WhatsApp Image 2024-07-09 at 12.24.03 PM

ಹಿಂದೂ-ಮುಸ್ಲಿಂ ಒಟ್ಟಾಗಿ  ಮೊಹರಂ ಆಚರಿಸಿ : ಸಿಪಿಐ ಮೌನೇಶ್ವರ

ಕರುನಾಡ ಬೆಳಗು ಸುದ್ದಿ

ಯಲಬುರ್ಗಾ, 9- ಪಟ್ಟಣದಲ್ಲಿರುವ ಎಲ್ಲಾ ಸಮುದಾಯದ. ಹಿಂದು ಮತ್ತು ಮುಸ್ಲಿಂ ಬಾಂಧವರು ಎಲ್ಲರೂ ಕೂಡಿ ಒಟ್ಟಾಗಿ ಅತ್ಯಂತ ಪ್ರೀತಿಯಿಂದ ಮೊರಂ ಹಬ್ಬವನ್ನು ಆಚರಣೆ ಮಾಡಿ ಎಂದು ಸಿಪಿಐ ಮೌನೇಶ್ವರ ಪಾಟೀಲ್ ಹೇಳಿದರು.

ಪಟ್ಟಣದ ಪೋಲಿಸ್ ಠಾಣೆಯ ಆವರಣದಲ್ಲಿ ಮೊರಂ ಹಬ್ಬದ ಪ್ರಯುಕ್ತ ನಡೆದ ಪೊವ೯ಭಾವಿ ಶಾಂತಿಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಯಲಬುರ್ಗಾ ತಾಲೂಕಿನ ಜನರು ಮುಗ್ದ ಮತ್ತು ಶಾಂತ ಸ್ವಭಾವದವರು ಇಲ್ಲಿ ಜಾತಿ ಭೇದವಿಲ್ಲದೆ ಪ್ರತಿಯೊಂದು ಹಬ್ಬವನ್ನು ಎಲ್ಲರೂ ಸೇರಿ ಒಂದಾಗಿ ಸಂತೋಷದಿಂದ ಆಚರಿಸುತ್ತಾರೆ ಇಲ್ಲಿನ ಸ್ಥಳೀಯ ರು ಎಲ್ಲರೂ ಹೊಂದಾಣಿಕೆಯಿಂದ ಹಬ್ಬವನ್ನು ಶಾಂತಿ ಸಹಕಾರದಿಂದ ಆಚರಣೆ ಮಾಡುವುದು ನೋಡಿದರೆ ನಮ್ಮಗೆ ಸಂತೋಷವೆನ್ನಿಸುತ್ತದೆ ಜಿಲ್ಲೆಯಲ್ಲಿಯೇ ಯಲಬುರ್ಗಾ ತಾಲೂಕು ಶಾಂತಿ ಸಹನೆ. ಪ್ರೀತಿ ವಿಶ್ವಾಸಕ್ಕೆ ತವರುರ ಆಗಿದೆ ಯಾವುದೇ ಹಬ್ಬದಲ್ಲಿ ಕೂಮು ಗಲಭೆ ಅವಕಾಶವಿಲ್ಲ ಯಾರು ಕಾನೂನು ಉಲ್ಲಂಘನೆ ಮಾಡಬಾರದು ಎಂದು ಹೇಳಿದರು.

ನಂತರ ಪಿಎಸ್ಐ ವಿಜಯ್ ಪ್ರತಾಪ್ ಅವರು ಮಾತನಾಡಿ ಪಟ್ಟಣದಲ್ಲಿ ಯಾವುದೇ ರೀತಿಯ ಕೋಮು ಗಲಭೆ ನೆಡದ ಉದಾಹರಣೆಗಳು ಇಲ್ಲಾ ಶಾಂತಿ. ಮತ್ತು ಸುವ್ಯವಸ್ಥೆಗೆ ಯಲಬುರ್ಗಾ ಹೆಸರಾಗಿದೆ.ಎಲ್ಲರೂ ಒಂದಾಗಿ ಪ್ರೀತಿಯಿಂದ ಹಬ್ಬವನ್ನು ಆಚರಿಸಬೇಕು ನಮ್ಮ ಪೋಲಿಸ್ ಇಲಾಖೆಯಿಂದ ಸೂಕ್ತಒದಗಿಸಲಾಗುವುದು ಭದ್ರತೆ ಒದಗಿಸಲಾಗುವುದು,ಎಂದು ಹೇಳಿದರು.

ಈ ಸಂದರ್ಭದಲ್ಲಿ ಮುಖಂಡರಾದ ಅಮರೇಶ ಹುಬ್ಬಳ್ಳಿ. ಅತ್ತರಸಾಬ ಖಾಜ್ಜಿ. ಅಂದಯ್ಯ ಕಳ್ಳಿಮಠ. ಸುರೇಶಗೌಡ ಶಿವನಗೌಡ್ರ. ರೇವಣಪ್ಪ ಹಿರೇಕುರಬರ. ಶಿದ್ರಾಮೇಶ ಬೇಲೇರಿ.ರಿಯಾಜ್ ಖಾಜ್ಜಿ. ಬಸಲಿಂಗಪ್ಪ ಕೊತ್ತಲ್. ಎಂ. ಎಫ್. ನಧಾಪ್. ಬಾಬುಸಾಬ ಕುಂದಗೋಳ ಮೈಹಿಬೂಸಾಬ ಮಕಾಂದಾರ. ಮಲೇಶಗೌಡ ಮಾಲಿ ಪಾಟೀಲ. ವಸಂತ ಕುಮಾರ್ ಭಾವಿಮನಿ.ಶಿವಾನಂದ ಬಣಕಾರ.ಬಸವರಾಜ ಅಧಿಕಾರಿ ಬಸವರಾಜ ಖಾನಾವಳಿ ಮತ್ತು ಪೋಲಿಸ್ ಇಲಾಖೆಯ ಸಿಬ್ಬಂದಿಗಳು ಮತ್ತು ಇತರರು ಭಾಗವಹಿಸಿದ್ದರು.

ಬಾಳನಗೌಡ ಪಾಟೀಲ ಎಲ್ಲರಿಗೂ ಸ್ವಾಗತಿಸಿ ವಂದಸಿದರು.

Leave a Reply

Your email address will not be published. Required fields are marked *

error: Content is protected !!