WhatsApp Image 2024-03-11 at 12.32.35 PM

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಹೆಚ್ಚುವರಿ ಕೋಠಡಿ ಕಾಮಗಾರಿ ಶಾಸಕರಿಂದ ಶಂಕುಸ್ಥಾಪನೆ 

ಕರುನಾಡ ಬೆಳಗು ಸುದ್ದಿ

ಸಿರುಗುಪ್ಪ,11- ತಾಲೂಕು ಉಪ್ಪಾರು ಹೊಸಳ್ಳಿ ಗ್ರಾಮದಲ್ಲಿ ಕೆಕೆಆರ್‌ಡಿಬಿ ಅನುದಾನದ ಅಡಿಯಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹೆಚ್ಚುವರಿ ಕೊಠಡಿಯ ಕಾಮಗಾರಿ ಗೆ ಅಡಿಗಲ್ಲನ್ನು ಜನಪ್ರಿಯ ಶಾಸಕ ಬಿ ಎಂ ನಾಗರಾಜ ಅವರು ನೆರವೇರಿಸಿದರು.

ಈ ಸಂದರ್ಭದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷರು, ಸದಸ್ಯರು, ಗ್ರಾಮ ಪಂಚಾಯತ್ ಸದಸ್ಯರು, ಮುಖಂಡರಾದ ಯು ಮಲ್ಲೇಶಪ್ಪ, ರಾಜಪ್ಪ, ವೆಂಕಟೇಶ್, ಹನುಮಣ್ಣ, ಮಂಜುನಾಥ, ಮಲ್ಲಪ್ಪ ಜಂತಗಲ್, ಮುದುಕಪ್ಪ, ರಾಷ್ಟ್ರೀಯ ಸಾಕ್ಷರತಾ ಸದಸ್ಯ ಅಬ್ದುಲ್ ನಬಿ, ನಗರಸಭಾ ಸದಸ್ಯರಾದ ಕಾಯಿಪಲ್ಲೆ ಆರ್ ನಾಗರಾಜ, ಹೆಚ್ ಗಣೇಶ್ ಕೋಟಿ ರೆಡ್ಡಿ, ಪವನ್ ದೇಸಾಯಿ, ಜಿಲ್ಲಾ ಪಂಚಾಯತ್ ರಾಜ್ ಇಂಜಿನಿಯರ್ ಶ್ರೀನಿವಾಸ್ ಗುತ್ತಿಗೆದಾರರು ಹಾಗೂ ಗ್ರಾಮದ ಮುಖ್ಯಸ್ಥರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!