WhatsApp Image 2024-03-19 at 6.18.26 PM

ಸಂಚಾರಿ ನಿಯಮ ಜಾಗೃತಿ ಬೈಕ್ ಜಾಥಾ ಕಾರ್ಯಕ್ರಮ ಜೀವ ರಕ್ಷಣೆಗೆ ಹೆಲ್ಮೆಟ್ ಧರಿಸಿ : ಶಂಶೇ ಆಲಂ

ಕರುನಾಡ ಬೆಳಗು ಸುದ್ದಿ

ಸಿರುಗುಪ್ಪ,19- ವಾಹನ ಚಲಾಯಿಸುವ ತಮ್ಮ ಜೀವ ರಕ್ಷಣೆಗೆ ಪ್ರತಿಯೊಬ್ಬರೂ ಹೆಲ್ಮೆಟ್ ಧರಿಸಬೇಕು ಎಂದು ತಾಲೂಕು ಕಾರ್ಯನಿರ್ವಾಹಕ ದಂಡಾಧಿಕಾರಿ ತಹಸಿಲ್ದಾರ್ ಶಂಶೇ ಆಲಂ ಅವರು ಅಭಿಪ್ರಾಯ ಪಟ್ಟರು.

ನಗರದ ಪೊಲೀಸ್ ಠಾಣ ಮೈದಾನದಲ್ಲಿ ಬಳ್ಳಾರಿ ಜಿಲ್ಲಾ ಪೊಲೀಸ್ ಇಲಾಖೆ ಸಿರುಗುಪ್ಪ ಪೊಲೀಸ್ ವಿಭಾಗ ಸಿರುಗುಪ್ಪ ವೃತ್ತ ಹಮ್ಮಿಕೊಂಡ ಸಂಚಾರಿ ನಿಯಮಗಳ ಜಾಗೃತಿ ಸಾರ್ವಜನಿಕರಿಗೆ ಅರಿವು ಮೂಡಿಸುವ ಬೈಕ್ ಜಾಥಾ ಕಾರ್ಯಕ್ರಮಕ್ಕೆ ಹಸಿರು ಧ್ವಜ ಹಾರಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿ ಪ್ರತಿ ಹೆಜ್ಜೆ ಹೆಜ್ಜೆಯಲ್ಲೂ ರಸ್ತೆ ಸುರಕ್ಷತಾ ನಿಯಮ ಸಾರ್ವಜನಿಕರು ಪಾಲಿಸಬೇಕು ಸಂಚಾರ ನಿಯಮ ಪಾಲನೆ ವಿಚಾರದಲ್ಲಿ ಪೊಲೀಸರೊಂದಿಗೆ ಸಹಕರಿಸಬೇಕು ಎಂದು ಕರೆ ಕೊಟ್ಟರು.

ಡಿ ವೈ ಎಸ್ ಪಿ ವೆಂಕಟೇಶ್ ಅವರು ಮಾತನಾಡಿ ತಮ್ಮ ಜೀವ ಇತರರ ಜೀವ ಉಳಿಸಿಕೊಳ್ಳುವ ಜೀವ ರಕ್ಷಸಿಕೊಳ್ಳಲು ಬೈಕ್ ಓಡಿಸುವ ಮುನ್ನ ಹೆಲ್ಮೆಟ್ ಧರಿಸುವುದು ಮರೆಯಬೇಡಿ ಮೊದಲು ಸುರಕ್ಷತೆಯ ಬಗ್ಗೆ ಯೋಚಿಸಿ ನಂತರ ಚಾಲನೆ ಮಾಡಿ ಅಪಘಾತಗಳು ಮಾನವ ತಪ್ಪುಗಳು ರಸ್ತೆಯಲ್ಲಿ ವಾಹನ ಚಲಾಯಿಸುವ ಎಚ್ಚರವಿರಬೇಕು ಹೆಲ್ಮೆಟ್ ಧರಿಸದ ಬಗ್ಗೆ ಯಾವುದೇ ಸಬೂಬುಗಳನ್ನು ಹೇಳಬಾರದು ವಾಹನ ಹತ್ತಿದಾಕ್ಷಣ ನಿಯಮ ಅನ್ವಯವಾಗುತ್ತದೆ ಹೆಲ್ಮೆಟ್ ಧರಿಸದೆ ಇರುವದು ಕಾನೂನು ಉಲ್ಲಂಘನೆ ಯಾಗುತ್ತದೆ ರಸ್ತೆ ಸುರಕ್ಷತಾ ನಿಯಮಗಳನ್ನು ತಪ್ಪದೇ ಪಾಲಿಸಬೇಕು ಕಾನೂನು ಕಾಯ್ದೆಗಳ ಜನಸಾಮಾನ್ಯರ ಹಿತ ದೃಷ್ಟಿಯಿಂದ ಜಾರಿಗೆ ತರಲಾಗಿದೆ ಚಾಲನೆ ವೇಳೆ ಮೊಬೈಲ್ ಬಳಕೆ ಬೇಡ ಎಂದರುʼ

ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಪವನ್ ಕುಮಾರ್ ಎಸ್ ದಂಡಪ್ಪನವರ್ ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ಗಳಾದ ಸಿರುಗುಪ್ಪದ ಹನುಮಂತಪ್ಪ ಪಿಡಿಹಳ್ಳಿಯ ರುದ್ರಪ್ಪ ತೆಕ್ಕಲಕೋಟೆಯ ಸುಂದರೇಶ್ ಬಳ್ಳಾರಿ ಗ್ರಾಮೀಣದ ಸತೀಶ್ ಭಾರ್ಗವ ಪೊಲೀಸ್ ಸಬ್ ಇನ್ಸ್ಪೆಕ್ಟರ್ ತಿಮ್ಮಣ್ಣ ನಾಯಕ್ ಸಾಮಾಜಿಕ ಕಾರ್ಯಕರ್ತ ಅಬ್ದುಲ್ ನಬಿ ಮತ್ತು ಪೊಲೀಸರು ಇದ್ದರು ಫೆಬ್ರವರಿ ತಿಂಗಳಿನಲ್ಲಿ ಉತ್ತಮ ಸಾಧನೆಯ ಕರ್ತವ್ಯ ನಿರ್ವಹಿಸಿರುವವರಿಗೆ ಸಿರುಗುಪ್ಪ ಪೊಲೀಸ್ ಠಾಣೆಯ ಪಿಎಸ್ಐ ತಿಮ್ಮಣ್ಣ ಸೇರಿ ಉತ್ತಮ ಕರ್ತವ್ಯ ನಿರ್ವಹಿಸಿರುವುದಕ್ಕೆ ಠಾಣೆ ಗಳಿಗೆ ಕಾಪ್ ಆಫ್ ದಿ ಮಂತ್ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು ಈ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳಿಗೆ ಗಣ್ಯರಿಂದ ಶಿರಾ ಸ್ತ್ರಾಣಗಳನ್ನು ನೀಡಲಾಯಿತು ನಂತರ ಪೊಲೀಸ್ ಠಾಣೆ ಆವರಣದಿಂದ ನ್ಯಾಯಾಲಯದವರೆಗೆ ಬೈಕ್ ಜಾಥಾ ನಡೆಸಲಾಯಿತು ಹೆಲ್ಮೆಟ್ ಧರಿಸಿದ ನೂರಕ್ಕಿಂತ ಹೆಚ್ಚಿನ ಪೊಲೀಸ್ ಅಧಿಕಾರಿಗಳು ಜಾಥಾದಲ್ಲಿ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!