17-1

ಕುಕನೂರಿನ ಸರಕಾರಿ ಕೈಗಾರಿಕಾ ತರಬೇತಿ ಕೆಂದ್ರದಲ್ಲಿ  ಹೈದರಾಬಾದ್ ಕನಾ೯ಟಕ ವಿಮೋಚನಾ ದಿನಾಚರಣೆ          

 ಹೋರಾಟಗಾರರ ತ್ಯಾಗ – ಬಲಿದಾನದಿಂದ ಮುಕ್ತಿ : ಚನ್ನಬಸಪ್ಪ

 

ಕುಕನೂರ , 17- 1948, ಸೆಪ್ಟೆಂಬರ 17ರಂದು ಭಾರತೀಯ ಸೇನೆಯು ಆಪರೇಷನ್ ಪೋಲೋ’ ಎಂಬ ಪೊಲೀಸ್ ಕಾರ್ಯಾಚರಣೆಯ ನಂತರ ಹೈದರಾಬಾದ್ ನಿಜಾಮನ ಆಳ್ವಿಕೆಯಿಂದ ವಿಮೋಚನೆ ಹೊಂದಿ ಹೈದ್ರಾಬಾದ್ ಪ್ರಾಂತ್ಯವು  ಭಾರತದ ಒಕ್ಕೂಟಕ್ಕೆ ಸೇರ್ಪಡೆ ಆಯಿತು ಎಂದು  ಕುಕನೂರಿನ ಸರಕಾರಿ ಕೈಗಾರಿಕಾ ತರಬೇತಿ ಕೆಂದ್ರದ ಪ್ರಾಚಾರ್ಯರಾದ ಚನ್ನಬಸಪ್ಪ ಬಳ್ಳಾರಿ ಹೇಳಿದರು.

ಅವರು ಕುಕನೂರಿನ ಸರಕಾರಿ ಕೈಗಾರಿಕಾ ತರಬೇತಿ ಕೆಂದ್ರದಲ್ಲಿ  ಹೈದರಾಬಾದ್ ಕನಾ೯ಟಕ ವಿಮೋಚನಾ ದಿನಾಚರಣೆ ಅಂಗವಾಗಿ ದ್ವಜಾರೋಹಣ  ನೇರವೆರಿಸಿ ಮಾತನಾಡಿದರು.

ಹೈದರಾಬಾದ್  ನಿಜಾಮನ ಆಳ್ವಿಕೆಯ ವಿಮೋಚನೆಗಾಗಿ ಹೋರಾಡಿದವರ ತ್ಯಾಗ ಮತ್ತು ಬಲಿದಾನವನ್ನು ಸ್ಮರಿಸಲು ಅಂದಿನಿಂದ  ಈ ಪ್ರದೇಶದ ಜಿಲ್ಲೆಗಳಾದ ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು, ಬಳ್ಳಾರಿ, ಕೊಪ್ಪಳ ಮತ್ತು ವಿಜಯನಗರದಲ್ಲಿ ಹೈದರಾಬಾದ್ ವಿಮೋಚನಾ ದಿನದ  (ಸ್ವಾತಂತ್ರ್ಯ ದಿನದ) ಸಂಭ್ರಮವಾಗಿ ಆಚರಿಸಲಾಗುತ್ತದೆ. ಭಾರತಕ್ಕೆ 1947 ರ ಆಗಸ್ಟ್ 15 ರಂದು ಸ್ವಾತಂತ್ರ್ಯ ಲಭಿಸಿದರು,ಹೈದರಾಬಾದ್ ಪ್ರಾಂತ್ಯವು ನಿಜಾಮನ ಆಳ್ವಿಕೆಯಲ್ಲಿತ್ತು ಅದು ಭಾರತದ ಒಕ್ಕೂಟದಲ್ಲಿ ಸೇಪ೯ಡೆಯಾಗಿರಲಿಲ್ಲ  ಅಂದಿನ ಗೃಹ ಮಂತ್ರಿಗಳಾದ  ಸರ್ದಾರ್ ವಲ್ಲಭಭಾಯಿ ಪಟೇಲ್ ರವರ ನಾಯಕತ್ವದಲ್ಲಿ ಈ ಭಾಗದವರಿಗೆ ಮುಕ್ತಿ ಸಿಕ್ಕಿತು ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಮಂಜಪ್ಪ ಸರ, ರಾಥೋಡ್ ಸರ, ಚಿದಾನಂದ ಸರ, ಪರಶುರಾಮ , ರಮೇಶ,, ಧ್ಯಾನೇಶ, ಮಹಾಂತೇಶ, ಗವಿಸಿದ್ದಪ್ಪ, ನಾಗಪ್ಪ, ಬಿಲಾಲ್, ಅಸ್ಲಾಂ, ರಂಜಿತಕುಮಾರ, ನೀಲಕಲಾ ಮೆಡಮ್, ಪದ್ಮಲತಾ ಮೆಡಮ್ ,ಸಂತೋಷಿ ಮೆಡಮ್,  ರಾಜೇಶ ಬಳ್ಳಾರಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!