WhatsApp Image 2024-06-29 at 4.43.42 PM

ಸಾಹಿತ್ಯದ ಮೂಲಕ ಸಮಾಜದಲ್ಲಿ ನೈತಿಕ ಮೌಲ್ಯಗಳು ಫೆಸಲಿಸಲು ಸಾಧ್ಯ

ಕರುನಾಡ ಬೆಳಗು ಸುದ್ದಿ

ಬಳ್ಳಾರಿ, 29- ಸಾಹಿತ್ಯದ ಮೂಲಕ ಸಮಾಜದಲ್ಲಿ ನೈತಿಕ ಮೌಲ್ಯಗಳನ್ನು ಪಸರಿಸಲು ಸಾಧ್ಯವೆಂದು ಜಿಲ್ಲಾ ಕೇಂದ್ರ ಕಾರಾಗೃಹ ಸಹಾಯಕ ಅಧೀಕ್ಷಕರಾದ ಅಮರೇಶ ಪೂಜಾರಿ ಅಭಿಪ್ರಾಯಪಟ್ಟರು.

ಕಸಾ.ಪ ಬಳ್ಳಾರಿ ಜಿಲ್ಲಾ ಘಟಕವು ವೀರಶೈವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಮಾಜಿ ವಿಧಾನ ಪರಿಷತ್ ಸದಸ್ಯ ಕೆ.ಸಿ. ಕೊಂಡಯ್ಯ ಅವರು ತಮ್ಮ ತಂದೆ ದಿ. ಕೆ.ವಿ. ತಿರುಪಾಲಪ್ಪನವರ ಹೆಸರಿನಲ್ಲಿ ನೀಡಿದ ಸ್ಮಾರಕ ದತ್ತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅಮರೇಶ ಪೂಜಾರಿಯವರು ಸಾಹಿತ್ಯದ ಮೂಲಕ ಸಮಾಜ ತಿದ್ದುವ ಕಾರ್ಯ ನಡೆಯಲೆಂದು ಆಶಿಸಿದರು.

ಕವಿರಾಜಮಾರ್ಗವು ಕನ್ನಡ ಸಾಹಿತ್ಯಕ್ಕೆ ವಿಶಿಷ್ಟ ಕೊಡುಗೆಯನ್ನು ನೀಡಿದೆ. ಕವಿರಾಜಮಾರ್ಗ ಕನ್ನಡದ ಸಾರ್ವಕಾಲಿಕ ಕೃತಿಯಾಗಿದೆ ಎಂದು ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಸಹಾಯಕ ಪ್ರಾಧ್ಯಾಪಕ ಡಾ. ಕೆ.ಎಸ್. ಶಿವಪ್ರಕಾಶ್ ವಿಶೇಷ ಉಪನ್ಯಾಸ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವೀರಶೈವ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ‌ದರೂರು ಶಾಂತವೀರನಗೌಡ ಮಾತನಾಡಿ ಕನ್ನಡ ಕಾರ್ಯಕ್ರಮಗಳಿಗೆ ನಿರಂತರ ಸಹಕಾರವನ್ನು ವೀರಶೈವ ಕಾಲೇಜು ನೀಡುತ್ತದೆ ಎಂದರು.

ಮುಖ್ಯ ಅತಿಥಿಗಳಾಗಿ ಮಾಜಿ ಉಪಮಹಾ ಪೌರರಾದ ಬೆಣಕಲ್ಲು ಬಸವರಾಜ್, ಸ್ನೇಹ ಸಂಪುಟದ ಅಧ್ಯಕ್ಷ ಕಲ್ಲುಕಂಬ ಪಂಪಾಪತಿ, ಬೂಡಾ ಮಾಜಿ ಸದಸ್ಯ ಹೆಚ್.ಆರ್. ಶಿವಶಂಕರ್, ವೀರಶೈವ ಕಾಲೇಜಿನ ಪ್ರಾಂಶುಪಾಲ ಜಿ. ಮನೋಹರ, ಕಸಾಪ ಕೋಶಾಧ್ಯಕ್ಷ ಬಸವರಾಜ್ ಗದಗಿನ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಸಾಪ ಗೌರವ ಕಾರ್ಯದರ್ಶಿ ಡಾ. ಕೆ. ಶಿವಲಿಂಗಪ್ಪ ಹಂದಿಹಾಳು ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ನೀಲಮ್ಮ ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ಬ್ರಮರಾಂಭ ಸ್ವಾಗತಿಸಿದರು. ಶ್ರೀಮತಿ ಮಹಾಲಿಂಗಮ್ಮ ವಂದನಾರ್ಪ ಸಲ್ಲಿಸಿದರು

Leave a Reply

Your email address will not be published. Required fields are marked *

error: Content is protected !!