
ಸಮಾಜದ ಕೈಗನ್ನಡಿ
ಕೆ ಬಿ ಆರ್ ಡ್ರಾಮಾ ಕಂಪನಿ ದಾವಣಗೆರೆಯ : ನಾಟಕ
ಹೆಂಡತಿ ಕೇಳಿ ಮದುವೆಯಾಗು
ರಂಗಭೂಮಿ ನಂಬಿ ಉಳಿದವರಿಲ್ಲ ಎನ್ನುವ ಅನುಭವಿಗಳ ಮಾತೊಂದಿದೆ , ಅದು ಸತ್ಯವು ಕೂಡ ಹನುಮಸಾಗರದ ಗುಬ್ಬಿ ವೀರಣ್ಣ ಪ್ರಶಸ್ತಿ ವಿಜೇತ ದಿ ಪಿ ಬಿ ಧುತ್ತರಗಿ ಸರೋಜಮ್ಮ ಮಾರುತೇಶ ಮಾಂಡ್ರೆ , ಹೆಚ್ ಟಿ ಅರಸ್ ಬಿ ಆರ್ ಅರಿಷಣಗೋಡಿ ಇನ್ನೂ ಮುಂತಾದ ನಾಟಕ ಕಂಪನಿ ಮಾಡಿ ಕವಿಗಳಾಗಿ ನಾಟಕ ಬರೆದು ಆಡಿಸಿ ನಿರ್ದೇಶಕ ರಾಗಿ ನಾಟಕ ಕಂಪನಿಕಟ್ಟಿ ಸಾಲ ಸೋಲ ಮಾಡಿ ಹೈರಾಣಾಗಿ ಹೋದವರು ಬಹಳಜನ ರಂಗಭೂಮಿ ಕ್ಷೇತ್ರ ವಿಸ್ತಾರವಾದ ಆಳ ಅಗಲ ಹೊಂದಿರುವಂತಹುದು ಇಲ್ಲಿ ಇಸುವುದು ಕಷ್ಟಸಾಧ್ಯ ಹೀಗಿರುವಾಗ ನಾಟಕ ತಂಡ ಕಟ್ಟಿಕೊಂಡು ತಮ್ಮ ನ್ನು ನಂಬಿದ ಉಳಿದ ಕಲಾವಿದೆ ದರ ಹೊಟ್ಟೆ ಬಟ್ಟೆ ಕಾಪಾಡುವ ಜವಾಬ್ದಾರಿ ಅತಿ ಹೆಚ್ವಿನದು ಇಂತಹದರಲ್ಲಿ ಭರವಸೆಯ ಬೆಳಕಾಗಿ ನಾಡಿನ ತುಂಬೆಲ್ಲಾ ತಮ್ಮದೇ ಬ್ರಾಂಡ್ ನೇಮ್ ಸೃಜಿಸಿ ಆಧುನಿಕತೆಗೆ ಒಗ್ಗಿಕೊಂಡು ಇಂದಿನ ಆಧುನಿಕ ಜಗತ್ತಿನ ಸಾಮಾಜಿಕ ಜಾಲತಾಣಗಳ ಸದುಪಯೋಗ ಮಾಡಿಕೊಂಡು ಮುನ್ನಡೆಯುತ್ತಿರುವ ಕೆ ಬಿ ಆರ್ ಡ್ರಾಮಾ ಕಂಪನಿ.
ವೃತ್ತಿ ರಂಗಭೂಮಿಯ ನಾಟಕಗಳು ಅಂದರೆ, ಬರೀ ಅಶ್ಲೀಲ ಸಂಭಾಷಣೆ , ಒಂದು ಅರೆ ಬರೆ ಮೈ ಮಾಟ ಕಾಣುವ ಬಟ್ಟೆ ತೊಟ್ಟ ಹದಿಹರೆಯದ ಹುಡುಗಿಯ ಡ್ಯಾನ್ಸ ಸೀನ್ ಸಿನಿಮಾ ಹಾಡುಗಳು ತೂರಿಸುವಿಕೆ ಇಡೀ ನಾಟಕದ ಕವಿಯ ಆಶಯ ಮಣ್ಣುಪಾಲು ಮಾಡಿ ಕಿವಿಗಡಚಿಕ್ಜುವಂತಹ ಸಂಗೀತದ ಹಿಮ್ನೇಳ ಒಟ್ಟಾರೆ ಮೂರು ತಾಸಿನ ಸಾಮಾಜಿಕ ನಾಟಕ ನೋಡಬಾರದೆನಿಸಿ ಯಾಕರ ಹೆಂಡ್ರು ಮಕ್ಕಳ ಕರೆದುಕೊಂಡು ಬಂದೇ ಅಂತ ಗಲ್ಲ ಗಲ್ಲ ಬಡಕೊಂಡು ಬರುವಾಂಗ ಇದ್ದ ಪ್ರಸ್ತುತ ರಂಗಭೂಮಿಯ ಅವನತಿಯ ಕಾಲದಲ್ಲಿ ಒಂದೇನೋ ಆಶಾಕಿರಣದಂತೆ ಮೂಡಿಬಂದ ನಾಟಕ ತಂಡ ನಾಟಕ ಮಂಡಳಿ ಅದುವೇ ದಿ ಚಿಂದೋಡಿ ವೀರಪ್ಪನವರ ಕೆ ಬಿ ಆರ್ ನಾಟ್ಯ ಸಂಘ ದಾವಣಗೆರೆ
ಕಳೆದ ಮೂವತ್ತು ವರುಷಗಳಿಂದ ದಿ : ಅಬ್ದುಲ್ ರಬ್ ಸಾಬ ಅವರ ಜಾಗೆಯಲ್ಲಿ ಇದೇ ಕಂಪನಿಯು ಉಕ್ಕಡಗಾತ್ರಿ ಕರಿಬಸವೇಶ್ವರವ ಮಹಾತ್ಮೆ ಇತರೆ ನಾಟಕಗಳನ್ನು ಅಭಿನಯಿಸಿ ರಂಗಾಸಕ್ತರ ಗಮನಸೆಳೆದಿದ್ದು ಇತಿಹಾಸ ಮತ್ತೇ ರಂಗಭೂಮಿಯ ವೈಭವ ಪುನರಾವಲೋಕನವಾಗಿದೆ
ರಂಗಭೂಮಿ ಯ ವೇದಿಕೆಯಲ್ಲಿ ಸ್ಟೇಜ್ ಮೇಲೆ ಅತಿಯಾದ ಬೆಳೆಕು ಅತಿಯಾದ ಧ್ವನಿ ಅತಿಯಾದ ಹಿನ್ನೆಲೆ ಕಿರುಚಾಟದ ಹಾಡುಗಳು ಇಲ್ಲದೆ ಮನೆ ಮಂದಿಯಲ್ಲ ಕುಳಿತು ನೋಡುವ ಕೌಟುಂಬಿಕ ವಿಷಯ ಹೊಂದಿದ ನಾಟಕದ ಕೊನೆಯಲ್ಲಿ ಉದಾತ್ತಾ ಆಶಯ ಹೊಂದಿದ ಸಮಾಜಕ್ಕೆ ಏನಾದರೂ ಒಂದು ಸಂದೇಶ ನೀಡುವಲ್ಲಿ ಕಂಪನಿಯಶ ಕಾಣುತ್ತಿದೆ ಪ್ರಸ್ತುತ ಹೆಂಡತಿ ಕೇಳಿ ಮದುವೆಯಾಗು ಎನ್ನುವ ಕಥಾ ಹಂದರ ಹೊಂದಿದ ಈ ನಾಟಕ ಪ್ರೇಕ್ಷಕರ ಗಮನ ಸೆಳೆಯುತ್ತಿದೆ ಕುಷ್ಟಗಿ ನಗರದ ಹಸನ್ ಸಾಬ ದೋಟಿಹಾಳ ಅವರ ಜಾಗೆಯಲ್ಲಿ ಹಾಕಿರುವ ರಂಗ ಸಜ್ಜಿಕೆಯಲ್ಲಿ ಪ್ರತಿ ದಿನ ಎರಡು ಶೋ ನೀಡುವ ನುರಿತ ಕಲಾವಿದರ ದಂಡೇ ಈ ಕಂಪನಿ ಯಲ್ಲಿದೆ ಇಲ್ಲಿ ಇನ್ನೊಂದು ವಿಶೇಷ ಹೇಳಲೇ ಬೇಕು ಈ ಕಂಪನಿಯಲ್ಲಿ ಪಾತ್ರ ಮಾಡುವ ಬಹುತೇಕರು ಚಿಂದೋಡಿ ಶ್ರೀಕಂಠೇಶ ಅವರ ಮನೆತನದ ಬಂಧು ಬಳಗದವರು ಹೀಗಾಗಿ ಈ ಕಂಪನಿಯು ಕಳೆದ _96 ವರ್ಷಗಳಿಂದ ನಡೆದುಕೊಂಡು ಬಂದಿದೆ ಸುಸಂಸ್ಕೃತ ನಡೆ ನುಡಿ ಕುಟುಂಬದ ಹಿನ್ನೆಲೆ ಇರುವ ಮಡದಿ ಮಕ್ಕಳು ಬಳಗ ದ ಕಂಪನಿ ಇದಾಗಿದ್ದು ನಾಟಕದ ಕುಟುಂಬವಾಗಿದೆ ಕಂಪನಿಯ ಪಾತ್ರಧಾರಿಗಳುಕನ್ನಡ ಭಾಷೆಯನ್ನು ಅತ್ಯಂತ ಸ್ಪಷ್ಟವಾಗಿ ಮೃದುವಾಗಿ ಅನೇಕ ಕವಿಗಳ ದಾರ್ಶನಿಕರ ಉಕ್ತಿಗಳನ್ನು ಬಳಸಿಕೊಂಡು ಸಂಭಾಷಣೆ ನಡೆಸುವ ಉಳಿದ ಪಾತ್ರಧಾರಿಗಳು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ ಇಂದಿನ ದುಬಾರಿ ದುನಿಯಾದಲ್ಲಿ ನಾಟಕ ಕಂಪನಿ ನಡೆಸುವುದು ತುಂಬಾ ದುಸ್ತರವಾದ ಸಂಗತಿಯಾಗಿದೆ ಆದಾಗ್ಯೂ ಕೆ ಬಿ ಅರ್ ಇನ್ನೂ ಜೀವಂತವಿರಿಸಿ ಇದರಿಂದ ಅನ್ನ ಉಣ್ಣುವುದು ತುಂಬಾ ಸವಾಲಿನ ಕೆಲಸ ಕೆ ಬಿ ಆರ್ ಕಂಪನಿಯು ಆರ್ಥಿಕ ಶಿಸ್ತು ಸ್ಟೇಜ್ ನ ಶಿಸ್ತು ನಾಟಕ ಆಯ್ಕೆ ಮಾಡಿಕೊಳ್ಳುವ ಕೌಶಲ ಪರಿಣಾಮಕಾರಿ ಡೈಲಾಗ್ ಡೆಲಿವರಿಯ ನುರಿತ ಕಲಾವಿದರು ಮಾಸಿಕ ಸಂಭಾವನೆಯ ಊಟ ವಸತಿಗಳ ಅಚ್ವುಕಟ್ಟುತನ ಹೀಗೆ ರೂಪಿತವಾದ ಈ ಕಂಪನಿಯ ಚಿಂದೋಡಿ ಶ್ರೀಕಂಠೇಶ ಹಾಗೂ ಚಿಂದೋಡಿ ವಿಜಯಕುಮಾರ್ ದಂಪತಿಗಳು ಅಭಿನಂದನಾರ್ಹರು ಎಂದು ಪತ್ರಕರ್ತ ರವೀಂದ್ರ ಬಾಕಳೆ ನುಡಿಯುತ್ತಾರೆ ಕನ್ನಡ ನಾಡಿನ ಹಲವಾರು ಕವಿಗಳು ರಚಿಸಿರುವ ಸಾಮಾಜಿಕ ಪೌರಾಣಿಕ ಐತಿಹಾಸಿಕ ಕೌಟುಂಬಿಕ ನಾಟಕಗಳನ್ನು ಪ್ರದರ್ಶಿಸುವ ಶಕ್ತಿಯನ್ನು ಬಾದಾಮಿ ಬನಶಂಕರಿ ಆ ಶಾಖಾಂಬರಿ ನೀಡಲಿ
ಲೇಖಕರು
ನಟರಾಜ್ ಸೋನಾರ್
ಬರಹಗಾರರು ಕುಷ್ಟಗಿ