ಸಿರುಗುಪ್ಪ ತಾಲೂಕಿನಲ್ಲಿ ಐತಿಹಾಸಿಕ ಮೊಹರಂ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, 12- ಐತಿಹಾಸಿಕ ಮೊಹರಂ ಸೌದಾಗರ್ ಮೊಹಲ್ಲಾದ ಇಮಾಮ್ ಹುಸೇನ್ ಆಲಮ್ ಪಂಜಾ ಆಶೂರ್ ಖಾನಾದ ಹುಸೇನಿ ಸಾಹೇಬ್ ರ 4ನೇ ದಿನ ಮೊಹರಂ ಧಾರ್ಮಿಕವಾಗಿ ಕುರಾನ್ ಫಾತೇಹ ಓದಿಕೆ ದೀನ್ ಜಗಾಯಿಸುವ ಮುಜಾವರ್ ಜಾಗೀರ್ ದಾರ್ ಖತೀಬ್ ಜಹೀರುದ್ದೀನ್ ಬಾಬು ಅವರ ಸಾನಿಧ್ಯ ಅವರ ನಿವಾಸದಲ್ಲಿ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕ ಬಿ ಎಂ ನಾಗರಾಜ ಅವರ ನೇತೃತ್ವದ ತಂಡ ಊದುಬತ್ತಿ ಲೋಬಾನ ಸಿಹಿ ಪ್ರಸಾದ ಫಾತೇಹಖಾನಿ ಇಮಾಮರ ನುಡಿ ಮುತ್ತುಗಳ ಘೋಷ ದೀನ್ ಜಗಾಯಿಸಿ ಇಮಾಮ್ ಹುಸೇನಿ ಸಾಹೇಬ್ ಅವರ ಫಿಟಾರ (ಪೆಟ್ಟಿಗೆ) ಮೆರವಣಿಗೆ ಸಾಂಸ್ಕೃತಿಕವಾಗಿ ಹಲಗೆ ತಪ್ಪಡಿ ತಾಶ ಬಾಜಾ ಶೆಹೆ ನಾಯಿ ಭಜಂತ್ರಿ ವಾದ್ಯಗಳೊಂದಿಗೆ ಭವ್ಯ ಮೆರವಣಿಗೆ ಸಾಗಿತು ಸಾರ್ವಜನಿಕರು ಭಕ್ತಾದಿಗಳು ಭೇದಭಾವವಿಲ್ಲದೆ ಭಾವೈಕ್ಯತೆ ಏಕತೆ ಉತ್ಸಾಹದಿಂದ ಪಾಲ್ಗೊಂಡು ತಮ್ಮ ಭಕ್ತಿ ಅರ್ಪಿಸಿ ದರ್ಶನ ಪಡೆದರು ಆದೋನಿ ಗೋವಿಂದಪ್ಪ ಲತೀಫ್ ಭಾಯಿ ಮೊಹಮ್ಮದ್ ಆಜಮ್ ಹಂಡಿ ಹುಸೇನ್ ಸಾಬ್ ರಹೀಂ ಸಾಬ್ ಕಾಂಗ್ರೆಸ್ ಯುವ ಮುಖಂಡ ಬಿಎಂ ಮಣಿಕಂಠ ನಾಯಕ ಗೊರವರ ಶ್ರೀನಿವಾಸ ನಗರಸಭೆ ಸದಸ್ಯರಾದ ಹೆಚ್ ಗಣೇಶ ಮೋದಿನ್ ಪವನ್ ದೇಸಾಯಿ ರಬ್ಬಾನಿ ಮೊಹಮ್ಮದ್ ನೌಶಾದ್ ಅಲಿ ಅಬ್ದುಲ್ ನಬಿ ಮತ್ತಿತ್ತರ ಗಣ್ಯರು ಭಾಗವಹಿಸಿದ್ದರು.
ಸೌದಗರ್ ಕೊಪ್ಪಳ ಚಾವಲ್ ಝಾಡ್ ಕ ವಲ್ಲೂರು ಓಡೆ ಬಾಡೆ ಜಾಮ ನಿಜಾಮಿಯಾ ನಗರ ಸೇರಿದಂತೆ ತಾಲೂಕಿನ ಎಲ್ಲಾ ಆಶೂರ್ ಖಾನಾ ಗಳಲ್ಲಿ ಹಜರತ್ ಇಮಾಮ್ ಹಸನ್ ಹುಸೈನ್ ಬಡೆ ಮೌಲಾ ಅಲಿ ಸರ್ದಾರ್ ಅಲಿ ಅಬ್ಬಾಸ್ ಅಲಿ ಇಮಾಮ್ ಖಾಸಿಂ ಅಕ್ಬರ್ ಅಲಿ ಜಿಗಳಿ ಪೀರ ಸಾಹೇಬ್ ಒಂದು ಗೆರೆ ಎರಡು ಗೆರೆ ಮೂರು ಗೆರೆ ಐದು ಗೆರೆ ಚಂದ್ರನ ಆಕಾರವುಳ್ಳ ಪೀರಲ ದೇವರು ಪಂಜಾ ಗಳನ್ನು ಕೂಡಿಸಿ ಧಾರ್ಮಿಕ ಸಾಂಸ್ಕೃತಿಕ ವಿಧಿ ವಿಧಾನಗಳ ಮೂಲಕ ಜುಲೈ 7 ರಿಂದ 17 ರವರೆಗೆ 10 ದಿನಗಳ ಕಾಲ ಮೊಹರಂ ಸಾರ್ವಜನಿಕರು ಉತ್ಸಾಹದಿಂದ ಆಚರಿಸುವರು ತಾಲೂಕಿನ ದೇವಲಾಪುರ ಅಗಸನೂರು ಕೆಂಚನಗುಡ್ಡ ನಾಗಲಾಪುರ ಸೇರಿ ಮೊಹರಂ ಹಬ್ಬ ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತದೆ.
