
ಶ್ರೀ ಶರಣ ಬಸವೇಶ್ವರ ಪುರಾಣ ಮಹಾ ಮಂಗಲೋತ್ಸವ ಮತ್ತು 9 ಜೋಡಿಗಳ. ಉಚಿತ ಸಾಮೂಹಿಕ ವಿವಾಹ
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ,29- ತಾಲೂಕಿನ ಹಿರೇವಡ್ರಕಲ್ ಗ್ರಾಮದಲ್ಲಿ 9 ನೇ ವರ್ಷದ ಈಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಕಲಿಯುಗದ ದಾಸೋಹ ಮೂರ್ತಿ ಶ್ರೀ ಕಲಬುರಗಿ ಶರಣಬಸವೇಶ್ವರ ಪುರಾಣವನ್ನು ಚಿಕ್ಕಬೊಮ್ಮನಾಳ ಮಲ್ಲಿಕಾರ್ಜುನ ಸ್ವಾಮಿ ಸೋಮನಾಳ ಹಾಗೂ ಭರಮಣ್ಣ ಜಿನ್ನಾಪೂರ, ರವರಿಂದ ಸಾಗಿ ಬಂದು ಇಂದು ಮಹಾ ಮಂಗಲೋತ್ಸವ ನಡೆಯಿತು.
ಶರಣ ಬಸವೇಶ್ವರ ಪೂರಾಣ ಮಹಾಮಂಗಲ ಪ್ರಯುಕ್ತ ಇಂದು ಬೆಳಿಗ್ಗೆ ಶ್ರೀ ಶರಣ ಬಸವೇಶ್ವರ ಭಾವಚಿತ್ರವನ್ನು ಗ್ರಾಮದ ಪ್ರಮುಖ ರಾಜ ಬೀದಿಗಳ ಮುಖಾಂತರ ಮೆರವಣಿ ಸಾಗಿ ಮೆರವಣಿಗೆಯಲ್ಲಿ ಸಕಲ ವಾದ್ಯಮೇಳ ದೊಂದಿಗೆ ಮಹಿಳೆಯರಿಂದ ಕುಂಭ ಕಳಸ ಕನ್ನಡಿ ಅತಿ ಉತ್ಸಾಹದಿಂದ ನೇರವೇರಿತು ಈ ಕಾರ್ಯಕ್ರಮದಲ್ಲಿ 9 ಜೋಡಿಗಳ ಉಚಿತ ಸಾಮೂಹಿಕ ವಿವಾಹಗಳು ನೇರವೇರಿತ್ತು ಮದುವೆಯಾದ 9 ಜೋಡಿಗಳು ನವದಾಂಪತ್ಯೆ ಜೀವನಕ್ಕೆ ಪಾದ೯ಪಣೆ ಮಾಡಿದರು.
ಕಾರ್ಯಕ್ರಮದ ಕಟಗಿಹಳ್ಳಿಯ ವೀರಯ್ಯ ಹಿರೇಮಠ,ಗ್ರಾಮದ ಹುಚ್ಚಿರೇಶ್ವರ ಮಠದ ವೀರಯ್ಯ ಸ್ವಾಮಿಗಳು, ಸುಭಾಷ ಚಂದ್ರಯ್ಯ ಸ್ವಾಮಿಗಳು, ಸಾನ್ನಿಧ್ಯ ವಹಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರುಗಳಾದ ಶರಣಪ್ಪ ಜಿನ್ನಾಪುರ, ಹನುಮೇಶಪ್ಪ ಹನುಮನಾಳ ,ಹನುಮರೆಡ್ಡಿ ರೆಡ್ಡೆರ ,ಹನುಮಂತಪ್ಪ ಹೊರಪೇಟಿ ,ಮರಿಯಪ್ಪ ಓಲೆಕಾರ, ಮಾರುತಿ ಪಿ ಆರ್ ಹೆಗ್ಡೆ ,ಶಂಕರ್ ಅಂಗಡಿ, ಬಸವರಾಜ್ ಕಡಾಪುರ, ಭೀಮನಗೌಡ ಅಂಗಡಿ, ಗಿರೇಗೌಡ ಪೋಲೀಸ್ ಪಾಟೀಲ್ , ಹನುಮಂತಪ್ಪ ತರಲಕಟ್ಟಿ, ನಿರುಪಾದಿ ಹನುಮನಾಳ, ಹನುಮೇಶ ಸುಣಗಾರ,ಸೇರಿದಂತೆ ಮತ್ತು ಇತರರು ಜಾತ್ರೆಯಲ್ಲಿ ಭಾಗವಹಿಸಿದ್ದರು.