ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಕ್ರಮ : ಸಚಿವ ನಾಗೇಂದ್ರ ರಾಜೀನಾಮೆ ಕುತಂತ್ರದ ಕ್ರಮ
ಕರುನಾಡ ಬೆಳಗು ಸುದ್ದಿ
ಬಳ್ಳರಿ, 6- ಕರ್ನಾಟಕ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಕ್ರಮವಾಗಿ ವಿವಿಧ ಬ್ಯಾಂಕ್ ಖಾತೆಗಳಿಗೆ ನಿಗಮದ ಅಧಿಕಾರಿ ಡೆತ್ ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪ್ರಕರಣದಲ್ಲಿ ಕಾಂಗ್ರೆಸ್ಸ ಸಚಿವ ಬಿ ನಾಗೇಂದ್ರ ಅವರ ಮೇಲೆ ಯಾವುದೇ ವಿನಾಕಾರಣ ದೋಷಾರೋಪಣ ಮಾಡಿ ಅವರ ರಾಜೀನಾಮೆಗೆ ಆಗ್ರಹಿಸುತ್ತಿರುವ ಕುತಂತ್ರದ ಕ್ರಮವನ್ನು ಕರ್ನಾಟಕ ಸಮತ ಸೈನಿಕ ದಳ ಕಲ್ಯಾಣ ಕರ್ನಾಟಕ ವಿಭಾಗೀಯ ಕಾರ್ಯಾಧ್ಯಕ್ಷರು ಹಾಗೂ ಕಾಂಗ್ರೆಸ್ ಮುಖಂಡರು ಕೆ ಪೃಥ್ವಿರಾಜ್ ಮತ್ತು ಕರ್ನಾಟಕ ಸಮತ ಸೈನಿಕದಳದ ಜಿಲ್ಲಾ ಘಟಕವು ಪದಾಧಿಕಾರಿಗಳ ಉಗ್ರವಾಗಿ ಖಂಡಿಸುತ್ತದೆ.
ಮೃತ ಅಧಿಕಾರಿ ಸಚಿವರ ಲಿಖಿತ ಆದೇಶ ಅಥವಾ ಮೌಖಿಕ ಆದೇಶ ನೇರವಾಗಿ ತಮ್ಮೊಂದಿಗೆ ಮಾತನಾಡುವುದರ ಬಗ್ಗೆ ಎಲ್ಲಾದರೂ ಉಲ್ಲೇಖ ಮಾಡಿಲ್ಲ ಎಂದು ಪತ್ರಿಕ ವರದಿಗಳು ಹೇಳುತ್ತಿರುವಾಗ ವಿನಾಕಾರಣ ಊಹಾಪೋಹದ ಆರೋಪ ಗಳನ್ನು ಗು ಲೆಬ್ಬಿಸಿ ಶೋಷಿತ ಜನಾಂಗದ ಅಭಿವೃದ್ಧಿ ಹೊಂದುತ್ತಿರುವ ನಾಯಕ ರನ್ನು ಮೂಲೆಗುಂಪು ಮಾಡುವು ಹುನ್ನಾರಕ್ಕೆ ಸನ್ಮಾನ್ಯ ಮುಖ್ಯಮಂತ್ರಿ ಅವರು ಮಾನ್ಯತೆ ಕೊಡದೆ ಸಚಿವರನ್ನು ಅಧಿಕಾರದಲ್ಲಿ ಮುನ್ನಡೆಸಬೇಕೆಂದು ಕರ್ನಾಟಕ ಸಮತ ಸೈನಿಕ ದಳ ಒತ್ತಾಯ ಮಾಡುತ್ತದೆ ಈ ಮೂಲಕ ಸರ್ಕಾರಕ್ಕೆ ಕರ್ನಾಟಕ ಸಮ ತ ಸೈನಿಕ ದಳ ವಿಭಾಗಿಯ ಕಾರ್ಯಧ್ಯಕ್ಷರು ಕೆ ಪೃಥ್ವಿರಾಜ್ ಮನವಿ ಮಾಡಿಕೊಂಡಿರುತ್ತಾರೆ.
