
“ಸಿದ್ಧಾರೂಢರ ಜಾತ್ರೆ” ಪಾಠವನ್ನು ಚಟುವಟಿಕೆಯಿಂದ ಆಚರಿಸಿದ ಮಕ್ಕಳು
ವಿಜೃಂಭಣೆಯಿಂದ ಜರುಗಿದ ರಥೋತ್ಸವ
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ, 05- ತಾಲೂಕಿನ ಹೊಸಳ್ಳಿ ಗ್ರಾಮದ ಕಿತ್ತೂರು ರಾಣಿ ಚನ್ನಮ್ಮ ಶಾಲೆಯಲ್ಲಿ ಆರನೇ ತರಗತಿ ಕನ್ನಡ ಪಠ್ಯ ಪುಸ್ತಕದ “ಸಿದ್ಧಾರೂಢರ ಜಾತ್ರೆ” ಪಾಠವನ್ನು ಚಟುವಟಿಕೆ ಮೂಲಕ ಮಕ್ಕಳು ಸಿದ್ಧಾರೂಢರ ರಥೋತ್ಸವ ಮಾಡುವುದರೊಂದಿಗೆ ವಿಜೃಂಭಣೆಯಿಂದ ಆಚರಿಸಿದರು.
ಸಿದ್ಧಾರೂಢರ ಜಾತ್ರೆ ಪಾಠವನ್ನು ವಿದ್ಯಾರ್ಥಿಗಳು ಚಟುವಟಿಕೆಯಿಂದ ವಿಶೇಷವಾಗಿ ಭಕ್ತಿ ಭಾವದಿಂದ ಆಚರಣೆ ಮಾಡಿದರು.ಪಾಠದಲ್ಲಿ ಇರುವಂತೆ ಸಿದ್ಧಾರೂಢರ ಭಾವಚಿತ್ರಕ್ಕೆ ಪೂಜೆ, ವಸತಿ ಶಾಲೆಯಲ್ಲಿ ಬೆಳೆಯಲಾದ ತರಹೇವಾರಿ ಹೂವುಗಳಿಂದ ವಿಶೇಷ ಅಲಂಕಾರ ಮಾಡಲಾಗಿತ್ತು. ಕಲಾ ಶಿಕ್ಷಕ ಕಳಕೇಶ ಅರಕೇರಿ ಅವರು ನಿರ್ಮಿಸಿದ ರಥಕ್ಕೆ ಜಾತ್ರೆಯಲ್ಲಿ ಮಾಡುವಂತೆ ವಿಶೇಷವಾಗಿ ಸಿಂಗರಿಸಲಾಗಿತ್ತು. ವಿದ್ಯಾರ್ಥಿಗಳು ಭಕ್ತಿ ಭಾವದಿಂದ ಸಿದ್ಧಾರೂಢರ ಕುರಿತು ಜಯಘೋಷ ಕೂಗುತ್ತಾ ತೆರನ್ನು ಎಳೆಯುವ ಮೂಲಕ ಜಾತ್ರಾ ಸನ್ನಿವೇಶವನ್ನು ನೈಜವಾಗಿ ಸೃಷ್ಟಿ ಮಾಡಲಾಗಿತ್ತು.
ಈ ಸಂದರ್ಭದಲ್ಲಿ ವಸತಿ ಶಾಲೆಗಳ ಜಿಲ್ಲಾ ಸಮನ್ವಯ ಅಧಿಕಾರಿ ಜ್ಯೋತಿಶ್ವರ ಬೆಸ್ತರ್, ಪ್ರಾಚಾರ್ಯ ವಿರೂಪಾಕ್ಷಪ್ಪ ಹನುಮಶೆಟ್ಟಿ, ಶಿಕ್ಷಕರಾದ ದ್ಯಾಮಪ್ಪ ರಾಜೂರ್, ಪುರುಷೋತ್ತಮ ಪೂಜಾರ್, ವಿಜಯ ಕುಮಾರ್ ದೊಡ್ಡಮನಿ, ರಾಜೇಶ್ವರಿ ಬಿರಾದಾರ್, ಮಂಜುಳಾ ನರೇಂದ್ರ, ಶಿವಲೀಲಾ ಜಕ್ಕಲಿ, ರೇಣುಕಾ ಪಾಟೀಲ್, ಫಾತಿಮಾ ಬೆಟಗೇರಿ, ಶಂಕರ ಇಂಗಳದಾಲ್, ರವೀಂದ್ರ ಮಳೆಕೊಪ್ಪ, ಮಲ್ಲಿಕಾರ್ಜುನ ಅಂಗಡಿ, ಶಾಂತವೀರಯ್ಯ ಬಲವಂಚಿ ಮಠ್, ಸಾಹಿತಿ, ಕವಿಯತ್ರಿ ಅನಸೂಯಾ ಜಹಾಗೀರಾದಾರ್, ರಾಜಶೇಖರ್ ಶಾಗೋಟಿ ಉಪಸ್ಥಿತರಿದ್ದರು.