ಹಿರೇಸಿಂದೋಗಿ ವಸತಿ ಶಾಲೆ : ಅತಿಥಿ ಶಿಕ್ಷಕರ ನೇಮಕಕ್ಕೆ ಅರ್ಜಿ ಆಹ್ವಾನ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 24- ಹಿರೇಸಿಂದೋಗಿಯ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ವಸತಿ ಶಾಲೆ (ಸಿ.ಬಿ.ಎಸ್.ಇ. ಪಠ್ಯಕ್ರಮ)ಯಲ್ಲಿ ಪ್ರಸ್ತುತ ಶೈಕ್ಷಣಿಕ ಸಾಲಿನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅತಿಥಿ (ಗೌರವ) ಶಿಕ್ಷಕರ ನೇಮಕಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ವಸತಿ ಶಾಲೆಯು 06 ನೇ ತರಗತಿ ಯಿಂದ 12ನೇ ತರಗತಿ ವರೆಗೆ ಕಾರ್ಯನಿರ್ವಹಿಸುತ್ತಿದ್ದು, ಬೋಧನಾ ವಿಷಯ ಹಿಂದಿ (ಎಂ.ಎ. ಬಿಎಡ್), ಗಣಿತ(ಎಂ.ಎಸ್ಸಿ, ಬಿ.ಎಡ್), ಸಮಾಜ ವಿಜ್ಞಾನ(ಎಂ.ಎ. ಬಿಎಡ್), ಗಣಕಯಂತ್ರ ವಿಜ್ಞಾನ(ಎಂ.ಟೆಕ್/ಎA.ಸಿ.ಎ), ರಸಾಯನಶಾಸ್ತç(ಎಂ.ಎಸ್ಸಿ, ಬಿ.ಎಡ್), ಭೌತಶಾಸ್ತç(ಎಂ.ಎಸ್ಸಿ, ಬಿ.ಎಡ್), ಜೀವಶಾಸ್ತç(ಎಂ.ಎಸ್ಸಿ, ಬಿ.ಎಡ್), ಆರ್ಟ್ಸ್ ಮತ್ತು ಕ್ರಾಫ್ಟ್÷(ಎಎಂಜಿಡಿ) ವಿಷಯಗಳಿಗೆ ಮುಂದೆ ತಿಳಿಸಿದ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಮೇ 31 ರ ಸಂಜೆ 04.30 ಗಂಟೆಯೊಳಗೆ ವಸತಿ ಶಾಲೆಗೆ ಅರ್ಜಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ರಮೇಶ(ಪ್ರ.ದ.ಸ): 9036326839 ಗೆ ಸಂಪರ್ಕಿಸಬಹುದು ಎಂದು ವಸತಿ ಶಾಲೆಯ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
