಾರ ಯು ನಾಗರಾಜ ಇವರ ನೇತೃತ್ವದಲ್ಲಿ ಶ್ರೀ ಆಂಜನೆಯ ದೇವಸ್ಥಾನ ಚಿಕ್ಕರಾಂಪೂರ ಅಂಜನಾದ್ರಿ ಬೆಟ್ಟದಲ್ಲಿ ಹುಂಡಿ ತೆರೆಯಲಾಯಿತು.
(ದಿ. 27-03-2024 ರಿಂದ 21-05-2024 ರವರೆಗೆ ಒಟ್ಟು 56 ದಿನಗಳ ಅವಧಿಯಲ್ಲಿ) ಒಟ್ಟು *ರೂ. 30,21,253/-* ರೂ ಗಳು ಸಂಗ್ರಹವಾಗಿರುತ್ತದೆ. *5 ವಿದೇಶಿ ನಾಣ್ಯಗಳು( *ಪಾಕಿಸ್ತಾನ ,ಮೊರಾಕೊ, ಯುಎಸ್ಎ, ಶ್ರೀಲಂಕಾ ,ನೇಪಾಳ)** ಹುಂಡಿಯಲ್ಲಿ ಸಂಗ್ರಹವಾಗಿರುತ್ತವೆ.
ಈ ಸಂದರ್ಭದಲ್ಲಿ ಶಿರಸ್ತೇದಾರಾದ ರವಿಕುಮಾರ ನಾಯಕ್ವಾಡಿ, ಕೃಷ್ಣವೇಣಿ, ಕಂದಾಯ ನಿರೀಕ್ಷಕರಾದ ಮಂಜುನಾಥ ಹಿರೇಮಠ್ , ಮಹೇಶ್ ದಲಾಲ, ಹಾಲೇಶ ಗುಂಡಿ ತಹಶೀಲ್ ಕಾರ್ಯಾಲಯದ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಪೊಲೀಸ್ ಬಂದೊಬಸ್ಥ ಹಾಗೂ ಸಿಸಿ ಟಿವಿ ಕ್ಯಾಮೆರಾ ಹಾಗೂ ವಿಡಿಯೋ ಕಣ್ಗಾವಲಿನಲ್ಲಿ ನಡೆಯಿತು.
