ಸರಕಾರಿ ಶಾಲೆಗಳಲ್ಲಿ ಕಲಿತ ಮಕ್ಕಳು ದೊಡ್ಡ
ಸರಕಾರಿ ಉನ್ನತ ಹುದ್ದೆಯಲ್ಲಿ ಇದ್ದಾರೆ
ಅನ್ನಪೂರ್ಣಮ್ಮ ಗೌಡ್ರ ಅಭಿಪ್ರಾಯ
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ 2 ಸರಕಾರಿ ಶಾಲೆಗಳಿಗೆ ಗ್ರಾಮದ ಗ್ರಾಮಸ್ಥರು ಮುಖಂಡರು ಸಹಾಯ ಸಹಕಾರ ಮಾಡುವದರಿಂದ ಇದು ಶ್ಲಾಘನೀಯವಾಗಿದೆ ಮತ್ತು ವಿದ್ಯಾರ್ಥಿಗಳು ಉತ್ತಮ ವಿದ್ಯಾಭ್ಯಾಸ ಮಾಡಿ ಮುಂದೆ ಬರಬೇಕು ಸರಕಾರಿ ಶಾಲೆಯಲ್ಲಿ ಕಲಿತ ಮಕ್ಕಳು ದೊಡ್ಡ ದೊಡ್ಡ ಸರಕಾರಿ ಉನ್ನತ ಹುದ್ದೆಯಲ್ಲಿ ಇದ್ದಾರೆ ಎಂದು ಎಸ್ ಡಿ.ಎಂ.ಸಿ.ಉಪಾಧ್ಯಕ್ಷ.ಅನ್ನಪೂರ್ಣ ರೇಣುಕಪ್ಪ ಗೌಡ್ರ ಹೇಳಿದರು.
ತಾಲೂಕಿನ ತಾಳಕೇರಿ ಗ್ರಾಮದ ಸರಕಾರಿ ಪ್ರೌಡ ಶಾಲೆಯಗೆ ಸೋಮವಾರ ದಿವಸ ಶಾಲಾ ಮಕ್ಕಳಿಗೆ ಕ್ಷೀರಭಾಗ್ಯ ಯೋಜನೆಯಡಿ ವಿದ್ಯಾರ್ಥಿಗಳಿಗೆ ಹಾಲು ಕುಡಿಯಲು ಅನುಕೂಲವಾಗಲೆಂದು ಲೋಟಗಳನ್ನು ಶಾಲೆಯ ಮುಖ್ಯೋಪಾದ್ಯಾಯರಿಗೆ ವಿತರಿಸಿ ಮಾತನಾಡಿದರು ನಂತರ ಲೋಟಗಳನ್ನುಸ್ವೀಕರಿಸಿ ಮಾತನಾಡಿದ ಮುಖ್ಯೋಪಧ್ಯಾಯ ದೇವೇಂದ್ರಪ್ಪ ಜಿರ್ಲಿ ಅವರು ಸರಕಾರಿ ಶಾಲೆಗಳ ಸಬಲೀಕರಣಕ್ಕೆ ಸಮುದಾಯದ ಸಹಭಾಗಿತ್ವ ಅತಿ ಅವಶ್ಯಕವಾಗಿದೆ ಮತ್ತು. ಶಾಲೆಗೆ ಗ್ರಾಮದ ಹಿರಿಯರು, ಜನಪ್ರತಿನಿಧಿಗಳು ಮತ್ತು ಹಳೆಯ ವಿದ್ಯಾರ್ಥಿಗಳು ಅವಶ್ಯವಿರುವ ನೆರವು ನೀಡುತ್ತಿರುವುದು.
ತುಂಬಾ ಹೆಮ್ಮೆಯ ಸಂಗತಿ, ಈ ಹಿಂದೆ ಶಾಲೆಗೆ ಸುಣ್ಣ ಬಣ್ಣ ಬಳಿಯಲು,ವಿಜ್ಞಾನ ಕೇಂದ್ರ ತೆರೆಯಲು ದಾನಿಗಳು ನೆರವಾಗಿದ್ದರು.ಇತ್ತೀಚಿನ ದಿನಗಳಲ್ಲಿ ದೇಣಿಗೆ ನೀಡುವ ಸಂಪ್ರದಾಯ ಮುಂದುವರೆದಿದ್ದು ಹೆಮ್ಮೆಯ ವಿಷಯ ಇದೇ ರೀತಿ ಶಾಲೆಯ ಹಳೆಯ ವಿದ್ಯಾರ್ಥಿಗಳಿಂದಲೂ ನೆರವು ನಿರೀಕ್ಷಿಸಿದ್ದೇವೆ ಎಂದರು. ಸರಕಾರಿ ಶಾಲೆಗೆ ದೇಣಿಗೆ ನೀಡಿದ ದಾನಿಗಳಿಗೆ ಶಾಲೆಯ ಎಸ್.ಡಿ.ಎಮ್ ಸಿ . ಶಾಲೆಯ ಮುಖ್ಯ ಗುರುಗಳು. ಪರವಾಗಿ ಸಮಸ್ತ ವಿದ್ಯಾರ್ಥಿಗಳ ಪರವಾಗಿ ಅಭಿನಂದನೆಗಳನ್ನು ಸಲ್ಲಿಸಿದರು ಈ ಸಂದರ್ಭದಲ್ಲಿ ಮುಖಂಡರುಗಳಾದ ನಾಗಪ್ಪ ಕಂಬಳಿ,ಈಶಪ್ಪ ಸಿದ್ಧಾಪುರ ಶರೀಪಸಾಬ್ ಮಾಟಲದಿನ್ನಿ,ಅಮರೇಶ ಸಿಂದೋಗಿ ಸೇರಿದಂತೆ ಮತ್ತು ಇತರರು ಭಾಗವಹಿಸಿದ್ದರು
