
ಸಿದ್ನೆಕೊಪ್ಪ : ಸರಕಾರಿ ಶಾಲೆಯಲ್ಲಿ ನಡೆದ ಸಂಸತ್ತಿನ ಚುನಾವಣೆ
ಕರುನಾಡ ಬೆಳಗು ಸುದ್ದಿ
ಕುಕನೂರು, 29- ತಾಲೂ ಕಿನ ಸರಕಾರಿ ಹಿರಿಯ ಪ್ರಾಥ ಮಿಕ ಶಾಲೆ ಸಿದ್ನೇಕೊಪ್ಪದಲ್ಲಿ ಮಕ್ಕಳಿಗೆ ಚುನಾವಣಾ ಪ್ರಕ್ರಿ ಯೆಯನ್ನು ತಿಳಿಸಲು ೨೦೨೪-೨೫ನೇ ಸಾಲಿನ ಶಾಲಾ ಸಂಸತ್ತಿನ ಚುನಾವಣೆಯನ್ನು ಏರ್ಪಡಿಸಲಾಗಿತ್ತು.
ಈ ಚುನಾವಣೆಯಲ್ಲಿ 15 ಸ್ಥಾನಕ್ಕೆ 30 ಅಭ್ಯರ್ಥಿಗಳು ಸ್ಪರ್ಧಿಸಿ ದಿ.28 ಶುಕ್ರವಾರ ಸಾರ್ವತ್ರಿಕ ಚುನಾವಣೆಗಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದರು.
ಈ ಚುನಾವಣೆಯಲ್ಲಿ ಮುಖ್ಯ ಚುನಾವಣಾ ಅಧಿಕಾರಿ ಯಾಗಿ ಶಾಲೆಯ ಮುಖ್ಯೋ ಪಾಧ್ಯಾಯರು ನಾಮಪತ್ರವನ್ನು ಪರಿಶೀಲನೆ ಮಾಡಿ ಅಭ್ಯರ್ಥಿ ಗಳಿಗೆ ಸ್ಪರ್ಧಿಸಲು ಅವಕಾಶ ಕಲ್ಪಿಸಿದರು.
ಈ ಚುನಾವಣೆಯನ್ನು ಇವಿಎಂ ಮಾದರಿಯಲ್ಲಿ ದಿ. 29 ಶನಿವಾರ ಚುನಾವಣೆಯು ಯಶಸ್ವಿಯಾಗಿ ಮುಕ್ತಾಯ ಗೊಂಡಿದ್ದು ಇದರ ಫಲಿ ತಾಂಶವು ಜುಲೈ 1 ರಂದು ಪ್ರಕಟಗೊಳ್ಳಲಿದೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.
ಈ ಚುನಾವಣೆಯಲ್ಲಿ ಭಾಗ ವಹಿಸಿದ್ದ ಅಭ್ಯರ್ಥಿಗಳು ಚುನಾ ವಣಾ ಪ್ರಚಾರವನ್ನು ಶಾಲೆಯ ಆವರಣದಲ್ಲಿ ಕೈಗೊಂಡಿದ್ದರು ಚುನಾವಣಾ ಪ್ರಚಾರ ಮುಕ್ತಾ ಯವಾದ ಹಿನ್ನಲ್ಲೇ ಮತದಾನ ಪ್ರಕ್ರಿಯೆ ಆರಂಭಿಸಿ, ಅಭ್ಯರ್ಥಿ ಗಳು ಮತ್ತು ಮತದಾರ ಪ್ರಭು ಗಳು ಉತ್ಸುಕತೆಯಿಂದ ಮತ ಚಲಾಯಿಸಿ ಹರ್ಷ ವ್ಯಕ್ತಪಡಿ ಸಿದರು.
ಈ ಕಾರ್ಯಕ್ರಮದಲ್ಲಿ ಮುಖ್ಯ ಚುನಾವಣಾ ಅಧಿಕಾರಿ ಯಾಗಿ ಶೇಖಪ್ಪ ಗದಗಿನ ಮುಖ್ಯೋಪಾಧ್ಯಾಯರು, PRO ಆಗಿ ಶಿಕ್ಷಕಿ ಪೂಜಾಶ್ರೀ ಹಿರೇಮಠ, APRO ಆಗಿ ಪ್ರಕಾಶ್ ಪಾಟೀಲ್, PO ಆಗಿ ಈಶಪ್ಪ ಕಂಬಳಿ, ಸಹಾಯಕ ರಾಗಿ ಶಿವಕುಮಾರ್ ಹೊಂಬಳ್ ಮತ್ತು ಮಾಬುಸಾಬ್ ಬಡಿ ಗೇರ್, ಶಿಕ್ಷಕೇತರ ಸಿಬ್ಬಂದಿ ವರ್ಗದವರು, ಎಸ್‌ಡಿಎಂಸಿ ಅಧ್ಯಕರು, ಸದಸ್ಯರು, ವಿದ್ಯಾರ್ಥಿ ಗಳು, ಗ್ರಾಮಸ್ಥರು, ಭಾಗವಹಿಸಿ ಚುನಾವಣಾ ಪ್ರಕ್ರಿಯೆಯನ್ನು ಯಶಸ್ವಿಗೊಳಿದರು.