IMG-20231115-WA0001

 ಹುಲಗಿಯಲ್ಲಿ ಗಾಂಜಾ ಮಾರಾಟ

                         ಆರೋಪಿಗಳ ಬಂಧನ

ಕರುನಾಡ ಬೆಳಗು ಸುದ್ದಿ
ಕೊಪ್ಪಳ, 15- ತಾಲ್ಲೂಕಿನ ಹುಲಿಗಿ ಗ್ರಾಮದಲ್ಲಿ ಗಾಂಜಾ ಮಾರಾಟ ಮಾಡುತ್ತಿರುವವರ ಮೇಲೆ ಪೊಲೀಸರು ದಾಳಿ ನಡೆಸಿ ಗಾಂಜಾ ಜಪ್ತಿ ಮಾಡಿ ಆರೋಪಿಗಳನ್ನು ಬಂದಿಸಿದ್ದಾರೆ..
ಪ್ರಕರಣದಲ್ಲಿ ಬಿಹಾರಿ ಮೂಲದ ಮೂವರು ವಿರುದ್ಧ ಎಫ್ಐಆರ್ ದಾಖಲಾಗಿದ್ದು ಹುಲಿಗಿ ಗ್ರಾಮದ ಸೂರ್ಯನಾರಾಯಣ ದೇವಸ್ಥಾನದ ಬಳಿ ಗಾಂಜಾ ಮಾರಾಟ‌ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಹುಲಿಗಿಯ ದರ್ಶನಕುಮಾರ ಹೊಸಮನಿ ಹಾಗೂ ವಿಜಯನಗರ ಜಿಲ್ಲೆಯ ಚಿಲಕನಹಟ್ಟಿ ಗ್ರಾಮದ ಮಂಜುನಾಥ ಎಂಬುವವರನ್ನು ಬಂಧಿಸಲಾಗಿದೆ. ಬಿಹಾರಿ ಮೂಲದ ವ್ಯಕ್ತಿಯೊಬ್ಬರ ವಿರುದ್ದವೂ ದೂರು ದಾಖಲಾಗಿದೆ, ವಿವರ ಲಭ್ಯವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣದ ಸ್ಥಳಕ್ಕೆ ಕೊಪ್ಪಳ ಡಿವೈಎಸ್ ಪಿ ಶರಣಪ್ಫ ಸುಬೇದಾರ ಭೇಟಿ ನೀಡಿ ಪರಿಶೀಲಿಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Leave a Reply

Your email address will not be published. Required fields are marked *

error: Content is protected !!