
ಹುಬ್ಬಳ್ಳಿ ಯಲ್ಲೊಂದು ಗಮನ ಸೆಳೆಯುವ ರೈಲ್ವೆ ಮ್ಯೂಸಿಯಂ
ಪ್ರವಾಸ ಕಥನ
ಕರುನಾಡ ಬೆಳಗು ಓದುಗರಿಗಾಗಿ
ಇಡೀ ವಿಶ್ವದಲ್ಲೇ ಅತಿ ಉದ್ದವಾದ ರೈಲ್ವೆ ಪ್ಲಾಟ್ ಪಾರ್ಮ ಹೊಂದಿರುವ ಸದ್ಗರು ಶ್ರೀ ಸಿದ್ದಾರೂಢ ಹುಬ್ಬಳ್ಳಿ ಸ್ಟೇಷನ್ ನಲ್ಲಿ ರೈಲ್ವೆ ಮೂಸಿಯಂ ಇರುವುದು ಬಹಳ ಜನರಿಗೆ ತಿಳಿದಿರಲಿಕ್ಕಿಲ್ಲ ಮೊನ್ನೆ ನಮ್ಮ ಸಹೋದರ ಸಂತೋಷ ಕುಮಾರ ಸೋನಾರ ಈ ಸಲ ಅಕ್ಟೋಬರ್ ದಸರಾ ರಜೆಗೆ ನೀವು ಹುಬ್ಬಳ್ಳಿ ಗೆ ಬರಬೇಕು ನಾವು ಹೊಸದಾಗಿ ಖರೀದಿಸಿದ ಹೊಸ ಮನೆ ನೋಡಬೇಕು ಎಂಬ ಒತ್ತಾಸೆಯಿಂದ ಹೋದಾಗ ಹುಬ್ಬಳ್ಳಿ ಯ ರೈಲ್ವೆ ಬಗ್ಗೆ ಮಾತಾನಾಡುತ್ತಿದ್ದಾಗ ಮೂಸಿಯಂ ಗೆ ಹೋಗಿಬರೋಣ ಅಂದಿದ್ದೆ ತಡ ನಾನು ಜಾಗೃತನಾದೆ ಪೇಸ್ ಬುಕ್ ನ ನಮ್ಮ ಪ್ರೀತಿಯ ಒದುಗ ಬಳಗಕ್ಕೆ ಹೊಸ ಮಾಹಿತಿ ಕೊಟ್ಟಂತಾಗುತ್ತದೆ ಅಂದೆ ಕೂಡಲೇ Maruti swift ಕಾರ್ ಹೊರತಗೆದು ಮಕ್ಕಳೊಂದಿಗೆ ಹೊರಟೆಬಿಟ್ಟೇವು.
ಹುಬ್ಬಳ್ಳಿ ಯಿಂದ ಗದಗ ಗೆ ತೆರಳುವ ಮಾರ್ಗದಲ್ಲಿ ಇರುವ ಭಾರತೀಯ ರೈಲ್ವೆ ಅಚ್ಚು ಕಾರ್ಖಾನೆಯ ಪಕ್ಕದಲ್ಕಿ ಕಂಡುಬರುವ ರೈಲ್ವೆ ಮೂಸಿಯಂ ಎಲ್ಲರ ಗಮನ ಸಳೆಯುತಿದೆ
ಭಾರತೀಯ ರೈಲ್ವೆ ಯ ಇತಿಹಾಸ ಮತ್ತು ಅಚ್ವು ಮತ್ತು ಗಾಲಿ ವಿವಿಧ ನಮೂನೆಯ ಭೋಗಿಗಳು ನ್ಯಾರೋ ಗೇಜ್ ಮೀಟರ್ ಗೇಜ್ ಬ್ರಾಡ್ ಗೇಜ್ ಈ ಮೂರು ನಮೂನೆಯ ಹಳಿ ಆ ಹಳಿಗಳ ಮೇಲೆ ನಿಂತಿರುವ ಆಕಾಲದಲ್ಲಿ ಸೇವೆ ಸಲ್ಲಿಸಲಾಗಿದ್ದ ಗೂಡ್ಸ ಹಾಗೂ ಪ್ಯಾಸೆಂಜರ್ ರೈಲಿನ ಇಂಜಿನ್ ಗಳನ್ನು ಸೇವೆ ಸ್ಥಗಿತಗಿಳಿಸಿದ ಇಂಜಿನ್ ಗಳನ್ನು ಮಾದರಿಯಾಗಿ ನಿಲ್ಲಿಸಿದ್ದಾರೆ.
ರೈಲ್ವೆ ಇಂಜಿನಿಯರಿಂಗ್ ನ ವಿವಿಧ ಮಾದರಿಗಳು ಅದಕ್ಕೆ ಸಂಭದಿಸಿದ ಯಾಂತ್ರಿಕ ಮತ್ತು ತಾಂತ್ರಿಕ ಹೊಸ ಅನ್ವೇಷಣೆಗಳು ವಿದ್ಯುತ್ ನ ಸಂಪರ್ಕದ ಸಾಧನಗಳನ್ನು ಒಪ್ಪ ಒರಣವಾಗಿ ಜೋಡಿಸಿಟ್ಟಿದ್ದಾರೆ ಎರಡು ಗಟ್ಟಿಮುಟ್ಟಾದ ಹಂಚಿನ ಮನೆಯ ಗೆ ಒಂದು ಮಲಪ್ರಭಾ ಇನ್ನೊಂದು ಘಟಪ್ರಭಾ ಎರಡು ಮೂಸಿಯಂ ಗಳು ಉತ್ತಮವಾದ ಗಾಳಿ ಬೆಳಕು ಸುಸಜ್ಜಿತವಾದ ಸ್ವಚ್ಚವಾದ ಮೂಸಿಯಂ ಆಸಕ್ತರ ಗಮನಸೆಳೆಯುತ್ತಿದೆ
ವಿಶೇಷವಾಗಿ ಸುಮಾರು ಅರವತ್ತು ಎಪ್ಪತ್ತು ವರುಷದ ರೈಲ್ವೆ ಇತಿಹಾಸವನ್ನು ಈ ಮೂಸಿಯಂ ಹೇಳುತ್ತಿದೆ
ಒಂದು ರೈಲ್ವೆ ಸ್ಟೇಷನ್ ನಲ್ಲಿ ಏನೇನು ವಸ್ತುಗಳು ಉಪಯೋಗಿಸುವ ಉಪಕರಣಗಳು ವಿವಿಧ ಸಾಮಗ್ರಗಳು ಉಡುಪುಗಳು ರೈಲ್ವೆ ಕಾರ್ಮಿಕರಿಗೆ ಸಂಭದಿಸಿದ ಅನೇಕ ಉಪಕರಣಗಳನ್ನು ಒಪ್ಪವಾಗಿ ಜೋಡಿಸಿಟ್ಟು ಅವುಗಳ ಇತಿಹಾಸ ಬಳಕೆ ಜೋಡಣೆ ಯ ಬಗ್ಗೆ ವಿವುರವಾದ ಮಾಹಿತಿಯನ್ನು ಒಳಗೊಂಡ ಇಂಗ್ಲಿಷ್ ಮತ್ತು ಕನ್ನಡ ಭಾಷೆಯಲ್ಲಿ ಬರೆದು ಉಪಕರಿಸಿದ್ದಾರೆ.ಮಕ್ಕಳಿಗಾಗಿ Toy train ವ್ಯವಸ್ಥೆ ಇದೆ ಒಂದು ದಿನದ Smart small picnic ಗೆ ಸೂಕ್ತವಾದ ಪ್ರಶಸ್ತವಾದ ಸ್ಥಳ ಎನ್ನಬಹುದು ಸ್ವಚ್ಛ ವಾದ ಶೌಚಾಲಯ ಮತ್ತು ಮೂತ್ರಾಲಯ ವ್ಯವಸ್ಥೆ ಇದೆ ಹಸಿವಾದರೆ Cafeteria ಕೂಡಾ ಉಪಯೋಗಿಸಬಹುದು ಮಕ್ಕಳಿಗೆ 10 ರೂ ವಯಸ್ಕರಿಗೆ 20 ರೂ ದರ ನಿಗದಿಪಡಿಸಲಾಗಿದೆ Toy train ಗೆ ಮಕ್ಕಳು Enjoy ಮಾಡಲು10 ರೂ ದರ ಇದೆ
ಆಸಕ್ತರು ಒಮ್ಮೆ ಭೇಟಿ ನೀಡಿ
•••••••••••••••••• ನಮಸ್ಕಾರ
# ಲೇಖನ #
ನಟರಾಜ್ ಸೋನಾರ್
ಚಿತ್ರಗಳು ಹರ್ಷಿತ್ ಎಸ್