ಪ್ರಧಾನಮಂತ್ರಿಗಳ ಕಾರ್ಯಕ್ರಮ : ಬಸ್ ಸಂಚಾರಕ್ಕೆ ಪರ್ಯಾಯ ಮಾರ್ಗ
ಕರುನಾಡ ಬೆಳಗು ಸುದ್ದಿ
ವಿಜಯನಗರ, 27- ಗೌರವಾನಿತ್ವ ಮಾನ್ಯ ಪ್ರಧಾನಮಂತ್ರಿಗಳಾದ ಸನ್ಮಾನ್ಯ ನರೇಂದ್ರ ಮೋದಿಯವರು ಏಪ್ರೀಲ್ 28 ಮತ್ತು ಏಪ್ರೀಲ್ 29ರಂದು ವಿಜಯನಗರ ಜಿಲ್ಲೆಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಗಣ್ಯರ ಭದ್ರತೆಯ ಹಿತದೃಷ್ಟಿಯಿಂದ ಏಪ್ರೀಲ್ 28ರಂದು ಕೆಎಸ್ಆರ್ಟಿಸಿ ಬಸ್ಗಳ ಸಂಚಾರವನ್ನು ಪರ್ಯಾಯ ಮಾರ್ಗವಾಗಿ ಸಂಚರಿಸಲು ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ಏಪ್ರೀಲ್ 28ರ ಬೆಳಗ್ಗೆ 7 ಗಂಟೆಯಿಂದ ಸಂಜೆ 7 ಗಂಟೆವರೆಗೆ ರೈಲ್ವೆ ನಿಲ್ದಾಣ ರಸ್ತೆ, ಪುನಿತ್ ರಾಜುಕುಮಾರ ಸರ್ಕಲ್, ಕಾಲೇಜ್ ರಸ್ತೆ, ಸಾಯಿಬಾಬಾ ಸರ್ಕಲ್ ಮೂಲಕ ಓಡಾಡುವ ಕೆಎಸ್ಆರ್ಟಿಸಿ ಬಸ್ಗಳ ಸಂಚಾರವನ್ನು ನಿಲ್ಲಿಸುವುದು ಪರ್ಯಾಯ ಮಾರ್ಗವಾಗಿ ಸಾಯಿಬಾಬಾ ಸರ್ಕಲ್ದಿಂದ ಎಪಿಎಂಸಿ ಮೂಲಕ ವಾಲ್ಮೀಕಿ ಸರ್ಕಲ್ನಿಂದ ರಾಮು ಸರ್ಕಲ್ ಮಾರ್ಗವಾಗಿ ಬಸ್ ನಿಲ್ದಾಣ ತಲುಪುವುದು ಹಾಗೂ ಡ್ಯಾಂ ಕಡೆಗೆ ಇದೆ ಮಾರ್ಗವಾಗಿ ಸಂಚರಿಸುವುವಂತೆ ಮಾರ್ಗ ಬದಲಾವಣೆ ಮಾಡಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
