
ಸಂಗಣ್ಣ ಕರಡಿ ಜನ್ಮದಿನ ; ರಕ್ತದಾನ ಶಿಬಿರ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 18-ಸಂಸದ ಸಂಗಣ್ಣ ಕರಡಿಯವರ ೭೩ನೇ ಜನ್ಮದಿನದ ನಿಮಿತ್ತವಾಗಿ ಕರಡಿ ಪೌಂಡೇಶನ್ ವತಿಯಿಂದ ನಗರದಲ್ಲಿ ಶನಿವಾರ ರಕ್ತದಾನ ಶಿಬಿರ ಜರುಗಿತು.
ಸಂಸದ ಸಂಗಣ್ಣ ಕರಡಿ ಅಭಿಮಾನಿಗಳು ಮತ್ತು ಬಿಜೆಪಿ ಕಾರ್ಯಕರ್ತರು ರಕ್ತದಾನ ಮಾಡುವುದ ಮೂಲಕ ಸಂಗಣ್ಣರ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಿದರು.
ಬಿಜೆಪಿ ನಾಯಕಿ ಗೀತಾ ಪಾಟೀಲ್ ಸೇರಿದಂತೆ ಇತರರು ರಕ್ತದಾನ ಮಾಡಿದರು.
ಸಂಸದ ಸಂಗಣ್ಣ ಕರಡಿ, ಪತ್ನಿ ನಿಂಗಮ್ಮ ಕರಡಿ, ಸಂಸದರ ಸೊಸೆ ಹಾಗೂ ಬಿಜೆಪಿ ನಾಯಕಿ ಮಂಜುಳಾ ಕರಡಿ ನೇತೃತ್ವದಲ್ಲಿ ರಕ್ತದಾನ ಶಿಬಿರ ಯಶಸ್ವಿಯಾಯಿತು.
ಬಿಜೆಪಿ ನಗರ ಘಟಕದ ಅಧ್ಯಕ್ಷ ಸುನೀಲ್ ಹೆಸರೂರು, ಬಿಜೆಪಿ ಮುಖಂಡರಾದ ಮುದುರಾ ಕರಣಂ, ಶೋಭಾ ನಗರಿ, ಕೀರ್ತಿ ಪಾಟೀಲ್ ಸೇರಿ ಇತರರು ಇದ್ದರು.