
ಸದ್ಗುರು ಶ್ರೀ ಸೇವಾಲಾಲ್ 285ನೇ ಜಯಂತಿ ಆಚರಣೆ
ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕಾಗಿದೆ : ಉಪ ಪ್ರಾಚಾರ್ಯ ಸೋಮಶೇಖರ ನೀಲೊಗಲ್
ಕರುನಾಡ ಬೆಳಗು ಸುದ್ದಿ
ಕುಕನೂರು,29- ಬಂಜಾರ ಸಮಾಜದ ಹಿರಿಯರು ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕಾಗಿದೆ ಎಂದು ವಿದ್ಯಾನಂದ ಗುರುಕುಲ ಕಾಲೇಜಿನ ಉಪ ಪ್ರಾಚಾರ್ಯ ಸೋಮಶೇಖರ ನೀಲೊಗಲ್ ಹೇಳಿದರು.
ಪಟ್ಟಣದ ಶಾದಿಮಹಲ್‌ನಲ್ಲಿ ಬುಧವಾರ ನಡೆದ ತಾಲೂಕಮಟ್ಟದ ಸದ್ಗುರು ಶ್ರೀಸೇವಾಲಾಲ ಮಹಾರಾಜರ ೨೮೫ನೇ ಜಯಂತ್ಯೋತ್ಸವ ಸಮಾರಂಭದ ವಿಶೇಷ ಉಪನ್ಯಾಸ ನೀಡಿ ಮಾತನಾಡಿದ ಅವರು, ಸೇವಾಲಾಲ ಮಹಾರಾಜರ ತಂದೆ, ತಾಯಿಗಳಿಗೆ 11ವರ್ಷಗಳ ಕಾಲ ಮಕ್ಕಳಾಗಿದ್ದಿಲ್ಲ. ಮಾರಿಕಾಂಬೆ ದೇವಿಯ ವರದಿಂದ ಶ್ರೀಸೇವಾಲಾಲ್‌ರು ಹುಟ್ಟಿದರು. ಬಂಜಾರ ಸಮಾಜದ ಸುಧಾರಣೆಗಾಗಿ ಶ್ರೀಸೇವಾಲಾಲ್‌ರು ಅನೇಕ ತ್ಯಾಗಗಳನ್ನು ಮಾಡಿದ್ದಾರೆ. ಕೆಲವೊಂದು ಸಂದರ್ಭದಲ್ಲಿ ಪವಾಡಗಳನ್ನು ಸಹ ಸೃಷ್ಠಿ ಮಾಡಿದ್ದಾರೆ. ತಂದೆ, ತಾಯಿಗಳು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ, ಸಂಸ್ಕಾರ ನೀಡಬೇಕು ಅಂದಾಗ ಸೇವಾಲಾಲ್‌ರ ತ್ಯಾಗ ಸಾರ್ಥಕವಾಗುತ್ತದೆ ಎಂದು ಹೇಳಿದರು.
ಬಂಜಾರ ಸಮಾಜದ ಜಿಲ್ಲಾಧ್ಯಕ್ಷ ಲಕ್ಷö್ಮಣ ನಾಯಕ ಮಾತನಾಡಿ, ಶ್ರೀಸೇವಾಲಾಲ್ ಅವರು ದಾರ್ಶಿನಿಕರಾಗಿದ್ದರು. ಅವರು ಒಂದೇ ಜಾತಿಗೆ ಸೀಮಿತವಾಗಿದ್ದಿಲ್ಲ. ಸಮಾಜದ ಸುಧಾರಣೆಗಾಗಿ ಇಂತಹ ದಾರ್ಶಿನಿಕರು ಹುಟ್ಟಿಬಂದಿದ್ದಾರೆ. ನಾವು ಮೂಲತಃ ವ್ಯಾಪಾರಿಗಳು ನಾವು ವ್ಯಾಪಾರ ಮಾಡಬಾರದು ಎಂದು ಬ್ರಿಟಿಷರು ಆದೇಶ ಮಾಡಿದ್ದರು ಇಂತಹ ಅನೇಕ ಸಮಸ್ಯೆಗಳ ಮಧ್ಯೆ ನಾವು ಜೀವಿಸುತ್ತಾ ಬಂದಿದ್ದೇವೆ ಎಂದು ಹೇಳಿದರು.
ಶ್ರೀಸೇವಾಲಾಲ್ ಭಾವಚಿತ್ರವನ್ನು ತೆರೆದ ವಾಹಣದಲ್ಲಿ ಪಟ್ಟಣದ ಅಂಬೇಡ್ಕರ್ ವೃತ್ತದಿಂದ ಪ್ರಾರಂಭವಾದ ಮೆರವಣಿಗೆ, ಪ್ರಮುಖ ರಸ್ತೆಗಳ ಮೂಲಕ ಡಿಜೆ ಸೌಂಡ್‌ಗೆ ಹೆಜ್ಜೆಗಳನ್ನು ಸಮಾಜದ ಮುಖಂಡರು, ಮಹಿಳೆಯರು ಹೆಜ್ಜೆಹಾಕಿದರು. ಉದ್ಯಮಿ ಅನಿಲ್ ಆಚಾರ್, ಮುಖಂಡ ಶಿವಕುಮಾರ ಗುಳಗಣ್ಣವರ್ ಮೆರವಣಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಅನ್ನದಾನೇಶ್ವರಮಠದ ಶ್ರೀಮಹಾದೇವ ಸ್ವಾಮೀಜಿ, ಶ್ರೀಗುರು ಗೋಸಾವಿ ಬಾವಾನವರು ಬಂಜಾರ ಧರ್ಮಗುರುಗಳು ಸಾನ್ನಿಧ್ಯವಹಿಸಿದ್ದರು.
ತಹಶೀಲ್ದಾರ್ ಅಶೋಕ ಶಿಗ್ಗಾವಿ, ತಾ.ಪಂ ಇಓ ಸಂತೋಷ ಪಾಟೀಲ್ ಬಿರಾದಾರ, ಪಿ.ಲಕ್ಷö್ಮಣ ನಾಯಕ ಬಂಜಾರ ಸಮಾಜದ ಜಿಲ್ಲಾಧ್ಯಕ್ಷರು, ಮೇಘರಾಜ ಬಳಗೇರಿ ಬಂಜಾರ ಸಮಾಜದ ತಾಲೂಕಾಧ್ಯಕ್ಷ, ಸುರೇಶ ಬಳೂಟಗಿ ಗೋರ ಸೇನಾ ಪ್ರಧಾನ ಕಾರ್ಯದರ್ಶಿ, ಯಮನೂರಪ್ಪ ಕಟ್ಟಿಮನಿ ಗ್ರಾ.ಪಂ ಸದಸ್ಯ. ರಾಮಣ್ಣ ಭಜಂತ್ರಿ ಜಿ.ಪಂ ಮಾಜಿ ಅಧ್ಯಕ್ಷ, ರಶೀದ್‌ಸಾಬ ಹಣಜಗಿರಿ, ಲಚ್ಚಪ್ಪ ನಾಯಕ, ದೇವೆಂದ್ರಪ್ಪ ರಾಠೋಡ, ಓಬಪ್ಪ ಲಮಾಣಿ, ರವಿ ಕಾರಬಾರಿ, ಚಂದ್ರು ಭಾನಾಪೂರ, ಅಂಬಣ್ಣ ಕಟ್ಟಿಮನಿ, ಯಲ್ಲಪ್ಪ ಮನ್ನಾಪೂರ, ರಾಜಕುಮಾರ ರಾಠೋಡ, ಪರಸಪ್ಪ ಕಾರಬಾರಿ ಸೇರಿದಂತೆ ಸಮಾಜದ ಮಹಿಳೆಯರು, ಯುವತಿಯರು, ಯುವಕರು ಸೇರಿದಂತೆ ಅನೇಕರು ಇದ್ದರು.