ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನ ರಾಮ್ 38ನೇ ಪುಣ್ಯ ಸ್ಮರಣೆ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, 6- ನಮ್ಮ ವೈ ವಿದ್ಯಮಯ ಸಂಸ್ಕೃತಿ ಮತ್ತು ಪರಂಪರೆಯನ್ನು ಗೌರವಿಸುವುದು ಮತ್ತು ಕಾಪಾಡುವುದು ಪ್ರತಿಯೊಬ್ಬ ಭಾರತೀಯನ ಸಂವಿಧಾನಬದ್ಧ ಮೂಲಭೂತ ಕರ್ತವ್ಯ ಎಂದು ತಾಲೂಕು ಕಚೇರಿಯ ಶಿರಸ್ತೆ ದಾರ ರಾಘವೇಂದ್ರ ಹಾಗೂ ರವೀಂದ್ರ ಬಾಬು ಅವರು ಅಭಿಪ್ರಾಯ ಪಟ್ಟರು.
ಕರ್ನಾಟಕ ಸರ್ಕಾರ ತಾಲೂಕು ಆಡಳಿತದಿಂದ ಸಿರುಗುಪ್ಪ ನಗರದ ತಾಲೂಕು ಕಚೇರಿಯ ತಹಶೀಲ್ದಾರ್ ರವರ ಕಾರ್ಯಾಲಯದಲ್ಲಿ ಹಸಿರು ಕ್ರಾಂತಿಯ ಹರಿಕಾರ ರಾಷ್ಟ್ರ ನಾಯಕ ಹಾಗೂ ಭಾರತದ ಮಾಜಿ ಉಪ ಪ್ರಧಾನಮಂತ್ರಿ ಡಾ ಬಾಬು ಜಗಜೀವನ್ ರಾಮ್ ರವರ 38ನೇ ಪುಣ್ಯ ಸ್ಮರಣೆ ಡಾ ಬಾಬು ಜಗಜೀವನ್ ರಾಮ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಪುಷ್ಪ ಅರ್ಪಿಸಿ ಗೌರವಿಸಿ ನಮನ ಸಲ್ಲಿಸಿ ಮಾತನಾಡುತ್ತಿದ್ದರು.
ರಾಷ್ಟ್ರೀಯ ಸಾಕ್ಷರತಾ ಸದಸ್ಯ ಸಮಾಜ ಸುಧಾರಕ ಎ ಅಬ್ದುಲ್ ನಬಿ ಅವರು ಮಾತನಾಡಿ ನಮ್ಮ ಮಕ್ಕಳು ನಮ್ಮ ಹೆಜ್ಜೆಯನ್ನೇ ಅನುಸರಿಸಬೇಕು ಎಂಬುದು ಅವರದ್ದೇ ಆದ ದಾರಿಯನ್ನು ನಿರ್ಮಿಸಿಕೊಂಡು ಸಾಗಲು ಪ್ರೋತ್ಸಾಹಿಸಬೇಕು ಸತ್ಯ ಒಂದೇ ಮಾರ್ಗಗಳು ಅನೇಕ ಶಿಕ್ಷಣ ಸಾಮಾಜಿಕ ನ್ಯಾಯ ಹೋರಾಟ ದಿಂದ ಡಾ ಬಾಬು ಜಗಜೀವನ್ ರಾಮ್ ಅವರು ದೇಶಕ್ಕೆ ನೀಡಿದ ಕೊಡುಗೆ ಅಪಾರ ಎಂದು ಸಾಮಾಜಿಕ ಕಾರ್ಯಕರ್ತ ಅಬ್ದುಲ್ ನಬಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಕಂದಾಯ ಇಲಾಖೆ ತಾಲೂಕು ಕಚೇರಿ ಎಫ್ ಡಿ ಎ ಗಳಾದ ಶೇಕ್ಷವಲಿ ಮಹಾಂತೇಶ ಎಸ್ ಡಿ ಎ ಗಳಾದ ಶೇಖರ್ ತುಷಾರ್ ಸಮ್ರಿನ್ ಸಾಮಾಜಿಕ ಕಾರ್ಯಕರ್ತ ಮೊಹಮ್ಮದ್ ನೌಶಾದ್ ಅಲಿ ಸಿಬ್ಬಂದಿ ವರ್ಗದವರು ಸಾರ್ವಜನಿಕರು ಇದ್ದರು
