
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹುಚ್ಚಮ್ಮ ಚೌದ್ರಿಗೆ
ರಾಜ್ಯ ಮಟ್ಟದ ಸಂದೇಶ ಶಿಕ್ಷಣ ಪ್ರಶಸ್ತಿ ಪ್ರಧಾನ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 28- ಶಿಕ್ಷಣ ಕ್ಷೇತ್ರಕ್ಕೆ ಹುಚ್ಚಮ್ಮ ಚೌದ್ರಿಯವರು ನೀಡಿದ ಅಮೂಲ್ಯ ಸೇವೆಯನ್ನು ಮನಗಂಡು ಸಂದೇಶ ಸಂಸ್ಕೃತಿ ಮತ್ತು ಶಿಕ್ಷಣ ಪ್ರತಿಷ್ಠಾನವು ಹಾಗೂ ಎಸ್ ಎಫ್ ಎಸ್ ಸಂಸ್ಥೆಯ ಸಹಯೋಗದೊಂದಿಗೆ 2024 ರ ರಾಜ್ಯ ಮಟ್ಟದ ‘ಸಂದೇಶ ಶಿಕ್ಷಣ ಪ್ರಶಸ್ತಿ’ ಯನ್ನು ನೀಡಿ ಗೌರವಿಸಲಾಯಿತು.
ಇಂದು ಕುಣಕೇರಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಎಸ್. ಎಫ್. ಎಸ್. ಐಸಿಎಸ್ಇ ಶಾಲೆಯ ಪ್ರಾಂಶುಪಾಲರಾದ ಫಾ. ಜಬಮಲೈರವರು ಹುಚ್ಚಮ್ಮ ಚೌದ್ರಿಯವರಿಗೆ ಪ್ರಶಸ್ತಿ ಫಲಕ ಹಾಗೂ ಹತ್ತು ಸಾವಿರ ರೂಪಾಯಿಗಳ ಚೆಕ್ ನ್ನು ವಿತರಿಸಿ ಗೌರವಿಸಿದರು.
ಈ ಕಾರ್ಯಕ್ರಮದಲ್ಲಿ ರೆ. ಫಾ. ಮ್ಯಾಥ್ಯೂ ಮಾಮ್ಲಾ ರವರು ಹಾಗೂ ಸ. ಹಿ ಪ್ರಾ. ಶಾಲೆ ಮುಖ್ಯೋಪಾಧ್ಯಾಯರಾದ ಗವಿಸಿದ್ಧಪ್ಪ ಹಾಗೂ ಸಿಬ್ಬಂದಿ ವರ್ಗದವರು ಮತ್ತು ಶಾಲಾ ಮಕ್ಕಳು ಉಪಸ್ಥಿತರಿದ್ದರು.