ಸಂವಿಧಾನ ರಚನೆಯಿಂದ ಸಮ ಸಮಾಜ ನಿರ್ಮಾಣ
ಸಮಾಜ ಸುಧಾರಣೆಗೆ ಮಿಸಲಾತಿಗೆ ನಾಲ್ವಡಿ ಕೃಷ್ಣರಾಜರು ನಿದರ್ಶನ
ಕರುನಾಡ ಬೆಳಗು ಸುದ್ದಿ
ಗಂಗಾವತಿ,10- ಸಂವಿಧಾನ ರಚನೆಯಿಂದ ಸಮ ಸಮಾಜ ನಿರ್ಮಾಣವಾಗಿದೆ ಎಂದು ಕೊಪ್ಪಳ ವಿಶ್ವವಿದ್ಯಾಲಯ ಕುಲಪತಿ ಡಾ.ಬಿ.ಕೆ.ರವಿ ಹೇಳಿದರು.
ನಗರದ ಕೊಲ್ಲಿ ನಾಗೇಶ್ವರರಾವ ಗಂಗಯ್ಯ ಸರ್ಕಾರಿ ಪ್ರಥಮ ದರ್ಜೇ ಕಾಲೇಜನಲ್ಲಿ ಇತಹಾಸ ಮತ್ತು ಪುರಾತತ್ವ ವಿಭಾಗ ,ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆ ಹಾಗೂ ವಿಭಾಗೀಯ ಪತ್ರಾಗಾರ ಕಛೇರಿ ಸಹಯೋಗದಲ್ಲಿ ನಡೆದ ಒಂದು ದಿನದ ರಾಜ್ಯ ಮಟ್ಟದ ವಿಚಾರ ಸಂಕಿರಣ ಉದ್ಘಾಟಸಿ ಮಾತನಾಡಿ ಸಮಾಜ ಸುಧಾರಣೆಗೆ-ಮಿಸಲಾತಿಗೆ- ಮೈಸೂರು ಸಂಸ್ಥಾನದ ನಾಲ್ವಡಿ ಕೃಷ್ಣರಾಜರ ಕೊಡುಗೆ ಅಪಾರವಾಗಿದೆ ಎಂದರು.
ಮಿಲ್ಲರ ಆಯೋಗದ ಮೂಲಕ ಮೋದಲ ಮಿಸಲಾತಿ ಪರಿಕಲ್ಪನೆ ಕೋಟ್ಟು ಸಂವಿಧಾನ ರಚನೆಗೆ ನಿದರ್ಶನವಾದರು. ನಾಲ್ವಡಿ ಕೃಷ್ಣರಾಜರು ಶಾಲೆಗಳನ್ನು ತೆರೆದರು, ಕೆರೆಗಳ ನಿರ್ಮಾಣ, ಜಲಾಶಯ ನಿರ್ಮಾಣ, ಅನೇಕ ಸಮಾಜ ಸುಧಾರಣೆ ಕೆಲಸಗಳನ್ನು ಕೈಗೊಂಡು ಜನಮಾಸನದಲ್ಲಿ ಅಚ್ಚಳಿಯದೇ ಉಳಿದಿದ್ದಾರೆ ಎಂದು ಹೇಳಿದರು.
ಹೈದ್ರಾಬಾದ ನಿಜಾಂ ಅರಸರ ಆಡಳಿತ ಪದ್ದತಿ ಅವರ ಆಕರಗಳು ನೋಡಿದಾಗ ಶಿಕ್ಷಣಕ್ಕಾಗಿ ವಿಶ್ವವಿದ್ಯಾಲಯಗಳನ್ನು ತೆರದಿದ್ದಾರೆ ಎಂಬುದು ತಿಳಿದು ಬರುತ್ತದೆ. ಇವತ್ತಿಗೂ ರಾಜರ ಸಂಸ್ಥಾನಗಳ ಅವಲೋಕನ ಮಾಡಿದಾಗ ಮೈಸೂರು ಮಹಾರಾಜರು ಮಾತ್ರ ಸಾರ್ವಜನಿಕವಾಗಿ ಅನೇಕ ಜನಪರ ಕಾರ್ಯ ಕೈಗೊಂಡಿದ್ದು ಜನಮಾಮಸದಲ್ಲಿ ಉಳಿದಿದೆ ಎಂದರು.
ಕೊಲ್ಲಿ ನಾಗೇಶ್ವರರಾವ ಗಂಗಯ್ಯ ಸರ್ಕಾರಿ ಪ್ರಥಮ ದರ್ಜೇ ಕಾಲೇಜ ಪ್ರಾಚಾರ್ಯ ಡಾ/ಜಾಜಿ ದೇವೆಂದ್ರಪ್ಪ ಮಾತನಾಡಿ ಹೈದ್ರಬಾದ ಕರ್ನಾಟಕ ಭಾಗವನ್ನು ಅವಲೋಕಿಸಿದಾಗ ದರ್ಗಾಗಳು,ಗುಡಿ(ದೇವಸ್ಥಾನಗಳು) ನಿರ್ಮಾಣ, ಧರ್ಮಧರ್ಮಗಳ ಮಧ್ಯೆ ಸಂಘರ್ಷ ಕಾಣುತ್ತದೆ. ಧಾರ್ಮಿಕ ತಲ್ಲಣಗಳ ಕಾಲಘಟ್ಟವೇ ಹೆಚ್ಚು. ಇತ್ತಿಚೆಗೆ ಕೆಲ ವರ್ಷಗಳ ಹಿಂದೆ ಹೈದ್ರಾಬಾದ ಕರ್ನಾಟಕ ಭಾಗವನ್ನು ಕಲ್ಯಾಣ ಕರ್ನಾಟಕವೆಂದು ನಾಮಕರಣ ಮಾಡಿದಾಗ ಶಿಕ್ಷಣ ಸೇರಿದಂತೆ ಅನೇಕ ಜನಪರ ಬದಲಾವಣೆಗಳು ಕಂಡುಬಂದಿವೆ ಎಂದರು.
ಈ ಸಂದರ್ಭದಲ್ಲಿ ಕಲುರ್ಬುಗಿ ವಿಭಾಗೀಯ ಪತ್ರಾಗಾರ ಕಛೇರಿ ಹಿರಿಯ ಸಹಾಯಕ ನಿದೇಶಕ ಡಾ.ವೀರಶೆಟ್ಟಿ, ಸಹಪ್ರಾಧ್ಯಾಪಕರುಗಳಾದ ಶ್ರೀಮತಿ ಜಗದೇವಿ, ಕಲ್ಲಶೆಟ್ಟಿ,ಕರಿಗೂಳೀ, ಡಾ.ವೈ.ಎಸ್.ವಗ್ಗಿ ಮುಂತಾದವರು
ಉಪಸ್ಥೀತರಿದ್ದರು.
