WhatsApp Image 2024-02-18 at 5.18.47 PM

ಕೋಳಿಪೇಟೆಯಲ್ಲಿ ಒಂದು ಕೋಟಿ ವೆಚ್ಚದಲ್ಲಿ ಮಹಿಳಾ ಶೌಚಾಲಯ ನಿರ್ಮಾಣ : ಗಗನ್ ನೋಟಗಾರ

ಕರುನಾಡ ಬೆಳಗು ಸುದ್ದಿ

ಕುಕನೂರು,18- ಪಟ್ಟಣದ ಕೋಳಿಪೇಟೆಯಲ್ಲಿ ಒಂದು ಕೋಟಿ ವೆಚ್ಚದಲ್ಲಿ ಸುಸಜ್ಜಿತ ಮಹಿಳಾ ಶೌಚಾಲಯ ನಿರ್ಮಾಣ ಮಾಡಲಾಗುತ್ತಿದೆ. ಎಂದು ಪಟ್ಟಣ ಪಂಚಾಯಿತಿ ಸದಸ್ಯ ಗಗನ್ ನೋಟಗಾರ ಹೇಳಿದರು.

ಪಟ್ಟಣದ 7ನೇ ವಾರ್ಡಿನ ಮಹಿಳಾ ಶೌಚಾಲಯವನ್ನು ಭಾನುವಾರ ಪಟ್ಟಣ ಪಂಚಾಯತ್ ಸದಸ್ಯ ಗಗನ್ ನೋಟಗಾರ್ ಚಾಲನೆ ನೀಡಿ ಮಾತನಾಡಿದವರು,ಬಹುದಿನದ ಶೌಚಾಲಯ ಕನಸನ್ನು ನನಸು ಮಾಡಿದ ಸಿಎಂ ಆರ್ಥಿಕ ಸಲಹಗಾರರು ಹಾಗೂ ಶಾಸಕ ಬಸವರಾಜ ರಾಯರಡ್ಡಿಯವರು ಕಳೆದ ಎರಡು ವರ್ಷದ ಹಿಂದೇ ಈ ಕೋಳಿಪೇಟೆಯ ಮಹಿಳಾ ಶೌಚಾಲಯ ಸಮಸ್ಯೆಯನ್ನು ಅರಿತ ಅವರು ಅಂದೆ ಒಂದು ಕೋಟಿ ವೆಚ್ಚದಲ್ಲಿ ಶೌಚಾಲಯ ನಿರ್ಮಾಣ ಮಾಡಿಕೊಡುತ್ತೇನೆ ಎಂದು ಭರವಸೆ ನೀಡಿದರು.

ಇಂದು ಅದು ಕಾರ್ಯರೂಪಕ್ಕೆ ಬಂದಿದೆ. ಸರ್ಕಾರದಿಂದ ಒಂದು ಕೋಟಿ ಎರಡು ಲಕ್ಷ ಹಣ ಮಂಜೂರು ಮಾಡಿ ಗ್ರಾಮೀಣ ಭಾಗದ ಶೌಚಾಲಯ ಸಮಸ್ಯೆಯನ್ನು ನೀಗಿಸಲು ಮುಂದಾಗಿದ್ದಾರೆ ಇಂತಹ 10 ಹಲವಾರು ಕೆಲಸಗಳನ್ನು ಮುಂದಿನ ದಿನಮಾನಗಳಲ್ಲಿ ಶಾಸಕರು ಮಾಡಲಿದ್ದಾರೆ. ಇನ್ನು ಸುಮಾರು 50 ವರ್ಷಗಳ ಕಾಲ ಈ ಶೌಚಾಲಯ ಬಳಕೆಗೆ ಬರಬೇಕು ಆ ರೀತಿ ಕಾಮಗಾರಿ ಸದೃಢ ಮತ್ತು ಸುಸಜ್ಜಿತವಾಗಿ ಮಾಡಿಸಿಕೊಳ್ಳಲಾಗುವುದು. ಉತ್ತಮ ಕಾಮಗಾರಿಗೆ ಪ್ರತಿಯೊಬ್ಬರು ಸಹಕಾರಿಯಾಗರಬೇಕು.

ಈ ಸಂದರ್ಭದಲ್ಲಿ ನಿರ್ಮಿತಿ ಕೇಂದ್ರದ ಇಂಜಿನಿಯರ್ ಮಹದೇವಪ್ಪ ಪತ್ತಾರ್, ಪಪಂ ಮುಖ್ಯ ಅಧಿಕಾರಿ ಸುಬ್ರಮಣ್ಯ, ಹಿರಿಯ ಮುಖಂಡ ನಾರಾಯಣಪ್ಪ ಹರಪನಹಳ್ಳಿ, ಸಿದ್ದಯ್ಯ ಕಳ್ಳಿಮಠ, ಸಂಗಮೇಶ್ ಗುತ್ತಿ, ರೆಹಮಾನ್ ಸಾಬ್ ಮಕ್ಕಪ್ಪನವರ್, ಸಿರಾಜ್ ಕರ್ಮುಡಿ, ಪಟ್ಟಣ ಪಂಚಾಯತಿ ಸದಸ್ಯ ಪ್ರಶಾಂತ್ ಆರಬೇರಳಿನ್, ಬರಮಪ್ಪ ತಳವಾರ್, ರಾಘವೇಂದ್ರ ಕಾತರಕಿ, ಕಳಕಪ್ಪ ಕುಂಬಾರ್, ಈಶಪ್ಪ ಸಬರದ್, ವೆಂಕಟೇಶ್ ಭೋವಿ, ಯಲ್ಲಪ್ಪ ಕಲ್ಮನಿ, ಮಂಜುನಾಥ್ ಯಡಿಯಾಪುರ, ಸೇರಿದಂತೆ ಸ್ಥಳೀಯರು ಕಾಂಗ್ರೆಸ್ ಮುಖಂಡರು ಇತರರು ಉಪಸ್ಥಿತರಿದ್ದರು..

Leave a Reply

Your email address will not be published. Required fields are marked *

error: Content is protected !!