ಸಿರುಗುಪ್ಪ : ಅಭಿವೃದ್ಧಿಗೆ ಕೇಂದ್ರ ಸರ್ಕಾರದ ಹೆಚ್ಚಿನ ಅನುದಾನ : ರಾಜಶೇಖರ ಹಿಟ್ನಾಳ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, 10- ತಾಲೂಕು ಇಬ್ರಾಹಿಂಪುರ್ ದಿಂದ ಬಳ್ಳಾರಿ ಯವರೆಗೆ ರಾಷ್ಟ್ರೀಯ ಹೆದ್ದಾರಿ 150 – ಎ ರಸ್ತೆ ಆರಂಭವಾಗಿ ವರ್ಷಗಳು ಕಳೆದರೂ ಈವರೆಗೆ ಕಾಮಗಾರಿ ನಡೆಯದಿರುವುದು ಆಮೆಗತಿಯಲ್ಲಿ ಸಾಗಿದೆ ರಸ್ತೆ ಇದುವರೆಗೂ ಪೂರ್ಣ ಗೊಂಡಿಲ್ಲ ಹೆದ್ದಾರಿ ಇಬ್ರಾಹಿಂಪುರ ನಿಂದ ಹಳೆಕೋಟೆ ಗೆ ಬೈಪಾಸ್ ರಸ್ತೆ ನಿರ್ಮಿಸಿದರೆ ಅನುಕೂಲವಾಗುವುದು ಈ ಹೆದ್ದಾರಿಯಲ್ಲಿ ಸಚಿವರು ಶಾಸಕರು ಸಂಸದರು ಸಾರ್ವಜನಿಕರು ಓಡಾಡುತ್ತಾರೆ ಆದರೆ ರಸ್ತೆ ಬಗ್ಗೆ ಕ್ರಮ ಕೈಗೊಳ್ಳದಿರುವುದು ಹಾಗೂ ಪ್ರಾಧಿಕಾರದ ಸಂಬಂಧ ಪಟ್ಟವರು ಗಮನ ಹರಿಸಬೇಕು ಅರೆಬರೆ ಕಾಮಗಾರಿಗಳಿಂದ ಅಪಘಾತಕ್ಕೆ ಕಾರಣ ಪ್ರಾಣಕ್ಕೆ ಸಂಚಾಕಾರ ಬೃಹತ್ ಗಾತ್ರದ ವಾಹನ ದ್ವಿಚಕ್ರ ವಾಹನ ನೂರಾರು ಸವಾರರು ಭಯಪಡುವ ಸ್ಥಿತಿ ನಿರ್ಮಾಣವಾಗಿದೆ ರಸ್ತೆ ಕಾಮಗಾರಿ ಪೂರ್ಣ ಅತೀ ಜರೂರುಗೊಳಿಸಬೇಕು ಮತ್ತು ಸಿರುಗುಪ್ಪ ತಾಲೂಕಿನ ತುಂಗಭದ್ರಾ ನದಿ ಸೇತುವೆ ನಿಟ್ಟೂರು-ಸಿಂಗಾಪುರ್ ಗೆ ಕಲ್ಪಿಸುವ ಇದು ಸಹ ನೆನೆಗುದಿಗೆ ಬಿದ್ದಿದೆ ತಕ್ಷಣ ಇದರ ಕಾಮಗಾರಿ ಆರಂಭಿಸುವಂತೆ ಮತ್ತು ರೈತರ ಸಾರ್ವಜನಿಕರ ವಿವಿಧ ಸಮಸ್ಯೆ ಮತ್ತು ಕಾಮಗಾರಿಗಳು ಸಿರುಗುಪ್ಪ ತಾಲೂಕಿನ ಹಲವಾರು ಸಮಸ್ಯೆ ಸಮಗ್ರ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರದಿಂದ ಹೆಚ್ಚಿನ ಅನುದಾನ ಸಿರುಗುಪ್ಪ ತಾಲೂಕಿಗೆ ನೀಡುವಂತೆ ಜನಪ್ರಿಯ ಶಾಸಕ ಬಿ ಎಂ ನಾಗರಾಜ ಅವರು ಲೋಕಸಭಾ ಕ್ಷೇತ್ರ ಸಂಸತ್ ರಾಜಶೇಖರ್ ಹಿಟ್ನಾಳ್ ಅವರಿಗೆ ಕ್ಷೇತ್ರದ ಪರ ವಿನಂತಿಸಿ ಮನವಿ ಮಾಡಿಕೊಂಡರು.
ನಗರದ ಕಮ್ಮವಾರಿ ಕಲ್ಯಾಣ ಮಂಟಪದಲ್ಲಿ ತಾಲೂಕು ಬ್ಲಾಕ್ ಕಾಂಗ್ರೆಸ್ ನಿಂದ ಕೊಪ್ಪಳ ಲೋಕಸಭಾ ಕ್ಷೇತ್ರದ ನೂತನ ಸಂಸತ್ ರಾಜಶೇಖರ ಅವರಿಗೆ ಅಭಿನಂದನ ಗೌರವ ಪೂರ್ವಕ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಸನ್ಮಾನ ಸ್ವೀಕರಿಸಿ ರಾಜಶೇಖರ್ ಹಿಟ್ನಾಳ್ ಅವರು ಮಾತನಾಡಿ ಮುಗಿಯದ ಎನ್ ಹೆಚ್ 150 ಎ ರಾಷ್ಟ್ರೀಯ ಹೆದ್ದಾರಿ ಸಿರುಗುಪ್ಪ ನಗರದಲ್ಲಿ ಅಗಲೀಕರಣ ಅಥವಾ ಬೈಪಾಸಿಗೆ ನಿರ್ಮಿಸುವ ಬಗ್ಗೆ ಮತ್ತು ತುಂಗಭದ್ರ ನದಿ ನಿಟ್ಟೂರು ಸಿಂಗಾಪುರ್ ಸೇತುವೆ ನಿರ್ಮಾಣಕ್ಕೆ ಚರ್ಚಿಸುವುದಾಗಿ ಮತ್ತು ಶೀಘ್ರವೇ ಈ ಕಾಮಗಾರಿಗಳು ಕಾರ್ಯರೂಪಕ್ಕೆ ತರುವುದಾಗಿ ಅದಲ್ಲದೆ ಸಿರುಗುಪ್ಪ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ಕೇಂದ್ರದಿಂದ ಹೆಚ್ಚಿನ ಅನುದಾನ ನೀಡುವುದಾಗಿ ಭರವಸೆ ನೀಡಿದರು.
ಕೊಪ್ಪಳ ಲೋಕಸಭಾ ಮಾಜಿ ಸಂಸತ್ ಕರಡಿ ಸಂಗಣ್ಣ ಮಾಜಿ ಶಾಸಕರು ಬಿಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಟಿ ಎಂ ಚಂದ್ರಶೇಖರಯ್ಯ ಸ್ವಾಮಿ ಸಿರುಗುಪ್ಪ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್ ಕರಿಬಸಪ್ಪ ಚೊಕ್ಕ ಬಸವನಗೌಡ ಅವರು ಮತ್ತು ಬಳ್ಳಾರಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವಯೋಗಿ ಅವರು ಮಾತನಾಡಿದರು.
ತೆಕ್ಕಲಕೋಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗ ರುದ್ರಗೌಡ ಜಿಲ್ಲಾ ಪಂಚಾಯತ್ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಹೆಚ್ ಕೆ ಮಲ್ಲಿಕಾರ್ಜುನಯ್ಯ ಸ್ವಾಮಿ ದಮ್ಮೂರು ಸೋಮಪ್ಪ ಎಂಡಿ ಮರಿ ರಾಜಗೌಡ ಜಿಲ್ಲಾ ವಕ್ಫ್ ಮಾಜಿ ಉಪಾಧ್ಯಕ್ಷ ಸೈಯದ್ ಮೋಹಿದ್ದಿನ್ ಖಾದ್ರಿ ಗೊರವರ ಶ್ರೀನಿವಾಸ್ ತಾಲೂಕು ಮಾಜಿ ಅಧ್ಯಕ್ಷ ಎಂ ಗೋಪಾಲ್ ರೆಡ್ಡಿ ನಗರಸಭೆ ಮಾಜಿ ಸದಸ್ಯ ಹಾಜಿ ಚೌದ್ರಿ ಖಾಜಾ ಸಾಬ್ ಹೋಟೆಲ್ ಹಾಜಿ ಅಬ್ದುಲ್ ಗಪೂರ್ ಸಾಬ್ ಚಿಟಿಕಿ ಹುಸೇನ್ ಸಾಬ್ ಕೋಟಿ ರೆಡ್ಡಿ ಹಾಜಿ ಅಬ್ದುಲ್ ನಬಿ ನಗರ ಸಭೆ ಸದಸ್ಯರಾದ ಬಿ ಎಂ ಅಪ್ಪಾಜಿ ನಾಯಕ್ ಬಿ ವೆಂಕಟೇಶ್ ಹೆಚ್ ಗಣೇಶ್ ನಗರಸಭೆ ಮಾಜಿ ಅಧ್ಯಕ್ಷ ಬಿ ಮುತ್ಯಾಲಯ್ಯ ಶೆಟ್ಟಿ ಮೆಹಬೂಬ್ ಬಾಷಾ ಲಾಲ್ ಸಾಬ್ ದೇಶನೂರು ನಾಗರಾಜ ತೆಕ್ಕಲಕೋಟೆ ಮಲ್ಲಿಕಾರ್ಜುನ ಬಾಲಪ್ಪ ತೆಕ್ಕಲಕೋಟೆ ನರೇಂದ್ರ ಸಿಂಹ ಹಳೆಕೋಟೆ ಬಿಕೆ ವೀರೇಶ್ ನಗರಸಭೆ ಮಾಜಿ ಸದಸ್ಯ ಮಿಂತಿ ಟಿ ಮೊಹಮ್ಮದ್ ಶಫಿ ಮುಲ್ಲಾ ದಾದ ಖಲಂದರ್ ಮುಲ್ಲಾ ಕಲಿಮ್ ಮೋದಿನ್ ಮುಲ್ಲಾ ರೌಫ್ ಹಂಡಿ ಹಾಶಿಮ್ ಹಾಜಿ ಬಿ ಮೆಹಮೂದ್ ಅಡ್ವಕೇಟ್ ಅಮೀರ್ ಬಾಷಾ ಕಾಂಗ್ರೆಸ್ ಕಮಿಟಿ ಪದಾಧಿಕಾರಿಗಳು ಕಾರ್ಯಕಾರಿ ಸಮಿತಿ ಸದಸ್ಯರು ವಿವಿಧ ಸಂಘಗಳ ಅಧ್ಯಕ್ಷರು ಸದಸ್ಯರು ಕಾಂಗ್ರೆಸ್ ಮುಖಂಡರು ಅಭಿಮಾನಿಗಳು ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ನೂತನ ಸಂಸದರಿಗೆ ಗೌರವಿಸಿ ಸನ್ಮಾನಿಸಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಸಂಸದರು ಮಾತನಾಡಿ ಮುಂಬರುವ ಜಿಲ್ಲಾ ಪಂಚಾಯತ್ ತಾಲೂಕು ಪಂಚಾಯತ್ ಚುನಾವಣೆಗಳಲ್ಲಿಯೂ ಕಾಂಗ್ರೆಸ್ಸಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬಹುಮತದಿಂದ ಸದಸ್ಯರನ್ನು ಆಯ್ಕೆ ಮಾಡಬೇಕೆಂದು ತಮ್ಮಲ್ಲಿ ವಿನಂತಿಸುತ್ತೇನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಸರ್ವರಿಗೂ ಐದು ಗ್ಯಾರಂಟಿಗಳ ಯೋಜನೆಗಳನ್ನು ರೂಪಿಸಿ ಅನುಷ್ಠಾನಕ್ಕೆ ತಂದಿದ್ದಾರೆ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೋನಿಯಾ ಗಾಂಧಿ ರಾಹುಲ್ ಗಾಂಧಿ ಪ್ರಿಯಾಂಕ ಗಾಂಧಿ ಅವರ ಕೈ ಬಲಪಡಿಸ ಬೇಕೆಂದು ಅವರು ಕಾಂಗ್ರೆಸ್ ಕಾರ್ಯಕರ್ತರಲ್ಲಿ ಮನವಿ ಮಾಡಿದರು.
