12 ಕೋಟಿ ರೂಪಾಯಿ ವೆಚ್ಚದ ಚೆಕ್ ಡ್ಯಾಮ್ ನಿರ್ಮಾಣಕ್ಕೆ ಶಾಸಕರಿಂದ ಶಂಕುಸ್ಥಾಪನೆ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ,12- ತಾಲೂಕು ಕರ್ಚಿಗನೂರು ಗ್ರಾಮದಲ್ಲಿ ಕೆಎಂಇಆರ್ಸಿ ಅನುದಾನದ ಯೋಜನೆ ಅಡಿಯಲ್ಲಿ ರಾರಾವಿ ಹಗರಿ ವೇದಾವತಿ ನದಿಗೆ ಕರ್ಚಿಗನೂರು ಇಬ್ರಾಹಿಂಪುರ್ ದರೂರು ಸೇರಿ ಒಟ್ಟು 12 ಕೋಟಿ ರೂಪಾಯಿ ವೆಚ್ಚದ ಚೆಕ್ ಡ್ಯಾಮ್ ನಿರ್ಮಾಣದ ಕಾಮಗಾರಿಯನ್ನು ಶಂಕು ಸ್ಥಾಪನೆಯ ಅಡಿಗಲ್ಲು ಶಾಸಕ ಬಿ ಎಂ ನಾಗರಾಜ ನೆರವೇರಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಬಿಜಿ ಮಂಜುನಾಥ ರೆಡ್ಡಿ ಬಗ್ಗೂರು, ಗ್ರಾಮ ಪಂಚಾಯತ್ ಅಧ್ಯಕ್ಷೆ ನಾಗಮ್ಮ, ಮಲ್ಲಯ್ಯ ಗ್ರಾಮ ಪಂಚಾಯತ್ ಸದಸ್ಯರು, ಮುಖಂಡ ದೊಡ್ಡ ವೀರೇಶ್ ಗೌಡ, ಚಾಣಕನೂರು, ಬಗ್ಗೂರು ಗೌಡ, ಬಗ್ಗೂರು ಮರಿಯಪ್ಪ, ರೇವಣ್ಣ ಶಾಸ್ತ್ರಿ, ಜೆ ಸಿದ್ದರಾಮಯ್ಯ ಗೌಡ, ಚೂಡಿ ರಾಮಣ್ಣ ತಾಳೂರು, ದೇವರೆಡ್ಡಿ, ಯುವ ಕಾಂಗ್ರೆಸ್ ಮುಖಂಡ ಬಿ ಎಂ ಮಣಿಕಂಠ, ನಾಯಕ ಗೊರವರ, ಶ್ರೀನಿವಾಸ, ಬಿ ಉಮೇಶ್ ಗೌಡ ಕೋಟಿ ರೆಡ್ಡಿ, ಪವನ್ ದೇಸಾಯಿ, ಕರ್ಚಿಗನೂರು ಗ್ರಾಮದ ಕಾಂಗ್ರೆಸ್ ಮುಖಂಡರು ಪಾಲ್ಗೊಂಡಿದ್ದರು.
