ಸಂಸ್ಕಾರದಿಂದ ಬದುಕು ಸಾರ್ಥಕ : ಕಲ್ಯಾಣ ಶ್ರೀ
ಕರುನಾಡ ಬೆಳಗು ಸುದ್ದಿ
ಬದುಕಿನ ಸಾರ್ಥಕತೆ ಅಡಗಿರುವುದು ವಿದ್ಯೆ,ಪದವಿ,ಗಳಿಕೆ ಗಳಿಂದಲ್ಲ.ಇವುಗಳನ್ನು ಬಳಸಿ ಕೊಳ್ಳುವುದರಿಂದ.ಬಳಸಿಕೊಳ್ಳಲು ಬೇಕಾದ್ದು ಸಂಸ್ಕಾರ.ಸಂಸ್ಕಾರ ಸಂಸ್ಕ್ರತಿಯ ನೆರಳು.ಸುಶಿಕ್ಷಿತ ಸುಂದರ ಸಮಾಜ ನಿರ್ಮಾಣಕ್ಕೆ ಮಗುವಿಗೆ ಸಂಸ್ಕಾರ ಬೇಕು.ಸಂಸ್ಕಾರಯುತ ಕಾರ್ಯಕ್ರಮ ಗಳನ್ನು ಐವತ್ತೊಂದು ವರ್ಷಗಳಿಂದ ರೂಪಿಸುತ್ತಾ ಬಂದಿರುವ ಹೆಗ್ಗಳಿಕೆ ಬಳ್ಳಾರಿ ಕಲ್ಚರಲ್ ಆಕ್ಟಿವಿಟೀಸ್ ಅಸೋಸಿಯೇಷನ್ ನ್ನಿನದಾಗಿದೆ ಎಂದು ಬಳ್ಳಾರಿ ಕಲ್ಯಾಣ ಸ್ವಾಮಿ ಮಠದ ಶ್ರೀ ಕಲ್ಯಾಣ ಮಹಾ ಸ್ವಾಮಿಗಳು ನುಡಿದರು.
ಬಳ್ಳಾರಿಯ ಪದ್ಮಶಾಲಿ ಸಂಘದ ಸಭಾಂಗಣದಲ್ಲಿ ಜರುಗಿದ ಪಂಡಿತ್ ಮಠಂ ಗುರುಪ್ರಸಾದ್ ರವರು ವಿರಚಿತ ಶ್ರೀ ಶಕೆ 1946 ನೇ ಶ್ರೀ ಕ್ರೋಧಿನಾಮ ಸಂವತ್ಸರದ ಶ್ರೀ ಉಮಾಮಹೇಶ್ವರ ಪಂಚಾಂಗ ಬಿಡುಗಡೆ ಸಮಾರಂಭದಲ್ಲಿ ಸಾನಿಧ್ಯ ನುಡಿಗಳನ್ನಾಡುತ್ತಾ, ಪಂಚಾಂಗವು ಕೈದೀವಿಗೆಯಂತೆ.ಅದೇ ಬದುಕನ್ನು ರೂಪಿಸುವುದಿಲ್ಲ.ಬೆಳಕಿನಲ್ಲಿ ನಾವು ನಮ್ಮನ್ನು ತಿದ್ದಿಕೊಂಡು ಬಾಳಬೇಕೆಂದರು.
ಜ್ಯೋತಿ ಬೆಳಗಿಸಿ ಕಾರ್ಯಕ್ರಮ ಉದ್ಘಾಟನೆ ಮಾಡಿದ ವೀ ವಿ ಸಂಘದ ನೂತನ ಅಧ್ಯಕ್ಷರಾದ ಅಲ್ಲಂ ಗುರುಬಸವ ರಾಜರು,ಭಾರತೀಯ ಸನಾತನ ಸಂಸ್ಕ್ರತಿ ಯಲ್ಲಿ ,ಖಗೋಳದಲ್ಲಿ ಗ್ರಹ ನಕ್ಷತ್ರಾದಿ ಚಲನ ವಲನಗಳ ಲೆಕ್ಕಾಚಾರವನ್ನು ಕರಾರುವಕ್ಕಾಗಿ ಹೇಳಿದ್ದು,ಅದನ್ನು ಗಮನಿಸಿ,ಪಂಚಾಂಗ ರಚನೆ ಮಾಡುವ ಜಾಣ್ಮೆ ಮತ್ತು ಕೌಶಲ್ಯವನ್ನು ಹೊಂದಿರುವ ಮಠಂ ಗುರುಪ್ರಸಾದ್ ರವರ ಶ್ರೀ ಉಮಾಮಹೇಶ್ವರ ಪಂಚಾಂಗ ಮಾನ್ಯ ವಾಗಿದೆ ಎಂದರು.
ಪಂಚಾಂಗ ಕರ್ತರಾದ ಪಂಡಿತ್ ಮಠಂ ಗುರುಪ್ರಸಾದ್ ರು ಪಂಚಾಂಗದ ಅಂಗಗಳಾದ ತಿಥಿ,ವಾರ, ನಕ್ಷತ್ರ,ಯೋಗ ಮತ್ತು ಕರಣಗಳನ್ನು ಕುರಿತು ಮಾತನಾಡುತ್ತಾ ಅವುಗಳ ಲಕ್ಷಣಗಳನ್ನು ತಿಳಿಸಿದರು.
ಸಮ್ಮುಖ ವಹಿಸಿದ್ದ ಕೊಕ್ಕರಚೇಡಿನ ಶ್ರೀ ಶಂಕರಾನಂದಗಿರಿ ಗುರು ಸೇವಾಶ್ರಮದ ಪೂಜ್ಯ ರಾದ ಶ್ರೀ ಗುರು ಚರಣಾನಂದ ಗಿರಿ ಮಾತಾಜಿಯವರು ಮಾತನಾಡುತ್ತಾ ಗುರು ಪ್ರಸಾದರ ಜ್ಯೋತಿಷ್ಯ, ವಾಸ್ತು,ಹಸ್ತಸಾಮುದ್ರಿಕಾ,ಮುಂತಾದ ಬಹುಮುಖ ಜ್ಞಾನ ಮತ್ತು ಪ್ರತಿಭೆಗೆ ಪೂಜ್ಯ ಗುರುಗಳಾದ ಶ್ರೀ ಶಂಕರಾನಂದ ಗಿರಿಯವರ ಅನುಗ್ರಹ,ಆಶೀರ್ವಾದಗಳೇ ಕಾರಣವೆಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಬಳ್ಳಾರಿ ಕಲ್ಚರಲ್ ಆಕ್ಟಿವಿಟೀಸ್ ಅಸೋಸಿಯೇಷನ್ ನ ಅಧ್ಯಕ್ಷ ರಾದ ಶೀಲಾ ಬ್ರಹ್ಮಯ್ಯನವರು ಸಂಘದ ಚಟುವಟಿಕೆಗಳ ಪ್ರಾಸ್ತಾವಿಕ ನುಡಿಗಳೊಂದಿಗೆ ಸರ್ವರನ್ನು ಸ್ವಾಗತಿಸಿದರು.
ವೇದಿಕೆಯ ಗಣ್ಯರನ್ನು ಹಾಗು ಅಸೋಸಿಯೇಷನ್ ನ ಪ್ರತಿಷ್ಠಿತ ಪುರಸ್ಕಾರ ಹೊಂದಿದ್ದ ಮಹನೀಯರನ್ನು ವೇದಿಕೆಯಲ್ಲಿ ಗೌರವಿಸಲಾಯಿತು.
ಸೂರ್ಯಕಲಾ ಟ್ರಸ್ಟ್ ನ ವಿದ್ಯಾರ್ಥಿನಿಯರು ನೃತ್ಯ ಪ್ರದರ್ಶನ ಮಾಡಿದರು.ಶಿಕ್ಷಕ ಸತ್ಯನಾರಾಯಣ ರವರು ಕಾರ್ಯಕ್ರಮ ನಿರೂಪಿಸಿದರು.ಎಂ.ಟಿ.ಮಲ್ಲೇಶಪ್ಪನವರು ವಂದನಾರ್ಪಣೆ ಮಾಡಿದರು.ವೇದಿಕೆಯಲ್ಲಿ ಜಿಲ್ಲಾ ಪದ್ಮಶಾಲಿ ಸಂಘದ ಅಧ್ಯಕ್ಷ ರಾದ ಅವ್ವಾರು ಮಂಜುನಾಥ್,ಮಹಾನಗರ ಪಾಲಿಕೆಯ ನಾಮನಿರ್ದೇಶನ ಸದಸ್ಯರಾಗಿ ನೂತನವಾಗಿ ಆಯ್ಕೆಯಾದ ಯಶ್ ವಂತರಾಜ್,ಮತ್ತು ಸಂಘದ ಪದಾಧಿಕಾರಿಗಳು ಅತಿಥಿ ಸ್ಥಾನ ದಲ್ಲಿ ಉಪಸ್ಥಿತರಿದ್ದರು.
