ಸಿರುಗುಪ್ಪ ತಾಲೂಕಿನಲ್ಲಿ 106ಮಿ.ಮೀ ವರ್ಷಧಾರೆ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, 14- ತಾಲೂಕಿನಲ್ಲಿ ಮಳೆ ಮುಂದುವರೆದಿದ್ದು ತಾಲೂಕಿನ ಕರೂರು ಗ್ರಾಮದಲ್ಲಿ ಅತಿ ಹೆಚ್ಚು 106 ಮಿ. ಮೀ ಮಳೆಯಾಗಿದೆ ರಾವಿಹಾಳ್ ಗ್ರಾಮದಲ್ಲಿ ಅತಿ ಕಡಿಮೆ 18.6 ಮಿ. ಮೀ ಮಳೆ ಸುರಿದಿದೆ.
ಸಿರುಗುಪ್ಪ ನಗರದಲ್ಲಿ 34, ತೆಕ್ಕಲಕೋಟೆ ಪಟ್ಟಣದಲ್ಲಿ 43.2 ,ಸಿರಿಗೇರಿ ಗ್ರಾಮದಲ್ಲಿ 54.4, ಮಣ್ಣೂರು ಸೂಗೂರು 38.4, ಹಚ್ಚೋಳ್ಳಿ 22.4, ಕೆ ಬೆಳಗಲ್ 32.4ಮಿ ಮೀ ಮಳೆಯಾಗಿದೆ 2009ರಲ್ಲಿ ಒಂದೇ ದಿನ 117 ಮಿ.ಮೀ ಮಳೆಯಾಗಿತ್ತು ಈಗ ಕರೂರಿನಲ್ಲಿ 106 ಮಿ.ಮೀ ಅತಿ ಹೆಚ್ಚು ಮಳೆಯಾಗಿದೆ ತಾಲೂಕು ಸಾಂಖ್ಯಿಕ ಇಲಾಖೆ ಅಧಿಕಾರಿಗಳು ಪ್ರಕಟಿಸಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಅಬ್ದುಲ್ ನಬಿ ಅವರು ತಿಳಿಸಿದ್ದಾರೆ.
