ಹಲಗೇರಿ, ಹಂದ್ರಾಳ, ವದಗನಾಳ ಗ್ರಾಮದ ಕಾರ್ಯಕರ್ತರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 13- ಸಂಸದ ಸಂಗಣ್ಣ ಕರಡಿ ಕಟ್ಟಾ ಬೆಂಬಲಿಗರಾದ ಶರಣಪ್ಪ ಬಿನ್ನಾಳ, ಫಕೀರಗೌಡ್ರ ಪಾಟೀಲ್, ಗ್ರಾಪಂ ಮಾಜಿ ಅಧ್ಯಕ್ಷ ದೇವಪ್ಪ ಓಜನಹಳ್ಳಿ ಮತ್ತು ಬೆಂಬಲಿಗರು ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತ ಮತ್ತು ಜನಪರ ಕಾರ್ಯಕ್ರಮ ಮೆಚ್ಚಿ ಕಾಂಗ್ರೆಸ್ ಅಭ್ಯರ್ಥಿ ಕೆ. ರಾಜಶೇಖರ ಹಿಟ್ನಾಳ ನೇತೃತ್ವದಲ್ಲಿ ತಾಲೂಕಿನ ಹಲಗೇರಿ ಗ್ರಾಮದಲ್ಲಿ ಶುಕ್ರವಾರ ಕಾಂಗ್ರೆಸ್ ಸೇರ್ಪಡೆಗೊಂಡರು.
ಲೋಕಸಭಾ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕೆ. ರಾಜಶೇಖರ ಹಿಟ್ನಾಳ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರ ಆಡಳಿತದಿಂದ ಜನ ರೋಶಿ ಹೋಗಿದ್ದಾರೆ. ಅಭಿವೃದ್ಧಿಗಿಂತ ಜಾತಿ ಜಾತಿಗಳ ನಡುವೆ ಬೆಂಕಿ ಹಚ್ಚುವ ಕೆಲಸ ಬಿಜೆಪಿಗರು ಮಾಡುತ್ತಿದ್ದಾರೆ. ಯುವಕರನ್ನು ಧರ್ಮದ ಹೆಸರಿನಲ್ಲಿ ಹೊಡೆದಾಳುವ ನೀತಿ ಅನುಸರಿಸುವ ಮೂಲಕ ಯುವಕರ ದಾರಿತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಕಳೆದ ಹತ್ತು ವರ್ಷದಲ್ಲಿ ದೇಶದಲ್ಲಿ ಅಭಿವೃದ್ಧಿ ಕುಂಠಿತಗೊಂಡಿದೆ ಎಂದರು.
ಲೇಬಗೇರಾ ಮತ್ತು ಹೀರೆಸಿಂದೋಗಿ ಜಿಲ್ಲಾ ಪಂಚಾಯಿತಿ ಕ್ಷೇತ್ರ ಕಾಂಗ್ರೆಸ್ ಪಕ್ಷದ ಭದ್ರಕೋಟೆ. ಎಲ್ಲ ಚುನಾವಣೆಯಲ್ಲೂ ಈ ಭಾಗದಿಂದ ಪಕ್ಷಕ್ಕೆ ಹೆಚ್ಚಿನ ಮತ ಬಂದಿವೆ. ಸಂಸದ ಸಂಗಣ್ಣ ಕರಡಿಯವರು ತಂದೆ ಸಮಾನರು, ಮುತ್ಸದಿ ರಾಜಕಾರಣಿ, ಅವರ ಮಾರ್ಗದರ್ಶನದಲ್ಲಿ ನಾವು ರಾಜಕಾರಣ ಕಲಿತಿದ್ದೇವೆ. ಅಂತಹ ನಾಯಕನಿಗೆ ಟಿಕೆಟ್ ಕೈತಪ್ಪಿದೆ. ಬಿಜೆಪಿಯಲ್ಲಿ ಅವರನ್ನು ಯಾವುದೇ ಕಾರ್ಯಕ್ರಮಕ್ಕೆ ಆಹ್ವಾನಿಸಲ್ಲ. ಅದು ಕೇವಲ ಜೆಡಿಎಸ್ ಕಾರ್ಯಕ್ರಮವಾಗಿ ಮಾರ್ಪಾಡು ಆಗುತ್ತಿದೆ. ಹೀಗಾಗಿ ಸ್ವಾಭಿಮಾನಿ ಸಂಗಣ್ಣ ಕರಡಿ ಅಭಿಮಾನಿಗಳು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೊಳ್ಳುತ್ತಿರುವುದು ಪಕ್ಷಕ್ಕೆ ಮತ್ತಷ್ಟು ಬಲ ಬಂದಿದೆ. ಎಲ್ಲರೂ ಒಂದಾಗಿ ಚುನಾವಣೆ ಎದುರಿಸೋಣ ಎಂದರು.
ಕಾಂಗ್ರೆಸ್ ಸೇರ್ಪಡೆಗೊಂಡು ಮಾತನಾಡಿದ ಪಿಎಲ್ ಡಿ ಬ್ಯಾಂಕ್ ನಿರ್ದೇಶಕ ಮಾರುತಿ ಅಂಗಡಿ, ಬಿಜೆಪಿಯಲ್ಲಿ ನಿಷ್ಠಾವಂತ ಕಾರ್ಯಕರ್ತರಿಗೆ ಬೆಲೆ ಇಲ್ಲ. ಬಿಜೆಪಿ-ಜೆಡಿಎಸ್ ಹೊಂದಾಣಿಕೆಯಿಂದ ಮೂಲ ಕಾರ್ಯಕರ್ತರನ್ನು ಕಡೆಗಣಿಸಿದ್ದಾರೆ. ಅನಿವಾರ್ಯವಾಗಿ ಬಿಜೆಪಿ ತೊರೆದು ಇಂದು ಜನಪರವಾಗಿರುವ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡಿದ್ದೇವೆ. ಎಲ್ಲರೂ ಒಗ್ಗೂಡಿಕೊಂಡು ಕಾಂಗ್ರೆಸ್ ಅಭ್ಯರ್ಥಿಯನ್ನು ಒಂದು ಲಕ್ಷ ಮತಗಳ ಅಂತರದಿಂದ ಗೆಲ್ಲಿಸೋಣ ಎಂದರು.
ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ : ಸಂಗಣ್ಣ ಬೆಂಬಲಿಗ ಹಲಗೇರಿಯ ಶರಣಪ್ಪ ಬಿನ್ನಾಳ, ಹಂದ್ರಾಳ ಗ್ರಾಮದ ಫಕೀರಗೌಡ್ರ ಪಾಟೀಲ್, ಹಲಗೇರಿ ಗ್ರಾಪಂ ಮಾಜಿ ಅಧ್ಯಕ್ಷ ದೇವಪ್ಪ ಓಜನಹಳ್ಳಿ, ವದ್ನಾಳ ಗ್ರಾಮದ ಡಾ.ಮಹಾಂತೇಶ ಪಾಟೀಲ್, ಗ್ರಾಪಂ ಮಾಜಿ ಸದಸ್ಯ ಬಸನಗೌಡ್ರ ಮಾಲಿಪಾಟೀಲ್, ಪಿಎಲ್ ಡಿ ಬ್ಯಾಂಕ್ ನಿರ್ದೇಶಕ ಮಾರುತಿ ಅಂಗಡಿ, ಹಲಗೇರಿ ಗ್ರಾಪಂ ಹಾಲಿ ಸದಸ್ಯ ಜಗದೀಶ ಓಜನಹಳ್ಳಿ, ನಾಗರಾಜ ಓಜನಹಳ್ಳಿ, ಹಲಗೇರಿ ಗ್ರಾಪಂ ಮಾಜಿ ಅಧ್ಯಕ್ಷೆ ಪತಿ ಹನುಂತಪ್ಪ ತಳವಾರ, ವದ್ನಾಳ ಗ್ರಾಪಂ ಹಾಲಿ ಸದಸ್ಯ ತಿಮ್ಮನಗೌಡ್ರ ಮಾಲಿಪಾಟೀಲ್, ಹಂದ್ರಾಳ ಗ್ರಾಪಂ ಹಾಲಿ ಸದಸ್ಯರು ಫಕೀರಪ್ಪ ಗಾಂಜಿ, ಮಂಜುನಾಥ ಹ್ಯಾಟಿ, ಈರಣ್ಣ ಮಂಡಪ್ಪನವರ್, ಹುಚ್ಚಪ್ಪ ವಾರದ, ದೇವಪ್ಪ ಮ್ಯಾಗಳಮನಿ ಸೇರಿದಂತೆ ಹಲಗೇರಿ, ವದಗನಾಳ ಮತ್ತು ಹಂದ್ರಾಳ ಗ್ರಾಮದ ಅನೇಕ ಮುಖಂಡರು ಮತ್ತು ಕಾರ್ಯಕರ್ತರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಕೆ. ಬಸವರಾಜ ಹಿಟ್ನಾಳ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣರಡ್ಡಿ ಗಲಭಿ, ಜಿಪಂ ಮಾಜಿ ಅಧ್ಯಕ್ಷ ಟಿ. ಜನಾರ್ಧನ ಹುಲಿಗಿ, ಮುಖಂಡರಾದ ಪ್ರಸನ್ನ ಗಡಾದ, ಬಾಲಚಂದ್ರ, ವೆಂಕೋಬ ದಾಸರ್, ಯಂಕಪ್ಪ ಹೊಸಳ್ಳಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
